ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಬಿಎಸ್ ಇ, ಎನ್ ಎಸ್ ಇ ಸೂಚ್ಯಂಕ ಏರಿಕೆಯಾಗುತ್ತಿರುವ ಬಗ್ಗೆ ಮಾರುಕಟ್ಟೆ ನಿಯಂತ್ರಕ (SEBI) ಮತ್ತು ಸೆಕ್ಯುರಿಟೀಸ್ Appellate ಟ್ರಿಬ್ಯೂನಲ್ (SAT) ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ (CJI) ಡಿ.ವೈ.ಚಂದ್ರಚೂಡ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ
ಗುರುವಾರ (ಜುಲೈ 04) ನೂತನ ಎಸ್ ಎಟಿ ಆವರಣವನ್ನು ಉದ್ಘಾಟಿಸಿದ ಸಿಜೆಐ, ಹೆಚ್ಚಿನ ಪ್ರಮಾಣದ ವಹಿವಾಟುಗಳು ಮತ್ತು ಹೊಸ ನಿಯಮಾವಳಿಗಳ ಕಾರಣದಿಂದ ವರ್ಕ್ ಲೋಡ್ ನಿಯಂತ್ರಿಸಲು ಎಸ್ ಎಟಿ ಹೊಸ ಶಾಖೆಗಳನ್ನು ತೆರೆಯಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಉದಾಹರಿಸಿ ಮಾತನಾಡಿದ ಸಿಜೆಐ, ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 80,000 ಅಂಕಗಳ ಗಡಿ ದಾಟಿರುವುದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ನಿಯಂತ್ರಕ ಅಧಿಕಾರಿಗಳು ಸೂಕ್ಷ್ಮವಾಗಿ ನಿಗಾ ಇರಿಸಬೇಕಾದ ಅಗತ್ಯವಿದೆ ಎಂದರು.
ಷೇರುಪೇಟೆಯ ಸೂಚ್ಯಂಕ ಇನ್ನಷ್ಟು ಏರಿಕೆಯಾಗಬಹುದು. ಇದು ಒಳ್ಳೆಯ ಬೆಳವಣಿಗೆ, ನಾನು SEBI ಮತ್ತು SATಯ ಬಗ್ಗೆ ವಿಶ್ವಾಸವಿದೆ. ನಿಮ್ಮ ಗುರಿ ಮುಟ್ಟಿದ ಯಶಸ್ಸಿನ ಬಗ್ಗೆ ಸಂಭ್ರಮಿಸಿ, ಆದರೆ ಇದೇ ಸಂದರ್ಭದಲ್ಲಿ ಬೆನ್ನೆಲುಬು ಸ್ಥಿರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಸಿಜೆಐ ಹೇಳಿದರು.