Advertisement

ಅಧಿಕಾರಿಗಳೇ ಇನ್ನು ದುಭಾಷಿ

06:00 AM Aug 23, 2018 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿದೇಶಗಳಿಗೆ ಪ್ರಯಾಣಿಸಿದಾಗ ಅಥವಾ ದೇಶದಲ್ಲೇ ವಿವಿಧ ದೇಶಗಳ ಗಣ್ಯರೊಂದಿಗೆ ಸಂವಾದ ನಡೆಸುವಾಗ ಹಿಂದಿಯಲ್ಲೇ ಮಾತನಾಡಲು ಆದ್ಯತೆ ನೀಡುತ್ತಿರುವುದರಿಂದ ದುಭಾಷಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಐಎಫ್ಎಸ್‌ ಅಧಿಕಾರಿಗಳು ದುಭಾಷಿಯೂ ಆಗಿ ಕಾರ್ಯನಿರ್ವಹಿಸುವ ಬಗ್ಗೆ ವಿದೇಶಾಂಗ ಸಚಿವಾಲಯ ಒಲವು ವ್ಯಕ್ತಪಡಿಸಿದೆ.

Advertisement

ಇದಕ್ಕೆ ಪೂರಕವಾಗಿ ಇಬ್ಬರು ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ದುಭಾಷಿಯೂ ಆಗಿ ಕೆಲಸ ಮಾಡಲು ಮೊದಲ ಬಾರಿಗೆ ಅನುಮೋದನೆ ನೀಡಿದೆ. ಇನ್ನೊಂದೆಡೆ ರಷ್ಯನ್‌, ಫ್ರೆಂಚ್‌, ಅರೇಬಿಕ್‌ ಮತ್ತು ಸ್ಪಾನಿಶ್‌ ಭಾಷೆಗಳನ್ನು ಕಲಿಯುವುದಕ್ಕಾಗಿ ಐಎಫ್ಎಸ್‌ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ.  ಸದ್ಯ ಮ್ಯಾಂಡರಿನ್‌ ಭಾಷೆಯಲ್ಲಿ ಪರಿಣಿತಿ ಇರುವ ಐಎಫ್ಎಸ್‌ ಅಧಿಕಾರಿಗಳನ್ನು ದುಭಾಷಿಯಾಗಿ ಬಳಸಿಕೊಳ್ಳಲಾಗುತ್ತಿದೆ. ವುಹಾನ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿ ವೇಳೆ ದುಭಾಷಿಯಾಗಿ ಐಎಫ್ಎಸ್‌ ಅಧಿಕಾರಿ ಮಧುಸೂಧನ್‌ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next