Advertisement
ಪಾಲಿಕೆ ನಿಯಮಗಳ ಪ್ರಕಾರ ಯಾವುದೇ ಆಸ್ತಿದಾರ ಮನೆ ನಿರ್ಮಿಸಬೇಕಾದರೆ ಸೆಟ್‌ಬ್ಯಾಕ್ ಜಾಗ ಎಂದು ಸುತ್ತಲೂ ಮೂರು ಅಡಿ ಬಿಟ್ಟು ಮನೆ ಕಟ್ಟಬೇಕು. ಪಾಲಿಕೆ ನಿಯಮಗಳ ಪ್ರಕಾರ ಮನೆ ನಿರ್ಮಿಸುಂತೆ ನೆರೆ ಮನೆಯವರು ಹೇಳಿದ ಕಾರಣಕ್ಕೆ ಆಕ್ರೋಶಗೊಂಡ ಪಕ್ಕದ ಆಸ್ತಿ ಮಾಲೀಕ ತಾಯಿ ಮಗನ ಮೇಲೆ ಹಲ್ಲೆ ಮಾಡಿಸಿದ್ದಾರೆ.
Related Articles
Advertisement
ಈ ನಡುವೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆ ನಿರ್ಮಾಣ ಕಾಮಗರಿಗಾಗಿ ದೇವಸ್ವಿ ಅವರು ಲಾರಿಯಲ್ಲಿ ಮರಳು ತರಿಸಿದ್ದರು. ಈ ವೇಳೆ ಮನೆ ಬಳಿ ಮರಳು ಲಾರಿ ಅಡ್ಡಗಟ್ಟಿದ ರಾಜು, ಮರಳು ಸುರಿಯದಂತೆ ಲಾರಿ ಚಾಲಕನನ್ನು ಬೆದರಿಸಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ದೇವಸ್ವಿ ಹಾಗೂ ಆತನ ಸಹಚರರಾದ ಜಾನ್, ಬಾಬು ಅವರು, ರಾಜುವನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಾಜು ಹಾಗೂ ದೇವಸ್ವಿ ಜತೆಗಿದ್ದವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಆಕ್ರೋಶಗೊಂಡ ದೇವಸ್ವಿ ಮತ್ತಿತರರು ರಾಜು ಮನೆಯ ಕಾಂಪೌಂಡ್ ಹಾರಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಗನ ರಕ್ಷಣೆಗೆ ಬಂದ ತಾಯಿ ಲಕ್ಷ್ಮೀಬಾಯಿ ಮೇಲೂ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾ ವಾಳಿಗಳನ್ನು ರಾಜು ಪುತ್ರಿ ಮೊಬೈಲ್‌ನಲ್ಲಿ ಸೆರೆಹಿಡಿದ್ದರು. ಈ ಸಂಬಂಧ ದೇವಸ್ವಿ ಹಾಗೂ ಆತನ ಬೆಂಬಲಿಗರ ವಿರುದ್ಧ ರಾಜು ಹಲ್ಲೆ ಪ್ರಕರಣ ದಾಖಲಿಸಿದ್ದರು.
ಹಲ್ಲೆಗೊಳಗಾಗಿದ್ದ ರಾಜು ನೀಡಿದ್ದ ದೂರನ್ನು ಆಧರಿಸಿ ಮತ್ತು ಮೊಬೈಲ್ ದೃಶ್ಯಾವಳಿಗಳನ್ನು ವೀಕ್ಷಿಸಿದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ದೇವಸ್ವಿ ಅವರು ನಿಯಮ ಉಲ್ಲಂ ಸಿ ಮನೆ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಬಿಬಿಎಂಪಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.