Advertisement

‘ನಮ್ಮ ಪಕ್ಷಕ್ಕೆ ಕೆಲವು ಇತಿಮಿತಿಗಳಿವೆ’: ಮುನಿರತ್ನ ವಿಚಾರಕ್ಕೆ ಅರುಣ್ ಸಿಂಗ್ ಪ್ರತಿಕ್ರಿಯೆ

01:15 PM Jan 13, 2021 | Team Udayavani |

ಬೆಂಗಳೂರು: ನಮ್ಮ ಪಕ್ಷದಲ್ಲಿ ಬಹಳಷ್ಟು ಶಾಸಕರಿದ್ದಾರೆ, ಎಲ್ಲರೂ ಸಚಿವ ಸ್ಥಾನ ಆಕಾಂಕ್ಷಿಗಳೇ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

Advertisement

ರಾಜ್ಯದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾರೇ ಇರಲಿ ನಮ್ಮ ಮೊದಲ ಆದ್ಯತೆ ಜನರ ಹಿತಾಸಕ್ತಿ, ಸಮಾಜದ ಹಿತಾಸಕ್ತಿ. ರಾಜ್ಯದ ಅಭಿವೃದ್ಧಿ ಮತ್ತು ಬಡವರ ಸುಧಾರಣೆ ಮತ್ತೊಂದು ಆದ್ಯತೆ. ಕಾರ್ಯಕರ್ತರ ಹಿತಾಸಕ್ತಿಯೂ ನಮಗೆ ಮುಖ್ಯ ಎಂದರು.

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಮತ್ತೆ ಅವಕಾಶ ಕೊಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಇತಿಮಿತಿ‌ ಹಿನ್ನೆಲೆಯಲ್ಲಿ ಈ‌ನಿ ರ್ಧಾರ ಮಾಡಲಾಗಿದ್ದು, ನಮ್ಮ ಪಕ್ಷಕ್ಕೆ ಕೆಲವು ಇತಿಮಿತಿಗಳಿವೆ ಎಂದು ಅರುಣ್ ಸಿಂಗ್ ಹೇಳಿದರು.

ಇದನ್ನೂ ಓದಿ:ಇತ್ತ ಸಂಪುಟ ಪಟ್ಟಿ ಸಿದ್ದ: ಅತ್ತ ಪಕ್ಷದೊಳಗೆ ಅಸಮಾಧಾನ ಸ್ಪೋಟ! ಬಿಎಸ್ ವೈಗೆ ಮತ್ತೊಂದು ಸಂಕಟ

ಇಂದು ಬಿಎಸ್ ವೈ ಸಂಪುಟಕ್ಕೆ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ ನಾಗರಾಜ್, ಆರ್ ಶಂಕರ್, ಎಸ್. ಅಂಗಾರ, ಅರವಿಂದ ಲಿಂಬಾವಳಿ ಸಂಪುಟ ಸೇರಲಿದ್ದಾರೆ.  ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರನ್ನು ಕೈಬಿಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next