ಲಕ್ನೋ: ಇಲ್ಲಿನ ಹಜರತ್‌ಗಂಜ್‌ನ ಮೀರಾಬಾಯಿ ಗೆಸ್ಟ್ ಹೌಸ್ ಬಳಿ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಬುಧವಾರ ಶವವಾಗಿ ಪತ್ತೆಯಾಗಿದ್ದು , ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಆಹಾರ ಮತ್ತು ನಾಗರಿಕ ಇಲಾಖೆಯ ಆಯುಕ್ತರಾಗಿದ್ದ ಕರ್ನಾಟಕ ಕೆಡರ್‌ನ 2007 ನೇ ಬ್ಯಾಚ್‌ನ ಅಧಿಕಾರಿಯಾಗಿದ್ದ 37 ರ ಹರೆಯದ ತಿವಾರಿ ನಿಗೂಢವಾಗಿ ಸಾವನ್ನಪ್ಪಿದವರು.
ತಿವಾರಿ ಅವರು 4 ವಾರ ರಜೆ ಮೇಲೆ ವಿಶೇಷ ತರಬೇತಿಗೆಂದು ತೆರಳಿದ್ದರು ಎಂದು ವರದಿಯಾಗಿದೆ. ದುರದೃಷ್ಟವೆಂದರೆ ಇಂದು ಬುಧವಾರ ಅವರ 36 ನೇ ಹುಟ್ಟು ಹಬ್ಬವೂ ಆಗಿತ್ತು.
ಸರ್ಕಾರಿ ಗೆಸ್ಟ್ ಹೌಸ್‌ನ 50 ಕಿ,ಮೀ. ದೂರದಲ್ಲಿ ಶವ ಪತ್ತೆಯಾಗಿದ್ದು,ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ತಂಡ ದೌಡಾಯಿಸಿದ್ದು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
Related Articles
ಕೌಟುಂಬಿಕವಾಗಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.