Advertisement

ಕೇರಳ ಜಡಿಮಳೆ: ಮತ್ತೆ 12 ಜೀವ ಬಲಿ, ಮೃತರ ಸಂಖ್ಯೆ 79ಕ್ಕೆ ಏರಿಕೆ

11:37 AM Aug 16, 2018 | udayavani editorial |

ತಿರುವನಂತಪುರ: ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ, ಭೂ ಕುಸಿತ, ಪ್ರವಾಹಕ್ಕೆ ಮತ್ತೆ 12 ಜೀವ ಬಲಿಯಾಗಿರುವುದಾಗಿ ಇಂದು ಗುರುವಾರದ ವರದಿ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಮಳೆ, ಭೂಕುಸಿತ, ಪ್ರವಾಹ, ನೆರೆ ಮುಂತಾಗಿ ಸಂಭವಿಸಿರುವ ದುರಂತಗಳಿಗೆ ಬಲಿಯಾದವರ ಸಂಖ್ಯೆ 79ಕ್ಕೇರಿದೆ. 

Advertisement

ಕಳೆದ ಆಗಸ್ಟ್‌ 8ರಿಂದ ರಾಜ್ಯದಲ್ಲಿ ಆರಂಭಗೊಂಡಿದ್ದ ಜಡಿ ಮಳೆ ಇನ್ನೂ ಮುಂದುವರಿದಿದ್ದು ಈ ಶನಿವಾರದ ತನಕವೂ ಈ ಸ್ಥಿತಿ ಹೀಗೆಯೇ ಉಳಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ, ಪರಿಹಾರ ಒದಗಿಸುವಿಕೆಯನ್ನು ಚುರುಕುಗೊಳಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದ್ದಾರೆ. 

ಪ್ರಧಾನಿ ಮೋದಿ ಅವರು ಇಂದು ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನೂ ಫೋನಿನಲ್ಲಿ ಮಾತನಾಡಿಸಿ ರಾಜ್ಯದಲ್ಲಿ ತಾಜಾ ಸ್ಥಿತಿಗತಿಯನ್ನು ವಿಚಾರಿಸಿದ್ದಾರೆ. 

“ನಾವಿಂದು ಕೇರಳದಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದೇವೆ; ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು  ಚುರುಕುಗೊಳಿಸುವಂತೆ ರಕ್ಷಣಾ ಸಚಿವಾಲಯವನ್ನು ಕೇಳಿಕೊಂಡಿದ್ದೇನೆ. ಕೇರಳ ಜನರ ಸುರಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. 

Advertisement

ನಿರಂತರ ಜಡಿ ಮಳೆ, ಪ್ರವಾಹ, ಭೂಕುಸಿತದಿಂದ ತತ್ತರಿಸುತ್ತಿರುವ ಕೇರಳದ ಎಲ್ಲ 14 ರಾಜ್ಯಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು ಪರಿಸ್ಥಿತಿ ಗಂಭೀರವಿದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next