Advertisement

ಭಾರತದಲ್ಲೂ ಲಸಿಕೆಗೆ ಒಪ್ಪಿಗೆ: ಆಕ್ಸ್‌ಫ‌ರ್ಡ್‌-ಆಸ್ಟ್ರಾಜೆನೆಕಾ ಲಸಿಕೆಗೆ ತಜ್ಞರ ಸಮ್ಮತಿ

08:11 AM Jan 02, 2021 | Team Udayavani |

ಹೊಸದಿಲ್ಲಿ: ನಿರೀಕ್ಷೆಯಂತೆಯೇ 2021 ಲಸಿಕೆಯ ಭರವಸೆಯೊಂದಿಗೆ ಆರಂಭವಾಗಿದೆ. ಪುಣೆಯ ಸೀರಮ್‌ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ ಆಕ್ಸ್‌ ಫ‌ರ್ಡ್‌-ಆಸ್ಟ್ರಾಜೆನೆಕಾ ಲಸಿಕೆ ಕೋವಿಶೀಲ್ಡ್‌ಗೆ ಭಾರತ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ನೇಮಿಸಿದ್ದ ಪರಿಶೀಲನ ಸಮಿತಿ ಒಪ್ಪಿಗೆ ನೀಡಿದೆ. ಕೆಲವು ಷರತ್ತುಗಳ ಜತೆಗೆ ತುರ್ತು ಬಳಕೆಗೆ ಅವಕಾಶ ನೀಡಬಹುದು ಎಂದು ಹೇಳಿದೆ. ಅಲ್ಲದೆ ಪೂರ್ಣವಾಗಿ ಸ್ವದೇಶಿ ಸಂಶೋಧನೆಯೊಂದಿಗೆ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್‌ಗೂ ಇದೇ ಸಮಿತಿ ಸದ್ಯವೇ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಶುಕ್ರವಾರ ನಡೆದ ತಜ್ಞರ ಸಭೆಯಲ್ಲಿ ಈ ಎರಡೂ ಲಸಿಕೆಗಳ ಬಗ್ಗೆ ಚರ್ಚಿಸಲಾಗಿದೆ.

Advertisement

ರಾಯಿಟರ್ಸ್‌ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಕೋವಿಶೀಲ್ಡ್‌ಗೆ ಡಿಸಿಜಿಐ ಕೂಡ ಒಪ್ಪಿಗೆ ನೀಡಿದ್ದು, ಅಧಿಕೃತ ಘೋಷಣೆಯಾಗಬೇಕಿದೆ. ಸೀರಮ್‌ ಸಂಸ್ಥೆ ಶನಿವಾರ ಬೆಳಗ್ಗೆಯಿಂದಲೇ ಶೀತಲಾಗಾರಗಳಿಗೆ ಲಸಿಕೆಯನ್ನು ಸಾಗಿಸಲಿದೆ ಎಂದೂ ಅದು ಹೇಳಿದೆ. ಮುಂದಿನ ಬುಧವಾರದಿಂದಲೇ ದೇಶದಲ್ಲಿ ಲಸಿಕೆ ನೀಡುವ ಸಂಭವವಿದೆ. ಬೇರೆ ಲಸಿಕೆಗಳಿಗೆ ಹೋಲಿಕೆ ಮಾಡಿದರೆ ಆಕ್ಸ್‌ಫ‌ರ್ಡ್‌-ಆಸ್ಟ್ರಾಜೆನೆಕಾ ಬೆಲೆ ತೀರಾ ಕಡಿಮೆ. ಹೀಗಾಗಿ ಅಭಿವೃದ್ಧಿಶೀಲ ಮತ್ತು ಬಡ ದೇಶಗಳ ಪಾಲಿಗೆ ಈ ಲಸಿಕೆ ಸಂಜೀವಿನಿಯಾಗಬಹುದು.

ಇಂದು ದೇಶಾದ್ಯಂತ ಡ್ರೈ ರನ್‌
ಕೇಂದ್ರ ಸರಕಾರದ ಸೂಚನೆಯಂತೆ ಶನಿವಾರ ದೇಶದ ಎಲ್ಲ ರಾಜ್ಯಗಳು ಲಸಿಕೆ ವಿತರಣೆಯ ಪ್ರಾತ್ಯಕ್ಷಿಕೆ ನಡೆಸಲಿವೆ. ಲಸಿಕೆ ನೀಡುವುದೊಂದನ್ನು ಬಿಟ್ಟು, ಉಳಿದೆಲ್ಲ ಪ್ರಕ್ರಿಯೆಗಳು ನಡೆಯಲಿವೆ. ಜತೆಯಲ್ಲಿ ಕೋ-ವಿನ್‌ ಆ್ಯಪ್‌ ಅನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

16 ಆರೋಗ್ಯ ಕೇಂದ್ರಗಳಲ್ಲಿ ಡ್ರೈ ರನ್‌
ರಾಜ್ಯದ ಐದು ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಬೆಳಗ್ಗೆ ಕೊರೊನಾ ಲಸಿಕೆಯ ಡ್ರೈ ರನ್‌ ಜರಗಲಿದೆ. ಬೆಂಗಳೂರು, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳ ತಲಾ 3 ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, ಒಂದು ಆರೋಗ್ಯ ಕೇಂದ್ರದಲ್ಲಿ ತಲಾ ಐವರು ಲಸಿಕೆ ಸಿಬಂದಿ ಇರಲಿದ್ದಾರೆ. ತಲಾ 25 ಪ್ರಾತ್ಯಕ್ಷಿಕೆ ಫ‌ಲಾನುಭವಿಗಳನ್ನು ನಿಗದಿಪಡಿಸಲಾಗಿದೆ. ಡ್ರೈ ರನ್‌ ಈ ಕುರಿತು ಶುಕ್ರವಾರ ಆರೋಗ್ಯ ಇಲಾಖೆಯ 100 ಸಿಬಂದಿಗೆ ಕೇಂದ್ರ ಸರಕಾರ ತರಬೇತಿ ನೀಡಿದೆ.

ಶುಕ್ರವಾರ ಆರೋಗ್ಯ ಸಿಬಂದಿಗೆ ತರಬೇತಿ ನೀಡಲಾಗಿದೆ. ಶನಿವಾರ ಬೆಳಗ್ಗೆ ಪ್ರತೀ ಜಿಲ್ಲೆಯ ತಲಾ ಒಂದು ಪ್ರಾಥಮಿಕ, ತಾಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗಳಲ್ಲಿ ಡ್ರೈ ರನ್‌ ನಡೆಯಲಿದೆ. ಲಸಿಕೆ ಬಂದ ಕೂಡಲೇ ಹಂಚಲು ಇದು ನೆರವಾಗಲಿದೆ.
– ಡಾ| ಕೆ.ಸುಧಾಕರ್‌,  ಆರೋಗ್ಯ, ವೈದ್ಯಕೀಯ ಸಚಿವ

Advertisement

ಎಷ್ಟು ಲಸಿಕೆ ಸಿದ್ಧ?
7.5 ಕೋಟಿ  ಜನವರಿ ಮೊದಲ ವಾರಾಂತ್ಯಕ್ಕೆ 10 ಕೋಟಿ

2.30 ಲಕ್ಷ-ಲಸಿಕೆ ನೀಡುವವರು 51 ಸಾವಿರ- ಲಸಿಕೆ ಕೇಂದ್ರಗಳು

ಲಸಿಕೆಯ ದರ
ಸರಕಾರಕ್ಕೆ: ಡೋಸ್‌ಗೆ 219 ರೂ.
ಪ್ರತೀ ವ್ಯಕ್ತಿಗೆ 438 ರೂ. ಖಾಸಗಿ: ಪ್ರತೀ ವ್ಯಕ್ತಿಗೆ 700ರಿಂದ 800 ರೂ.

Advertisement

Udayavani is now on Telegram. Click here to join our channel and stay updated with the latest news.

Next