Advertisement
ಜೇಟ್ಲಿ ಹೇಳಿದ್ದೇನು?2008ರಿಂದ 2014ರ ಅವಧಿಯಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗ ಆರ್ಥಿಕ ಬೆಳವಣಿಗೆಯನ್ನು ಕೃತಕವಾಗಿ ಉತ್ತೇಜಿಸಲು ಬ್ಯಾಂಕ್‌ಗಳಿಗೆ ಯಥೇಚ್ಛವಾಗಿ ಸಾಲ ನೀಡುವಂತೆ ಸೂಚಿಸಲಾಗಿತ್ತು. ಸಾಲ ನೀಡಿಕೆ ಪ್ರಮಾಣ ನಿಯಂತ್ರಿಸುವಲ್ಲಿ ಆರ್‌ಬಿಐ ವಿಫಲವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಆರ್‌ಬಿಐ ಸ್ವಾತಂತ್ರ್ಯವನ್ನು ಗೌರವಿಸದ ಸರಕಾರವು ಹಣಕಾಸು ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸುತ್ತದೆ. ಅಷ್ಟೇ ಅಲ್ಲ, ಅದು ಆರ್ಥಿಕ ಸಂಕಷ್ಟಕ್ಕೂ ಕಾರಣವಾಗಬಹುದು ಎಂದು ಆಚಾರ್ಯ ಹೇಳಿದ್ದರು. ಸಭೆಗೂ ಮುನ್ನ ಭಿನ್ನಾಭಿಪ್ರಾಯ
ಜೇಟ್ಲಿ ಹಾಗೂ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಮಂಗಳವಾರ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭೇಟಿಯಾಗಿದ್ದಾರೆ. ಹಣಕಾಸಿನ ದ್ರವ್ಯತೆ ಹಾಗೂ ಇತರ ವಿಷಯಗಳ ಕುರಿತು ಜೇಟ್ಲಿ ಮತ್ತು ಪಟೇಲ್ ಮಾತುಕತೆ ನಡೆಸಿದ್ದಾರೆ.
Related Articles
ಆರ್‌ಬಿಐ ಹಾಗೂ ಸರಕಾರದ ಮಧ್ಯೆ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು. ಸರಕಾರಕ್ಕೆ ಅನುಕೂಲಕರವಾದ ವಿತ್ತ ನೀತಿಯನ್ನು ಕೈಗೊಳ್ಳಬೇಕೆಂದು ಆರ್‌ಬಿಐ ಮೇಲೆ ಸರಕಾರಗಳು ಒತ್ತಡ ಹೇರುತ್ತಲೇ ಇದ್ದವು. ರೆಪೋ ದರ ಇಳಿಕೆಯಿಂದಲೇ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲಾಗದು ಎಂಬುದಾಗಿ ಬಹುತೇಕ ಆರ್‌ಬಿಐ ಗವರ್ನರ್‌ಗಳು ಸರಕಾರದ ವಿರುದ್ಧ ಚಾಟಿ ಬೀಸುತ್ತಲೇ ಇದ್ದರು. ಆದರೆ ಈ ಬಾರಿಯ ವಿವಾದ ಸಂಪೂರ್ಣ ವಿಭಿನ್ನ ನೆಲೆಯಲ್ಲಿದೆ. ಇತ್ತೀಚೆಗೆ ಹಣಕಾಸು ಮುಗ್ಗಟ್ಟಿಗೀಡಾದ ಐಎಲ್‌ಆ್ಯಂಡ್‌ಎಫ್ಎಸ್ ಹಣಕಾಸು ಸಂಸ್ಥೆಯ ಪರಿಣಾಮ ಇಡೀ ದೇಶದ ಆರ್ಥಿಕ ವಲಯಕ್ಕೆ ಹರಡುವ ಭೀತಿ ಎದುರಾಗಿದ್ದು, ಇದನ್ನು ನಿಯಂತ್ರಿಸುವಂತೆ ಸರಕಾರ ಆರ್‌ಬಿಐ ಮೇಲೆ ಒತ್ತಡ ಹೇರಿದೆ. ಆದರೆ ಯಾವುದೇ ದ್ರವ್ಯತೆ ಸಮಸ್ಯೆ ಇಲ್ಲ ಎಂದು ಆರ್‌ಬಿಐ ಭರವಸೆ ನೀಡಿದೆ.
Advertisement