ಹೊಸದಿಲ್ಲಿ: ಫಿನ್ ಲ್ಯಾಂಡ್ ಗೆ ದೆಹಲಿ ಶಿಕ್ಷಕರ ತರಬೇತಿ ಭೇಟಿಯನ್ನು ಅಡ್ಡಿಪಡಿಸಿದ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ವಾಗ್ದಾಳಿ ನಡೆಸಿದರು.
ಲೆಫ್ಟಿನೆಂಟ್ ಗವರ್ನರ್, ಯಾರು?” ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪ್ರಶ್ನಿಸಿದರು.
“ಈ ಎಲ್ ಜಿ ನನ್ನ ‘ಹೋಮ್‌ವರ್ಕ್’ ಅನ್ನು ಪರಿಶೀಲಿಸುವ ರೀತಿಯಲ್ಲಿ ನನ್ನ ಶಿಕ್ಷಕರು ನನ್ನ ಪರಿಶೀಲಿಸಿರಲಿಲ್ಲ…” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ತಂಡ ಸೇರಿದ ಕನ್ನಡಿಗ ಸುನೀಲ್ ಜೋಷಿ
ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರಾಥಮಿಕ ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ ಲ್ಯಾಂಡ್ ಗೆ ಕಳುಹಿಸುವ ದೆಹಲಿ ಸರ್ಕಾರದ ಯೋಜನೆಯನ್ನು ಲೆಫ್ಟಿನೆಂಟ್ ಗವರ್ನರ್ ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇದನ್ನು ಎಲ್.ಜಿ. ಸಕ್ಸೇನಾ ಅದನ್ನು ನಿರಾಕರಿಸಿದ್ದಾರೆ. ಅಲ್ಲದೆ ತನಗೆ ಬೇಕಾಗಿರುವುದು ವೆಚ್ಚ-ಪ್ರಯೋಜನದ ವಿಶ್ಲೇಷಣೆ ಎಂದು ಒತ್ತಾಯಿಸಿದ್ದಾರೆ.