Advertisement

ಅರುಣಾಚಲ ಪ್ರದೇಶ ಶಾಸಕ ಸೇರಿ 11 ಮಂದಿಯ ಹತ್ಯೆ

02:21 AM May 22, 2019 | sudhir |

ಇಟಾನಗರ: ಅರುಣಾಚಲ ಪ್ರದೇಶದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಶಾಸಕ ಟಿರೊಂಗ್‌ ಅಬೋಹ್‌ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಮಂಗಳವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಅದರಲ್ಲಿ ಅಬೋಹ್‌(41), ಕುಟುಂಬ ಸದಸ್ಯರು ಹಾಗೂ ಅಂಗರಕ್ಷಕರು ಸೇರಿದಂತೆ 11 ಜನರು ಅಸುನೀಗಿದ್ದಾರೆ. ಘಟನೆಯಲ್ಲಿ ಅಬೋಹ್‌ ಅವರ ಕಿರಿಯ ಪುತ್ರ ಕೂಡ ಹತ್ಯೆಗೀಡಾಗಿದ್ದಾರೆ.

Advertisement

ಅಸ್ಸಾಂನ ದಿಬ್ರುಗಢದಿಂದ ತಮ್ಮ ಕ್ಷೇತ್ರವಾದ ಪಶ್ಚಿಮ ಖೋನ್ಸಾ ಕ್ಷೇತ್ರಕ್ಕೆ ಅವರು ತಮ್ಮ ಎಸ್‌ಯುವಿ ಮಾದರಿಯ ವಾಹನ ದಲ್ಲಿ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯೆ ಅರುಣಾಚಲ ಪ್ರದೇಶದ ತಿರಪ್‌ ಜಿಲ್ಲೆಯ ಬೊಗಪಾನಿ ಎಂಬಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಈ ದಾಳಿ ನಡೆದಿದೆ.

ಉಗ್ರರ ದಾಳಿ ಶಂಕೆ
ಘಟನೆಯ ಹಿಂದೆ ನಿಷೇಧಿತ ನ್ಯಾಷನಲ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್ ನಾಗಾಲ್ಯಾಂಡ್‌ನ‌ ಇಸಾಕ್‌-ಮುಯಾÌ ಗುಂಪಿನ ಕೈವಾಡವಿರಬಹು ದೆಂದು ಶಂಕಿಸಲಾಗಿದೆ.

2014ರಲ್ಲಿ ಎನ್‌ಪಿಪಿ ಪಕ್ಷದಿಂದ ಗೆದ್ದು ಪಶ್ಚಿಮ ಖೋನ್ಸಾದಿಂದ ಶಾಸಕರಾಗಿದ್ದ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಮತ್ತೆ ಅದೇ ಕ್ಷೇತ್ರದಿಂದಲೇ ಕಣಕ್ಕಿಳಿಸಿತ್ತು. ಲೋಕಸಭಾ ಚುನಾವಣೆಯ ಜತೆಯಲ್ಲೇ ಅಲ್ಲಿನ ವಿಧಾನಸಭೆ ಚುನಾವಣೆಯೂ ನಡೆದಿದ್ದು, ಎ. 11ರಂದು ಮತದಾನ ವಾಗಿತ್ತು. ಘಟನೆ ಬಗ್ಗೆ ಅರುಣಾಚಲ ಸಿಎಂ ಪೆಮಾ ಖಂಡು ಆಘಾತ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ತಪ್ಪಿತಸ್ಥರನ್ನು ಪತ್ತೆ ಹಚ್ಚುವಂತೆ ಆದೇಶಿಸಿದ್ದಾರೆ.

ನಾಳೆ ದಾಳಿಗೆ ಉಗ್ರರ ಸಂಚು?
ಮೇ 23ರಂದು ಲೋಕಸಭೆ ಚುನಾವಣೆಯ ಮತ ಎಣಿಕೆಯ ದಿನವೇ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ವರದಿ ನೀಡಿವೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವುದು, ನೆರೆಯ ಪಾಕಿಸ್ಥಾನದ ಕಣ್ಣನ್ನು ಕೆಂಪಗಾಗಿಸಿದೆ. ಹೀಗಾಗಿ, ಭಾರತದಲ್ಲಿ ನೆತ್ತರು ಹರಿಸಲು ಪಾಕ್‌ ಮೂಲದ ಉಗ್ರರು ಸಂಚು ರೂಪಿಸಿದ್ದು, ಮತ ಎಣಿಕೆ ದಿನದಂದೇ ಸ್ಫೋಟಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಟೈಮ್ಸ್‌ ನೌ ಸುದ್ದಿವಾಹಿನಿ ವರದಿ ಮಾಡಿದೆ.

Advertisement

ಗಡಿ ನಿಯಂತ್ರಣ ರೇಖೆ ಬಳಿಯಿರುವ ಉಗ್ರರ ಲಾಂಚ್‌ಪ್ಯಾಡ್‌ಗಳು ಸಕ್ರಿಯವಾಗಿದ್ದು, ಜಮ್ಮು-ಕಾಶ್ಮೀರ ಮತ್ತು ರಾಜಸ್ಥಾನದ ಮೂಲಕ ಉಗ್ರರನ್ನು ಭಾರತದ ನೆಲದೊಳಕ್ಕೆ ಕಳುಹಿಸಲು ಸಿದ್ಧವಾಗಿದೆ ಎಂದೂ ವರದಿ ಹೇಳಿದೆ.

ಕ್ಷಮೆ ಯಾಚಿಸಿದ ವಿವೇಕ್‌
ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರ ವೈಯಕ್ತಿಕ ಬದುಕಿಗೂ ಲೋಕಸಭೆ ಚುನಾವಣೆಗೂ ಸಂಬಂಧ ಕಲ್ಪಿಸಿ ಕೀಳು ಅಭಿರುಚಿಯ ಮೀಟ್‌ವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ನಟ ವಿವೇಕ್‌ ಒಬೆರಾಯ್‌ ಮಂಗಳವಾರ ಕ್ಷಮೆ ಯಾಚಿಸಿದ್ದಾರೆ. ವಿವೇಕ್‌ರ ವಿವಾದಾತ್ಮಕ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಕ್ಷಮೆ ಕೇಳಿರುವ ಅವರು ಬಳಿಕ ಟ್ವೀಟ್‌ ಮಾಡಿ, “ನಾನು ಕಳೆದ 10 ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ತುಳಿತಕ್ಕೊಳಗಾದ ಹೆಣ್ಣು ಮಕ್ಕಳ ಸಬಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿ ದ್ದೇನೆ. ಯಾವ ಮಹಿಳೆಗೂ ಅಗೌರವ ತೋರಿಸುವುದನ್ನು ಕಲ್ಪಿಸಿಕೊಳ್ಳುವುದೂ ಇಲ್ಲ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next