Advertisement

ಬಿಜೆಪಿ ಕಛೇರಿಗೆ ಜೇಟ್ಲಿ ಪಾರ್ಥೀವ ಶರೀರ : ಮಧ್ಯಾಹ್ನ 2:30ಕ್ಕೆ ಅಂತ್ಯ ಸಂಸ್ಕಾರ

10:56 AM Aug 26, 2019 | Mithun PG |

ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಕೇಂದ್ರದ  ಮಾಜಿ ಸಚಿವ ಅರುಣ್ ಜೇಟ್ಲಿಯವರ ಪಾರ್ಥೀವ ಶರೀರವನ್ನು ದೆಹಲಿಯ ಬಿಜೆಪಿ ಕಛೇರಿಗೆ ತರಲಾಗಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಂಘ ಪರಿವಾರದ ಮುಖಂಡರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ . ಮಧ್ಯಾಹ್ನ 1:30 ರ ವರೆಗೂ ಅಂತಿಮ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು, 2: 30 ರ ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.

ಯಮುನಾ ನದಿ ದಡದಲ್ಲಿರುವ  ನಿಗಮಭೋದ್  ಘಾಟ್ ವರೆಗೆ ಮೆರವಣಿಗೆ ಮೂಲಕ ಪಾರ್ಥೀವ ಶರಿರವನ್ನು ತಂದು   ಆ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು.

ಬಿಜೆಪಿಯ ಕೇಂದ್ರ ಕಛೇರಿಯ ಸುತ್ತಲೂ ಬಿಗಿ ಪೋಲಿಸ್ ಭದ್ರತೆ ಕಲ್ಪಿಸಲಾಗಿದ್ದು, ಅಂತಿಮ ಯಾತ್ರೆ ಸಾಗುವ ರಸ್ತೆಯ ಇಕ್ಕೆಲಗಳಲ್ಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು  ದೆಹಲಿಯ ಪೋಲಿಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next