Advertisement

ಸಿಇಎ ಅರವಿಂದ್‌ ಸುಬ್ರಮಣಿಯನ್‌ ಸೇವೆ 1 ವರ್ಷ ವಿಸ್ತರಣೆ

03:21 PM Sep 23, 2017 | Team Udayavani |

ಹೊಸದಿಲ್ಲಿ : ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ಸೇವಾ ಅವಧಿಯನ್ನು ಸರಕಾರ 2018ರ ಅಕ್ಟೋಬರ್‌ ವರೆಗಿನ ಒಂದು ವರ್ಷದ ಮಟ್ಟಿಗೆ ವಿಸ್ತರಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಇಂದು ಶನಿವಾರ ತಿಳಿಸಿದ್ದಾರೆ. 

Advertisement

ಪೀಟರ್‌ಸನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟರ್‌ನ್ಯಾಶನಲ್‌ ಇಕಾನಮಿಕ್ಸ್‌ ಇದರ ಹಿರಿಯ ಫೆಲೋ ಆಗಿರುವ ಸುಬ್ರಮಣಿಯನ್‌ ಅವರನ್ನು ಭಾರತದ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ 2014ರ ಅಕ್ಟೋಬರ್‌ನಲ್ಲಿ ನೇಮಕ ಮಾಡಲಾಗಿತ್ತು. ಅವರ ಎರಡು ವರ್ಷಗಳ ಸೇವಾ ಅವಧಿಯು ಇದೇ ಅಕ್ಟೊಬರ್‌ 16ಕ್ಕೆ ಮುಗಿಯುವುದಿತ್ತು. 

ಸುದ್ದಿಗಾರರೊಂದಿಗೆ ಮಾತನಾಡಿ ಜೇತ್ಲಿ ಅವರು, ಸುಬ್ರಮಣಿಯನ್‌ ಅವರ ಸೇವಾ ಅವಧಿಯನ್ನು ಇನ್ನೂ ಒಂದು ವರ್ಷದ ಮಟ್ಟಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು. 

ಅಂದ ಹಾಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಅಧಿಕಾರಾವಧಿಯು 2019ರ ಮೇಗೆ ಮುಗಿಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next