ಸಿಂಗಾಪುರ: ಆರ್ಯ ವೈಶ್ಯರ ಆರಾಧ್ಯ ದೈವ ಶ್ರೀ ವಾಸವಿ ಮಾತೆಯ ಅಗ್ನಿಪ್ರವೇಶ (ಸ್ವಯಂದಹನ) ದಿನದ ನಿಮಿತ್ತ ಸಿಂಗಾಪುರದ ಆರ್ಯ ವೈಶ್ಯರು ವಾಸವಿ ಕ್ಲಬ್ ಮೆರ್ಲಿಯನ್ ಆಶ್ರಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರಗಿತು.
ಸೇಂಗ್‌ಕಾಂಗ್ ಶ್ರೀ ಅರುಲ್ಮಿಗು ವೇಲ್ಮುರುಗನ್ ಜ್ಞಾನಮುನೀಶ್ವರರ್ ದೇವಸ್ಥಾನದಲ್ಲಿ ಹಿರಿಯ ಸಮಿತಿ ಸದಸ್ಯರಾದ ಕಿಶೋರ್ ಮುಕ್ಕ ಅವರ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಮೊದಲಿಗೆ ಅಮ್ಮನವರ ಮೂಲವಿರಟ್ಟಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಅನಂತರ ಆರ್ಯ ವೈಶ್ಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಲಲಿತಾ ಸಹಸ್ರ ನಾಮಗಳನ್ನು ಜಪಿಸಿದರು. ವಿಶೇಷ ಅಲಂಕಾರವಾಗಿ ಪಿಡಪ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ವಾಸವಿ ಮಾತಾ ಅಷ್ಟೋತ್ತರ ಪಾರಾಯಣ ನಡೆಯಿತು.
ಸುಮಾರು ನೂರೆಂಟು ಭಕ್ತರ ಜಯಘೋಷಗಳ ನಡುವೆ ನಡೆದ ಈ ಪೂಜಾ ಕಾರ್ಯಕ್ರಮವು ಭಕ್ತರನ್ನು ಹಾಗೂ ನೋಡುಗರನ್ನು ಪುಳಕಿತಗೊಳಿಸಿತು. ಭಕ್ತರಿಗೆ ತೀರ್ಥ, ಅನ್ನ ಪ್ರಸಾದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾಗಿ ಕಾರ್ಯನಿರ್ವಹಿಸಿದ ದಾನಿಗಳಾದ ತೋಟಂಶೆಟ್ಟಿ ವಸಂತ ಮಧುಸೂದನ್ ಮತ್ತು ಪಬ್ಬಟಿ ಮುರಳಿಕೃಷ್ಣ ಅವರನ್ನು ಸಮಿತಿಯ ಸದಸ್ಯರು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಮುರಳಿಕೃಷ್ಣ, ಕಾರ್ಯದರ್ಶಿ ಸುಮನ್ ರಾಯಲ ಗಾರ್ಲು ಅವರು ಸಂಸ್ಕೃತಿಯನ್ನು ಪರಿಚಯಿಸುವ ಮತ್ತು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿರುವ ಎಲ್ಲ ಆರ್ಯ ವೈಶ್ಯರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು. ಕೋರ್ ಕಮಿಟಿ ಸದಸ್ಯರಾದ ಮುಕ್ಕ ಕಿಶೋರ್, ಕಿಶೋರ್ ಶೆಟ್ಟಿ, ಆನಂದ ಗಾಂಡೆ, ರಾಜಾ ವಿಶ್ವನಾಥು, ಫಣೇಶ್ ಆತ್ಮೂರಿ ಸಹಕರಿಸಿದರು.