Advertisement
ಹೆಂಗವಳ್ಳಿ ಪಂಚಾಯತ್ ವ್ಯಾಪ್ತಿಯ ತೊಂಭತ್ತು ಶಾಲಿಗುಡ್ಡೆ ಬಳಿ ಕಾರ್ಯಾ ಚರಿಸುತ್ತಿರುವ ಗ್ರಾಮಕರಣಿಕರ ಕಚೇರಿ ಕಂದಾಯ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಗ್ರಾಮಕರಣಿಕರ ಕಚೇರಿ ಹಾಗೂ ವಸತಿ ಗೃಹ ಇದೆ. ಈ ಕಟ್ಟಡವು 5 ವರ್ಷಗಳ ಹಿಂದೆಯೇ ಶಿಥಿಲಗೊಂಡು ದುರಸ್ತಿಯಾಗದೇ ಬೀಳುವ ಹಂತಕ್ಕೆ ತಲುಪಿತ್ತು. ಆ ಸಂದರ್ಭದಲ್ಲಿ ವಸತಿಗೃಹದ ಭಾಗ ಮಾತ್ರ ದುರಸ್ತಿ ಮಾಡಲಾಗಿತ್ತು.
ಕಟ್ಟಡದ ಒಂದು ಭಾಗವು ಶಿಥಿಲಗೊಂಡು ಕೆಲವೆಡೆ ಮೇಲಿನ ಮಾಡು ಹೋಗಿದೆ. ಕಟ್ಟಡದ ಒಳ ಭಾಗದಲ್ಲೇ ಮುರಿದು ಬಿದ್ದ ಪಕ್ಕಾಸು, ಹೆಂಚಿನ ರಾಶಿಗಳು ಇನ್ನೂ ಕೂಡ ಹಾಗೆಯೇ ಇವೆ. ಕಿಟಿಕಿ, ಬಾಗಿಲುಗಳು ಮುರಿದು ಹೋಗಿದ್ದು ಪ್ರಾಣಿಗಳ ವಾಸಸ್ಥಳವಾಗಿದೆ. ಸುದಿನ ವರದಿ
ಹೆಂಗವಳ್ಳಿಯ ಈ ಗ್ರಾಮ ಕರಣಿಕರ ಕಚೇರಿಯು ಕಳೆದ 3 ವರ್ಷಗಳಿಂದ ದುರಸ್ತಿಯಾಗದ ಬಗ್ಗೆ, ಬೀಳುವ ಸ್ಥಿತಿಯ ಕುರಿತಂತೆ “ಉದಯವಾಣಿ ಸುದಿನ’ವು ಜ. 24ರಂದು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.
Related Articles
ಮಳೆಗಾಲದಲ್ಲಿ ಮಳೆ ನೀರು ಕಟ್ಟಡದ ಒಳಭಾಗದಲ್ಲಿ ಶೇಖರಣೆಯಾಗುತ್ತಿತ್ತು. ಪಕ್ಕದ ಕಚೇರಿಯ ಗೋಡೆಗಳು ತೇವಾಂಶದಿಂದ ಕೂಡಿರುತ್ತಿದ್ದವು. ಮಳೆ ನೀರು ನಿಂತ ಪರಿಣಾಮ ಈಗ ಹಳೆಯ ಗೋಡೆಯು ಕೂಡ ಕುಸಿದು ಬೀಳುವ ಹಂತ ತಲುಪಿದೆ. ಈ ಬಾರಿಯಾದರೂ ಮಳೆಗಾಲಕ್ಕೆ ಮುನ್ನ ಈ ಕಟ್ಟಡವನ್ನು ದುರಸ್ತಿ ಮಾಡಲಿ ಎನ್ನುವುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement
ಪ್ರಾಕೃತಿಕ ವಿಕೋಪ ನಿಧಿ ಬಳಕೆಈ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಆದರೆ ಸದ್ಯಕ್ಕೆ ದುರಸ್ತಿಗೆ ಅನುದಾನ ಲಭ್ಯವಿರದ ಕಾರಣ, ಪ್ರಾಕೃತಿಕ ವಿಕೋಪ ನಿಧಿಯಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಹೆಂಗವಳ್ಳಿ ಪಂಚಾಯತ್ ಕಚೇರಿಯಲ್ಲಿಯೂ ಗ್ರಾಮ ಕರಣಿಕರ ಕಚೇರಿಗೆ ಗ್ರಾ.ಪಂ. ವ್ಯವಸ್ಥೆ ಮಾಡಿಕೊಡಬಹುದು.
– ತಿಪ್ಪೇಸ್ವಾಮಿ, ತಹಶೀಲ್ದಾರ್,ಕುಂದಾಪುರ