Advertisement

ಮಾರ್ಗದರ್ಶಕರಾಗಿ, ಪೀಡಕರಾಗಬೇಡಿ

06:25 AM Jan 29, 2018 | Harsha Rao |

ಕೋಲ್ಕತಾ: ಕಾಂಗ್ರೆಸ್‌ನ ಹಿರಿಯ ನಾಯಕರು ಪಕ್ಷದ ನಂಬಿಕಸ್ಥ ಸಲಹೆಗಾರರಂತೆ ವರ್ತಿಸಬೇಕೇ ಹೊರತು ಸಮಸ್ಯೆ ತಂದೊಡ್ಡುವವ ರಂತೆ ವರ್ತಿಸಬಾರದು ಎಂದು ಕೇಂದ್ರದ ಮಾಜಿ ಸಚಿವ ಜೈರಾಮ್‌ ರಮೇಶ್‌ ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಮುನ್ನವೇ ಪಕ್ಷದಲ್ಲಿ ಯುವನಾಯಕರು ಮುಂಚೂಣಿ ಹುದ್ದೆಗಳಲ್ಲಿ ಇರಬೇಕು. ಹಿರಿಯರಾ ದವರು ಇಂಥ ನಾಯಕರಿಗೆ ಮಾರ್ಗದರ್ಶಕರಾಗಬೇಕೇ ಹೊರತು, ಪೀಡಕರಾಗಬಾರದು ಎಂದು ಖಡಕ್‌ ಮಾತುಗಳಲ್ಲಿ ಅವರು ಸಲಹೆ ನೀಡಿದ್ದಾರೆ.

Advertisement

ಕೋಲ್ಕತಾದಲ್ಲಿ ಮಾತನಾಡಿದ ಜೈರಾಂ ಅವರು, ಪಕ್ಷ ಉತ್ತಮ ಸ್ಥಿತಿಯತ್ತ ಹಿಂತಿರುಗುತ್ತಿದೆ ಎನ್ನುವು ದಕ್ಕೆ ಗುಜರಾತ್‌ ಫ‌ಲಿತಾಂಶವೇ ಸಾಕ್ಷಿ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ದ್ದಾರೆ. ಗುಜರಾತ್‌ ಚುನಾವಣೆಗೆ ಮುಂಚೆ ಇದ್ದ ರಾಹುಲ್‌ಗ‌ೂ, ಚುನಾವಣೆಯ ನಂತರದ ರಾಹುಲ್‌ಗ‌ೂ ವ್ಯತ್ಯಾಸವಿದೆ ಎಂದು ಪ್ರತಿಪಾದಿಸಿದ್ದಾರೆ.

ಸಚಿನ್‌ ಪೈಲಟ್‌, ಗೌರವ್‌ ಗೊಗೊಯ್‌, ಜ್ಯೋತಿರಾಧಿತ್ಯ ಸಿಂಧಿಯಾ, ಸುಷ್ಮಿತಾ ದೇವ್‌ ಸೇರಿದಂತೆ ಅನೇತ ಯುವನಾಯಕರು ಪಕ್ಷದಲ್ಲಿ ದ್ದಾರೆ ಎಂದೂ ಜೈರಾಂ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಹೆಚ್ಚಿನ ಸಮಯವನ್ನು ಗುಜರಾತ್‌ನಲ್ಲಿಯೇ ಕಳೆದಿದ್ದಾರೆ ಎಂದರೆ ಅವರು ಫ‌ಲಿ ತಾಂಶದ ಬಗ್ಗೆ ಒತ್ತಡಕ್ಕೆ ಒಳಗಾಗಿದ್ದರು ಎನ್ನುವುದು ಸ್ಪಷ್ಟ. ಅಂತಿಮವಾಗಿ ಬಿಜೆಪಿಗೆ 99 ಸ್ಥಾನ ಬರುವಂತೆ ಮಾಡಿದ್ದು ಪಕ್ಷದ ಸಾಧನೆಯೇ ಸರಿ ಎಂದಿದ್ದಾರೆ ರಮೇಶ್‌.

Advertisement

Udayavani is now on Telegram. Click here to join our channel and stay updated with the latest news.

Next