Advertisement

ಪ್ರಸಾದ್‌ ಹೇಳಿದಂತೆ ಚುನಾವಣೆ ರಾಜಕೀಯ ಮಾಡಿಲ್ಲ

09:06 PM Nov 02, 2019 | Team Udayavani |

ಎಚ್‌.ಡಿ.ಕೋಟೆ: ನಾವು ಅಭಿವೃದ್ಧಿಗಾಗಿ ರಾಜಕಾರಣ ಮಾಡಿದವರೇ ಹೊರತು, ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದಂತೆ ಚುನಾವಣೆಗಾಗಿ ರಾಜಕಾರಣ ಮಾಡಿದವರಲ್ಲ ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ತಿಳಿಸಿದರು. ಪಟ್ಟಣದ ಮಿನಿವಿಧಾನಸೌಧದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವಗಲೂ ಅಭಿವೃದ್ಧಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ತಿರುಗೇಟು ನೀಡಿದರು.

Advertisement

ಇತ್ತೀಚೆಗೆ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಸಂವಾದ ಕಾರ್ಯಕ್ರಮವೊಂದರಲ್ಲಿ “ಕೇವಲ ಎರಡು ಹೋಬಳಿಗಳಿಗಷ್ಟೇ ಸೀಮಿತವಾಗಿ ಸರಗೂರನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವುದು ಸರಿಯಲ್ಲ. ಜೊತೆಗೆ ಅಧಿಕಾರಾವಧಿಯಲ್ಲಿ ಘೋಷಿಸದೇ ಚುನಾವಣೆ ಘೋಷಣೆ ಅವಧಿಯಲ್ಲಿ ಮತ ಪಡೆಯುವ ಸಲುವಾಗಿ ಘೋಷಿಸಿದ್ದಾರೆ’ ಎಂಬ ಹೇಳಿಕೆಯನ್ನು ಧ್ರುವನಾರಾಯಣ ಅಲ್ಲಗೆಳೆದರು.

ಸರಗೂರು ಜನರ 35 ವರ್ಷದ ಹೋರಾಟದ ಫ‌‌ಲವಾಗಿ ತಾಲೂಕು ಘೋಷಣೆಯಾಗಿದೆ. ನಂಜುಂಡಪ್ಪ ವರದಿಯಂತೆ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಹಿಂದುಳಿದ ಎಚ್‌.ಡಿ.ಕೋಟೆ ತಾಲೂಕು 1618 ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣ ಹೊಂದಿ ಇತರೆ ತಾಲೂಕುಗಳಿಗಿಂತ 2-3 ಪಟ್ಟು ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಎಸ್ಸಿ ಎಸ್ಟಿ ಬಹುಸಂಖ್ಯೆಯಲ್ಲಿರುವ ಉದ್ದೇಶದಿಂದ ಸರಗೂರನ್ನು ತಾಲೂಕು ಮಾಡಲಾಗಿದೆ ಎಂದರು.

ಶಾಸಕ ಅನಿಲ್‌ ಚಿಕ್ಕಮಾದು, ಬೋವಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್‌, ಕಾಂಗ್ರೆಸ್‌ ಮುಖಂಡ ಹಿರೇಹಳ್ಳಿ ಸೋಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next