Advertisement

ಆರರಿಂದ ಎಂಟು ವಾರಗಳು ಲಾಕ್ ಡೌನ್ ಮಾಡುವುದು ಉತ್ತಮ : ಡಾ. ಬಲರಾಮ್ ಭಾರ್ಗವ್

04:32 PM May 12, 2021 | Team Udayavani |

ನವ ದೆಹಲಿ : ದೇಶದಲ್ಲಿ ರೂಪಾಂತರಿ ಸೋಂಕು ಪ್ರಭಾವ ದಿನ ನಿತ್ಯ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚು ಸೊಂಕಿನ ಹೊಸ ಪ್ರಕರಣಗಳು ದಾಖಲಾಗತ್ತಿರುವ ಜಿಲ್ಲೆಗಳಲ್ಲಿ ಇನ್ನೂ ಆರರಿಂದ  ಎಂಟು ವಾರಗಳ ಕಠಿಣ ಲಾಕ್ ಡೌನ್ ಮಾಡುವುದು ಉತ್ತಮ ಎಂದು ಐ ಸಿ ಎಮ್ ಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ನ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಭಾರ್ಗವ್, ದಿನದ ಒಟ್ಟು ಕೋವಿಡ್ ಪರೀಕ್ಷೆಗಳಲ್ಲಿ 10 ಶೇಕಡಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ಕಂಡು ಬರುತ್ತಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ನನ್ನು ಮುಂದುವರಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ಜಾಮೀನು ಅರ್ಜಿ ವಜಾ

ಪ್ರಸ್ತುತ, ಭಾರತದ 718 ಜಿಲ್ಲೆಗಳಲ್ಲಿ ಮೂರು ನಾಲ್ಕು ಜಿಲ್ಲೆಗಳಲ್ಲಿ ಟೆಸ್ಟ್ ಪಾಸಿಟಿವಿಟಿ ರೇಟ್ ಶೇಕಡಾ 10 ಕ್ಕಿಂತ ಹೆಚ್ಚಿದೆ, ಇದರಲ್ಲಿ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರು ನಗರ ಒಳಗೊಂಡಿವೆ.

ಇಡೀ  ದೇಶ ಕೋವಿಡ್ ಸೋಂಕಿನ ಬಿಕ್ಕಟ್ಟಿಗೆ ಸಿಲುಕಿದೆ. ನಿರ್ಧಾರಗಳು ಕಾರ್ಯ ರೂಪಕ್ಕೆ ಬರುವಲ್ಲಿ ಎಲ್ಲವೂ ವಿಳಂಬವಾಗುತ್ತಿದೆ. ಎಲ್ಲಾ ವಿಚಾರಗಳಲ್ಲಿ ಸಣ್ಣ ಮಟ್ಟಿನ ಶಿಫಾರಸ್ಸು ನೀಡಲು ಕೂಡ ಸರ್ಕಾರ ವಿಳಂಬ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಹೀಗೆ ಆಗಬಾರದು ಎಂದು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಅವರು ಟೀಕೆ ಮಾಡಿದ್ದಾರೆ.

Advertisement

ಕೋವಿಡ್ 19 ಕುರಿತ ರಾಷ್ಟ್ರೀಯ ಕಾರ್ಯಪಡೆಯ ಏಪ್ರಿಲ್ 15 ರ ಸಭೆಯು ಶೇಕಡಾ 10 ರಷ್ಟು ಪಾಸಿಟಿವಿಟಿ ರೇಟ್ ಹೆಚ್ಚಿನದನ್ನು ಹೊಂದಿರುವ ಪ್ರದೇಶಗಳನ್ನು ಲಾಕ್ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇನ್ನು, ಏಪ್ರಿಲ್ 20 ರಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಲಾಕ್‌ ಡೌನ್ ನನ್ನು “ಕೊನೆಯ ಅಸ್ತ್ರ”ವಾಗಿ ಬಳಸಬೇಕು ಮತ್ತು ಹೆಚ್ಚು ಸೋಂಕು ಕಂಡು ಬರುತ್ತಿರುವ ಪ್ರದೇಶಗಳನ್ನು “ಕಂಟೈನ್ ಮೆಂಟ್ ವಲಯ” ಗಳನ್ನಾಗಿ ಪರಿವರ್ತಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪುಗೂಡುವುದನ್ನು ಮಾಡಬಾರದು, ಮಾಸ್ಕ್, ಸ್ಯಾನಿಟೈಸರ್ ನನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದರು.

ಮೋದಿಯವರ ಈ ಭಾಷಣಕ್ಕೆ ಪ್ರತಿಕ್ರಿಯಿಸಿದ ಭಾರ್ಗವ್,  ಕೋವಿಡ್ 19 ರ ಸಮಯದಲ್ಲಿ ಸಾಮೂಹಿಕ ಒಗ್ಗೂಡುವಿಕೆ ಇರಬಾರದು ಎನ್ನುವುದು ಭಾರತದಲ್ಲಿ ಮಾತ್ರವಲ್ಲ ಎಲ್ಲಾ ಕಡೆಯಲ್ಲಿಯೂ ಪಾಲಿಸಬೇಕಾದದ್ದು, “ಇದು ಸಾಮಾನ್ಯ ಜ್ಞಾನ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸ್ಟಂಪ್ ಹಿಂದಿನಿಂದ ಧೋನಿ ಸಲಹೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಕುಲದೀಪ್ ಯಾದವ್

Advertisement

Udayavani is now on Telegram. Click here to join our channel and stay updated with the latest news.

Next