Advertisement

16th Finance Commission ಅಧ್ಯಕ್ಷರಾಗಿ ಅರವಿಂದ್‌ ಪನಗಾರಿಯಾ

01:27 AM Jan 01, 2024 | Team Udayavani |

ಹೊಸದಿಲ್ಲಿ: ನೀತಿ ಆಯೋಗದ ಮಾಜಿ ಉಪಾಧ್ಯಕ್ಷ‌ ಅರವಿಂದ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ನೂತನ ಅಧ್ಯಕ್ಷರನ್ನಾಗಿ ಸರ ಕಾರ ರವಿ ವಾರ ನೇಮಕಗೊಳಿಸಿದೆ. ಕೊಲಂಬಿಯಾ ವಿವಿಯ ಪ್ರಾಧ್ಯಾ­ಪಕರೂ ನೀತಿ ಆಯೋಗದ ಮಾಜಿ ಉಪಾಧ್ಯಕ್ಷರೂ ಆದ ಅರವಿಂದ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ರಾಷ್ಟ್ರಪತಿಗಳು ನೇಮಿಸಿದ್ದಾರೆ. ಆಯೋಗದ ಸದಸ್ಯರ ನೇಮಕವನ್ನು ಪ್ರತ್ಯೇಕವಾಗಿ ಸರ ಕಾರ ಸೂಚಿಸಲಿದೆ. ಇನ್ನು ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ರಿತ್ವಿಕ್‌ ರಾಂಜನಂ ಪಾಂಡೆ ಅವರೇ ಆಯೋಗದ ಕಾರ್ಯದರ್ಶಿಯೂ ಆಗಿರಲಿದ್ದಾರೆ ಎಂದು ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next