Advertisement

ಕಲೆಗಳು ಉತ್ತಮ ಬದುಕಿಗೆ ದಿಕ್ಸೂಚಿ: ಕೊಲ್ಲೂರ

12:35 PM Jan 26, 2022 | Team Udayavani |

ಚಿತ್ತಾಪುರ: ಕಲಾವಿದರು ರಚಿಸಿದ ಶಿಲ್ಪ ಕಲೆ ಹಾಗೂ ಚಿತ್ರ ಕಲೆಗಳು ಮನುಷ್ಯನ ಉತ್ತಮ ಬದುಕಿನ ದಿಕ್ಸೂಚಿಯಾಗಿವೆ ಎಂದು ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಹೇಳಿದರು.

Advertisement

ಪಟ್ಟಣದ ಬಾಲಾಜಿ ಮಂದಿರದಲ್ಲಿ ಕರ್ತಾರ ಕುಂಜ ಕಾರ್ವಿಂಗ್‌ ಇಂಡಸ್ಟ್ರೀಸ್‌, ನಾಗಾವಿ ಸಾಂಸðತಿಕ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ದೃಶ್ಯ ಕಲಾವಿದರಿಂದ ಶಿಲ್ಪ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಕಲೆಗಳು ಉತ್ತಮ ಬದುಕು ಕಲಿಸುವ ಜತೆಗೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕಲಾವಿದರ ಶಿಲ್ಪ ಕಲೆ, ಚಿತ್ರ ಕಲೆಗಳನ್ನು ಗುರುತಿಸಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಚಿತ್ತಾಪುರ ಕಲಾವಿದರ ತವರೂರು. ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಕೆಲಸ ಮಾಡಬೇಕು. ಇಲ್ಲಿನ ಕಲಾವಿದರು ದೇಶ, ವಿದೇಶಗಳಲ್ಲಿ ಛಾಪು ಮೂಡಿಸಿದ್ದಾರೆ. ಇನ್ನು ಅನೇಕ ಕಲಾವಿದರು ಎಲೆಮರೆಕಾಯಿಯಂತೆ ತೆರೆಮರೆಯಲ್ಲಿ ಇದ್ದಾರೆ. ಅವರ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು. ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ ಮಾತನಾಡಿ, ನಾಗಾವಿ ಉತ್ಸವಕ್ಕೆ ಪುರಸಭೆಯ ಅನುದಾನ ಕಾಯ್ದಿರಿಸಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್‌ ಮಾತನಾಡಿ, ಕೋಟಿ ರೂ. ನೀಡಿದರೂ ಕಲಾವಿದನಾಗಲು ಸಾಧ್ಯವಿಲ್ಲ. ಆಸಕ್ತಿಯಿದ್ದಾಗ ಮಾತ್ರ ಕಲಾವಿದ ಹೊರಹೊಮ್ಮುತ್ತಾನೆ ಎಂದು ಹೇಳಿದರು. ಪುರಸಭೆ ಸದಸ್ಯ ವಿನೋದ ಗುತ್ತೆದಾರ, ನಾಗಣ್ಣ ಇವಣಿ, ಶಾಮ ಮೇಧಾ, ಮನೋಹರ ಹಡಪದ, ಕರಬಸಯ್ಯ ಶಾಸ್ತ್ರೀ, ಸತ್ಯನಾರಾಯಣ ಶಿಲ್ಪಿ, ಸುರೇಶ ವಿಶ್ವಕರ್ಮ, ಚಂದ್ರಶೇಖರ ಬಳ್ಳಾ, ಸಂಗಮೇಶ ಚಿಕ್ಕಮಠ, ಚಂದ್ರಕಾಂತ ಶ್ರಾವಣ, ಮೋನೇಶ ಮಳಖೇಡ, ಜಗದೇವ ದಿಗ್ಗಾಂವಕರ್‌ ಇದ್ದರು.

ಕಾರ್ತಾರ ಕುಂಜ ಕಾರ್ವಿಂಗ್‌ ಇಂಡಸ್ಟ್ರೀಸ್‌ ನಿರ್ದೇಶಕ ನಟರಾಜ ಶಿಲ್ಪಿ ಸ್ವಾಗತಿಸಿದರು. ನರಸಿಂಹಲು ಆಲಮೇಲಕರ್‌ ನಿರೂಪಿಸಿದರು, ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ವಂದಿಸಿದರು.ಉಮೇಶ ಬಾಬು, ಡಾ| ಮಲ್ಲಿಕಾರ್ಜುನ ಬಾಗೋಡಿ, ನಟರಜ ಶಿಲ್ಪಿ, ನರಸಿಂಹಲು ಆಲಮೇಲಕರ್‌, ರಾಜಕುಮಾರ ಪೂಜಾರಿ, ರಾಜಕುಮಾರ ಮಾಲಗತ್ತಿ, ಶಂಭುಲಿಂಗ ವಿಶ್ವಕರ್ಮ, ದೇವಾ ಬೆನಕಹಳ್ಳಿ, ಆನಂದ ಮೂಡಬೂಳಕರ್‌, ಸಂಜಯ ಪಾಲೇಕರ್‌, ಬಸವರಾಜ ಹೆಬ್ಟಾಳ, ಮಲ್ಲಿಕಾರ್ಜುನ ವಿಶ್ವಕರ್ಮ, ರವಿ ಶಹಾಬಾದ್‌, ಸಾಬಣ್ಣ ಬಡಿಗೇರ್‌, ದೇವಾನಂದ ಮುತ್ತಗಾ, ಮುನಿಯಪ್ಪ ಕಡಬೂರ, ವಿಶ್ವನಾಥ ರಾಠೊಡ, ಶಾಂತವೀರಯ್ಯ ಚಿಕ್ಕಮಠ, ಪ್ರಸನ್ನ ಶಿಲ್ಪಿ, ಗಣೇಶ ವಿಶ್ವಕರ್ಮ, ದುಗೇìಶ ಗಮಗಾ, ಆಕಾಶ ವಿಶ್ವಕರ್ಮ, ಹಣಮಂತ ಹೋಳಿಕಟ್ಟಿ, ಚೆನ್ನಪ್ಪ ದಂಡಗುಂಡರ ಕಲಾಕೃತಿಗಳು ಪ್ರದರ್ಶನಗೊಂಡವು.

Advertisement
Advertisement

Udayavani is now on Telegram. Click here to join our channel and stay updated with the latest news.

Next