ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾರೋ ಒಂದಿಬ್ಬರಿಗೆ ಬೇಸರ ಇರಬಹುದು. ಆದರೆ ಅವರನ್ನು ಕರೆದು ಅರುಣ್ ಸಿಂಗ್ ಮಾತಾನಾಡುತ್ತಾರೆ. ನಾಯಕತ್ವದ ಬಗ್ಗೆಯಾಗಲಿ, ಬೇರೆ ವಿಷಯದ ಬಗ್ಗೆಯಾಗಲಿ ಯಾವುದೇ ಗೊಂದಲ ಇಲ್ಲ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಯೂರಪ್ಪ ಹೇಳಿದರು.
ಅರುಣ್ ಸಿಂಗ್ ಜೊತೆಗೆ ಮತ್ತೊಬ್ಬ ವೀಕ್ಷಕ ರಾಜ್ಯಕ್ಕೆ ಬರಬೇಕು ಎಂಬ ಕೆಲ ಶಾಸಕರ ಎಂಬ ಆಗ್ರಹ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅನಗತ್ಯವಾದ ಪ್ರಶ್ನೆ ಕೇಳಬೇಡಿ. ಅರುಣ್ ಸಿಂಗ್ ನಮ್ಮ ರಾಜ್ಯದ ಉಸ್ತುವಾರಿ ಗಳು. ಅವರು ನಾಳೆ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಎಲ್ಲಾ ಶಾಸಕರು, ಸಂಸದರ ಜೊತೆ ಚರ್ಚೆ ಮಾಡ್ತಾರೆ. ಯಾವುದೇ ಗೊಂದಲ ಇಲ್ಲ, ಯಾರು ಬೇಕಾದರೂ ಅವರನ್ನು ಭೇಟಿ ಮಾಡಬಹುದು ಎಂದರು.
ಇದನ್ನೂ ಓದಿ:ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿಯು ಟ್ರೇಡಿಂಗ್ ಸರಕಾರವಾಗಿದೆ: ಸೊರಕೆ
ಅರುಣ್ ಸಿಂಗ್ ಅವರು ಗೆಸ್ಟ್ ಹೌಸ್ ನಲ್ಲಿದ್ದು ಎಲ್ಲಾ ವಿಷಯಗಳ ಬಗ್ಗೆ ಸುಧೀರ್ಘ ವಾಗಿ ತಿಳಿದುಕೊಳ್ಳುತ್ತಾರೆ. ನಾನು ಕೂಡ ಅವರ ಜೊತೆ ಅವರಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ ಎಂದು ಬಿಎಸ್ ವೈ ಹೇಳಿದರು.
ಎರಡನೇ ಹಂತದಲ್ಲಿ ಅನ್ ಲಾಕ್ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಇವತ್ತು ನಾಳೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಪರಿಸ್ಥಿರಿ ಸುಧಾರಣೆ ಆಗುತ್ತಿರುವುದನ್ನು ಯೋಚನೆ ಮಾಡಿ, ಎರಡನೇ ಹಂತದ ಅನ್ ಲಾಕ್ ಬಗ್ಗೆ ನಿರ್ಧಾರ ಮಾಡುತ್ತೇವೆ. ಎರಡನೇ ಹಂತದಲ್ಲಿ ಯಾವುದಕ್ಕೆಲ್ಲ ವಿನಾಯಿತಿ ಕೊಡಬಹುದು ಎಂಬುದರ ಬಗ್ಗೆ ಯೋಚನೆ ಮಾಡಿ ಮಾಡಿ ಹೇಳುತ್ತೇವೆ ಎಂದರು.