Advertisement
ಅರುಣಾಚಲ ಪ್ರದೇಶದ ನಾಮದಾಫ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಜಾತಿಯ ಕಪ್ಪೆಗಳನ್ನು ಬ್ರಿಟನ್ ಮೂಲದ ವಾಲ್ವಹ್ಯಾಂಪ್ಟನ್ ವಿಶ್ವವಿದ್ಯಾಲಯ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ನೋವಾ-ದಿಹಿಂಗ್ ನದಿ ಸಮೀಪ ಪತ್ತೆ ಆಗಿರುವ ಈ ಕಪ್ಪೆಗಳಿಗೆ “ಮ್ಯೂಸಿಕ್ ಫ್ರಾಗ್ಸ್” ಎಂದು ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಇವು “ಕ್ವಾಕ್ ಕ್ವಾಕ್” ಎಂದು ಶಬ್ದ ಮಾಡುತ್ತವೆ. ಸುಮಾರು ಆರು ಸೆಂಟಿಮೀಟರ್‌ಗಳಷ್ಟು ಬೆಳೆಯುವ ಈ ಕಪ್ಪೆಗಳು, ದೇಹದ ಮಧ್ಯದಲ್ಲಿ ಮಸುಕಾದ, ಕೆನೆ ಬಣ್ಣದ ರೇಖೆಯನ್ನು ಹೊಂದಿವೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. Advertisement
Arunachal Pradesh: “ಕ್ವಾಕ್ ಕ್ವಾಕ್” ಎನ್ನುವ ಕಪ್ಪೆಗಳು ಪತ್ತೆ
11:51 PM Dec 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.