Advertisement

ಮೆಲಾನಿಯಾ ಟ್ರಂಪ್ ಸರ್ಕಾರಿ ಶಾಲೆ ಭೇಟಿ ವೇಳೆ ಕೇಜ್ರಿ, ಸಿಸೋಡಿಯಾಗೆ ಆಹ್ವಾನ ಇಲ್ಲ: AAP

10:21 AM Feb 23, 2020 | Nagendra Trasi |

ನವದೆಹಲಿ: ಭಾರತ ಪ್ರವಾಸದ ವೇಳೆ ರಾಷ್ಟ್ರರಾಜಧಾನಿ ದಿಲ್ಲಿಯ ಸರ್ಕಾರಿ ಕಾಲೇಜಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಭೇಟಿ ನೀಡುವ ಕಾರ್ಯಕ್ರಮಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಡಿಸಿಎಂ ಮನೀಶ್ ಸಿಸೋಡಿಯಾಗೆ ಆಹ್ವಾನ ನೀಡದಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

ದಿಲ್ಲಿ ಸರ್ಕಾರದ ಮೂಲಗಳ ಪ್ರಕಾರ, ಮಂಗಳವಾರ ದಿಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಲಿರುವ ಮೆಲಾನಿಯಾ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಸೋಡಿಯಾ ಹೆಸರನ್ನು ಕೈಬಿಡುವ ಸಾಧ್ಯತೆ ಇದ್ದಿರುವುದಾಗಿ ಎಎನ್ ಐ ವರದಿ ಮಾಡಿದೆ.

ಅರವಿಂದ್ ಕೇಜ್ರಿವಾಲ್ ಮತ್ತು  ಮನೀಶ್ ಸಿಸೋಡಿಯಾಗೆ ಅಮೆರಿಕ ರಾಯಭಾರ ಕಚೇರಿಗಳ ಅಧಿಕಾರಿಗಳು, ದಲ್ಲಿ ಸರ್ಕಾರಿ ಶಾಲೆ ಮೆಲಾನಿಯಾ ಭೇಟಿ ವೇಳೆ ಜತೆಗೆ ಕರೆದೊಯ್ಯುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ನಾವು ಕೂಡಾ ಒಂದು ವೇಳೆ ಅಗತ್ಯವಿದ್ದಲ್ಲಿ ಆಹ್ವಾನಿಸಿದಲ್ಲಿ ಹಾಜರಾಗುವುದಾಗಿ ತಿಳಿಸಿರುವುದಾಗಿ ಕೇಜ್ರಿವಾಲ್ ಹೇಳಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next