Advertisement
ಈ ನಡುವೆ ಸಿಎಂ ಪರ ಮತ್ತು ವಿರುದ್ಧ ಬಹಿರಂಗ ಹೇಳಿಕೆಗಳು ಕೂಡ “ಸ್ಫೋಟ’ ಗೊಂಡಿದ್ದು, ಪರಿಸ್ಥಿತಿ ಇನ್ನಷ್ಟು ಗೋಜಲಾಗಿದೆ.ಅರುಣ್ ಸಿಂಗ್ ಒಟ್ಟು 53 ಶಾಸಕರು, ಸಚಿವರ “ಮುಖಾ ಮುಖೀ’ ಅಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿ 15 ಮಂದಿ ತಟಸ್ಥರಾಗಿದ್ದರೆ, 36 ಮಂದಿ ಸಿಎಂ ಪರ ಇದ್ದರು ಎಂದು ಮೂಲಗಳು ತಿಳಿಸಿವೆ. ತಾವು ಸ್ಪಷ್ಟ ಸೂಚನೆ ನೀಡಿದ್ದರೂ ಬಹಿರಂಗ ಹೇಳಿಕೆ ಮುಂದುವರಿಸಿದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅರುಣ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.
ಈ ಮಧ್ಯೆ ಸಿಎಂ ಸ್ಥಾನಾಕಾಂಕ್ಷಿ ಎನ್ನಲಾದ ಪಂಚಮ ಸಾಲಿ ಸಮುದಾಯದ ಅರವಿಂದ ಬೆಲ್ಲದ ಅವರು “ಫೋನ್ ಕದ್ದಾಲಿಕೆ’ ಬಾಂಬ್ ಸ್ಫೋಟಿಸುವ ಮೂಲಕ ಸರಕಾರದ ವಿರುದ್ಧ ನೇರ ದಾಳಿ ನಡೆಸಿದರು.
ಬಿಎಸ್‌ವೈ ಪರ ಶಾಸಕರು ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ನಿವಾಸದಲ್ಲಿ ಗುರುವಾರ ಬೆಳಗಿನ ಉಪಾಹಾರಕ್ಕಾಗಿ ಸೇರಿ ಚರ್ಚೆ ನಡೆಸಿದರು. ಬಳಿಕ ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಅವರ ಮಾರ್ಗದರ್ಶನದಂತೆ ಪಕ್ಷದ ಕಚೇರಿಯ ವರೆಗೆ ತಂಡವಾಗಿಯೇ ತೆರಳಿದರು. ಅರುಣ್ ಸಿಂಗ್ ಎದುರು ಸಿಎಂ ಪರ ವಕಾಲತ್ತು ವಹಿಸಿದ್ದಲ್ಲದೆ ಭಿನ್ನರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು ಎಂದು ತಿಳಿದು ಬಂದಿದೆ. ಯಡಿಯೂರಪ್ಪ ಪರ ಶಾಸಕರು?
ಪಕ್ಷದ ಕಚೇರಿಯಲ್ಲಿ ಅರುಣ್ ಸಿಂಗ್ ಗುರುವಾರ ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ನಿರಂತರವಾಗಿ ಶಾಸಕರಿಂದ ಅಭಿಪ್ರಾಯ ಸ್ವೀಕರಿಸಿದರು.