Advertisement

ಮಹಾಸಭಾ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವೆ

01:46 PM Nov 26, 2020 | Suhan S |

ಕೆ.ಆರ್‌.ನಗರ: ರಾಜ್ಯ ಸರ್ಕಾರವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮರಚಿಸಿರುವುದರಿಂದ ನಮ್ಮ ಸಮಾಜದ ಬಡವ‌ರಿಗೆ ಅನುಕೂಲವಾಗಲಿದೆ ಎಂದು ಆಖೀಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರುಣಾದೇವಿ ಹೇಳಿದರು.

Advertisement

ಪ‌ಟ್ಟಣದ ‌ ಬಸವೇಶ್ವರ ‌ ಬಡಾವಣೆಯಲ್ಲಿ ಕೆ.ಆರ್‌.ನಗರ ‌ ತಾಲೂಕಿನ ವಿವಿಧ ವೀರಶೈವ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ‌ನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ‌ ಕೆಲಸ ಮಾಡುವಾಗ ರಾಜಕೀಯ ಬೆರೆಸಬಾರದು. ಮಹಾ ಸಭಾ ನನಗೆ ವ‌ಹಿಸಿರುವ ‌ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವೆ. ಇದಕ್ಕೆ ಎಲ್ಲರೂ ಸಹ‌ಕಾರ ‌ ನೀಡಬೇಕು ಎಂದು ಕೋರಿದರು.

ಮಹಾಸಭಾ ಮಹಿಳಾ ಘಟಕದ ವತಿಯಿಂದ ಎಲ್ಲರ ‌ ಸಹಕಾರ ಪಡೆದು ಅಕ್ಕ ಮಹಾದೇವಿಯವರ ‌ ಜನ್ಮ ‌ಸ್ಥಳವಾದ ‌ ಉಡುತಡಿಯಲ್ಲಿ ವೀರಶೈವ ‌ಮಾಜದ ಪ್ರತಿಭಾವಂತ ‌ ಹೆಣ್ಣು ಮ್ಕಕ್ಕಳು ಸೇರಿದಂತೆ ಇತರ ಎಲ್ಲಾ ಜನಾಂಗದ ‌ ಪ್ರತಿಭಾವಂತೆಯರಿಗೆ ಅನುಕೂಲವಾಗುವಂತೆ ಐಎಎಸ್‌ ಹಾಗೂ ಕೆಎಎಸ್‌ ಸೇರಿದಂತೆ ಇತರ ‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ವಾಗಿ ವಸತಿ ಸಹಿತ ‌ ತರಬೇತಿ ಕೇಂದ್ರ ಆರಂಭಿಸುವುದಾಗಿ ಅರುಣಾದೇವಿ ತಿಳಿಸಿದರು. ಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬಸವೇಶ್ವರ  ‌ಪುತ್ಥಳಿ ನಿರ್ಮಾಣ ಸೇರಿದಂತೆ ವೀರಶೈವ ಸಂಘಟನೆಗಳು ಮಾಡುವ ‌ ಎಲ್ಲಾ ಉತ್ತಮ ಕೆಲಸಗಳಿಗೆಳಿಗೆ ಸದಾ ಸಹಕಾರ ನೀಡುವುದಾಗಿ ಭರ‌ವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾಸಭಾದ ‌ ತಾಲೂಕು ಘಟಕ ‌ ‌ ಅಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಸಿ.ವಿ.ಗುಡಿ ಜಗದೀಶ್‌, ಪುರಸಭೆ ಮಾಜಿ ಉಪಾಧ್ಯಕ್ಷೆ ಕೆ.ಎಂ.ನಾಗರತ್ನಮ್ಮ, ಸದಸ್ಯ ಕೆ.ಪಿ.ಪ್ರಭುಶಂಕರ್‌ ಮಾತನಾಡಿದರು. ಈ ವೇಳೆ

ಮಹಾಸಭಾದ ಮಹಿಳಾ ಘಟಕದ ‌ ಅಧ್ಯಕ್ಷೆ ಮನೋಹರಿ, ಉಪಾಧ್ಯಕ್ಷೆ ದಾಕ್ಷಾಯಿಣಿ, ಯುವ ‌ ಘಟಕದ‌ ಅಧ್ಯಕ್ಷ ಕುಮಾರಸ್ವಾಮಿ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಎಸ್‌.ವಿ.ಪ್ರಕಾಶ್‌, ವೀರಶೈವ ಸಮಾಜದ ಮುಖಂಡರಾದ ಸಣ್ಣಲಿಂಗಪ್ಪ, ಎಲ್‌ .ಪಿ.ರವಿಕುಮಾರ್‌, ಮಾರ್ಕಂಡೇಯಸ್ವಾಮಿ, ರಾಜಶೇಖರ, ಕೆ.ಬಿ.ಚಂದ್ರಶೇಖರ್‌, ಗಂಗಾಧರ, ಜಗದೀಶ್‌ ಬಸಪ್ಪ, ಭಾರತಿ ಶಿವಕುಮಾರ್‌, ನೇತ್ರಾವತಿ, ರೇಖಾ ರವೀಂದ್ರ ಇತರರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next