Advertisement

ಸಲ್ಲೇಖನ ವ್ರತ ಸ್ವೀಕಾರ: ಆರ್ಯಿಕಾ ಮಾತಾಜಿ ಸಮಾಧಿ ಮರಣ

04:03 AM Mar 05, 2019 | |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕದ ನೇತೃತ್ವ
ವಹಿಸಿದ್ದ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರ ಮುನಿಸಂಘದಲ್ಲಿದ್ದ ಆರ್ಯಿಕಾ ಹೀರಕ್‌ಮತಿ ಮಾತಾಜಿ (87) ರವಿವಾರ ವೇಣೂರಿನಲ್ಲಿರುವ ಬಾಹುಬಲಿ ಕ್ಷೇತ್ರದಲ್ಲಿ ಸಲ್ಲೇಖನ ವ್ರತ ಧಾರಣೆ ಮಾಡಿದ್ದು, ಸೋಮವಾರ ಸಂಜೆ ಸಮಾಧಿ ಮರಣ ಹೊಂದಿದರು.

Advertisement

ಮಂಗಳವಾರ ಅಂತ್ಯ ಸಂಸ್ಕಾರ ನಡೆಯಲಿದೆ. ಶ್ರೀ ಮಾತಾಜಿ ಮೂಲತಃ ಮಹಾರಾಷ್ಟ್ರದವರಾಗಿದ್ದು, 2007ರಲ್ಲಿ ಶ್ರೀ ಆರ್ಯಿಕಾ ಮಾತಾ ದೀಕ್ಷೆ ಪಡೆದಿದ್ದರು. ವೇಣೂರಿನಲ್ಲಿ ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಮರಣ ಹೊಂದಿರುವುದು ಪ್ರಥಮ.

ವೇಣೂರಿನಲ್ಲಿ ಮುನಿಸಂಘ ವಿಹಾರ
ಬೆಳ್ತಂಗಡಿ: ಜೈನ ಧರ್ಮದ ಆಚಾರ್ಯ ಮುನಿಶ್ರೀ 108 ವರ್ಧಮಾನ ಸಾಗರ ಸ್ವಾಮೀಜಿಗಳ ಮುನಿಸಂಘವು ವೇಣೂರು ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರಕ್ಕೆ ಆಗಮಿಸಿದ್ದು, ತ್ಯಾಗಿ ಭವನದಲ್ಲಿ ವಾಸ್ತವ್ಯವಿದ್ದಾರೆ. ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಮಹೋತ್ಸವವು ಪೂಜ್ಯರ ನೇತೃತ್ವದಲ್ಲಿ ನೆರವೇರಿತ್ತು. ವಿಹಾರ ಕಾರ್ಯಕ್ರಮದ ಮುಂದಿನ ಅಂಗವಾಗಿ ಮೂಡುಬಿದಿರೆ, ಕಾರ್ಕಳ ಮೂಲಕ ಹುಂಚ ಕ್ಷೇತ್ರಕ್ಕೆ ತೆರಳಲಿದ್ದಾರೆ. ಮುನಿ ಪರಿವಾರದಲ್ಲಿ 24 ಮುನಿಗಳು ಮತ್ತು ಓರ್ವ ಕ್ಷುಲ್ಲಕ, ಓರ್ವ ಬ್ರಹ್ಮಚಾರಿ ಹಾಗೂ 24 ಆರ್ಯಿಕಾ ಮಾತೆಯರಿದ್ದಾರೆ.

ಶ್ರೀಗಳ ದರ್ಶನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಹಷೇìಂದ್ರ ಕುಮಾರ್‌ ದಂಪತಿ, ಅಜಿಲರಸರಾದ ಡಾ| ಪದ್ಮಪ್ರಸಾದ ಅಜಿಲ, ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರ ಗಣ್ಯರು ಭೇಟಿ ನೀಡಿದ್ದಾರೆ.

ಇತ್ತೀಚೆಗೆ ಧರ್ಮಸ್ಥಳದಲ್ಲಿ ನಿಸ್ಪೃಹ ಸಾಗರ ಮುನಿ ಮಹಾರಾಜರು ಸಮಾಧಿ ಮರಣ ಹೊಂದಿದ್ದರು. ಜೈನ ಧರ್ಮದ ಸಂಪ್ರದಾಯದಂತೆ ಮರಣವೇ ಮಹಾನವಮಿ ಎಂದು ಭಾವಿಸಿ ಮರಣವನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಏಕೆಂದರೆ ದೇಹ ನಶ್ವರ, ಆತ್ಮ ಮಾತ್ರ ಶಾಶ್ವತ.

Advertisement
Advertisement

Udayavani is now on Telegram. Click here to join our channel and stay updated with the latest news.

Next