Advertisement

ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವುದು ಕಲಾವಿದನ ವಿಜಯ

07:40 AM Aug 10, 2017 | |

ಮಧೂರು: ಪ್ರೇಕ್ಷಕರ ಚಪ್ಪಾಳೆಗೆ, ಶಿಳ್ಳೆಗೆ ಜೋತು ಬೀಳದೆ ತನ್ನ ಕಲಾ ಪ್ರೌಢಿಮೆಯಿಂದ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವುದೇ ಕಲಾವಿದನ ನಿಜವಾದ ವಿಜಯ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು. 

Advertisement

ಯಕ್ಷಮಿತ್ರರು ಮಧೂರು ಇವರು 10ನೇ ಕಲಾಕಾಣಿಕೆಯಾಗಿ ಸಂಯೋ ಜಿಸುವ ಮಧೂರು ಯಕ್ಷಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ವೇ|ಮೂ| ವೇಣು ಗೋಪಾಲ ಕಲ್ಲೂರಾಯ ಮಧೂರು ಅವರಿಗೆ ನೀಡಿ ಬಿಡುಗಡೆ ಗೊಳಿಸಿ ಮಾತನಾಡಿದರು. 

ಭಾಗವತನಾದರೂ, ವೇಷಧಾರಿ ಯಾ ದರೂ ಅಭಿಮಾನಿಗಳಿಗೆ ಮೆಚ್ಚುಗೆ ಯಾಗ ಬೇಕು ಎಂಬ ರೀತಿಯಲ್ಲಿ ಪ್ರದರ್ಶನ ನೀಡದೆ ಪರಂಪರೆ ಗನುಗುಣವಾಗಿ ಪ್ರದರ್ಶನ ನೀಡಬೇಕು. ಅದನ್ನು ಪ್ರೇಕ್ಷಕ ಮೆಚ್ಚಿಕೊಳ್ಳಬೇಕು. ಅದು ನಿಜವಾದ ಅಭಿಮಾನ ಎಂಬುದಾಗಿ ಹೇಳಿದರು. ಪ್ರೇಕ್ಷಕನಿಗೂ ಕಲಾಭಿಮಾನ ಉತ್ತಮ. ಆದರೆ ಕಲಾವಿದನ ಅಭಿಮಾನ ಹೆಚ್ಚಾಗ ಬಾರದು ಎಂಬ ಕಿವಿಮಾತನ್ನೂ ಹೇಳಿದರು. 

ಮಧೂರು ಪರಿಸರ ಯಕ್ಷಗಾನಕ್ಕೆ ಅದೆಷ್ಟೋ ಉತ್ತಮ ಕಾಣಿಕೆ ನೀಡಿದೆ. ಉಳಿಯ ಧನ್ವಂತರಿ ಸನ್ನಿಧಿ ಹಾಗು ಮಧೂರು ಮಹಾಗಣಪತಿಯ ಸನ್ನಿಧಿ ಹಲವಾರು ಹಿರಿಯ ಕಲಾವಿದರನ್ನು ಪೋಷಿಸಿ ಬೆಳೆಸಿದೆ. ಅಂತಹ ಪುಣ್ಯ ಸ್ಥಳದಲ್ಲಿ ಇಂದಿನ ಯುವ ಸಮೂಹ ಯಕ್ಷಗಾನದತ್ತ ಆಕರ್ಷಿತರಾಗುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಯಕ್ಷಗಾನದಂತಹ ಪಾರಂಪರಿಕ ಕಲೆ ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ಯುವಕರು ಮುಂದೆ ಬರಬೇಕು ಎಂದು ವೇ|ಮೂ| ವೇಣುಗೋಪಾಲ ಕಲ್ಲೂರಾಯ  ಮಧೂರು ಅವರು ಹೇಳಿದರು. 

ಸೆ. 10ರಂದು ಮಧೂರು ಪರಕ್ಕಿಲ ಶ್ರೀ ಮಹಾದೇವಸ್ಥಾನದ ನಟರಾಜ ಸಭಾಭವನದಲ್ಲಿ ತೆಂಕು ಬಡಗುತಿಟ್ಟು ಗಳ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ಸತ್ಯಹರಿಶ್ಚಂದ್ರ’ ಹಾಗೂ “ಮಕರಾಕ್ಷ ಕಾಳಗ’ವೆಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

Advertisement

ದಿನೇಶ್‌ ಅಮ್ಮಣ್ಣಾಯ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪಟ್ಲ ಸತೀಶ್‌ ಶೆಟ್ಟಿ ಅವರ ಭಾಗವತಿಕೆಗೆ ವಿನಯಾಚಾರ್ಯ ಕಡಬ, ದೇಲಂತಮಜಲು, ಚೈತನ್ಯ ಕೃಷ್ಣ, ಗುರುಪ್ರಸಾದ ಬೊಳಿಂಜಡ್ಕ, ರಾಜೇಂದ್ರ ಕೃಷ್ಣ ಅವರು ಹಿಮ್ಮೇಳದಲ್ಲಿ ಸಹಕರಿಸುವರು. 

ಸುಬ್ರಾಯ ಹೊಳ್ಳ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ರಾಧಾಕೃಷ್ಣ ನಾವಡ, ಶಶಿಕಾಂತ ಶೆಟ್ಟಿ ಕಾರ್ಕಳ, ಲಕ್ಷ್ಮ¾ಣ ಕುಮಾರ ಮರಕಡ, ಮಹೇಶ್‌ ಮಣಿಯಾಣಿ, ಉಜಿರೆ ನಾರಾಯಣ ಹಾಸ್ಯಗಾರ, ಪಡುಮಲೆ ನಾರಾಯಣ ಪಾಟಾಳಿ ಮುಂತಾದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದು, ಹಿರಿಯ ಕಲಾವಿದ ಸುಂದರಕೃಷ್ಣ ಗಟ್ಟಿ ಮಧೂರು ಅವರಿಗೆ ಗೌರವಾರ್ಪಣೆ ಜರಗಲಿದೆ. 

ಆಮಂತ್ರಣ ಪತ್ರಿಕೆ ಬಿಡುಗಡೆ   ಕಾರ್ಯಕ್ರದಲ್ಲಿ   ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವಿಟuಲ ಗಟ್ಟಿ ವಹಿಸಿದ್ದರು. ಯುವಕಲಾವಿದ ರಾಮಚಂದ್ರ ಹೊಳ್ಳ ಎಂ.ಜಿ. ಅತಿಥಿ ಯಾಗಿ ಭಾಗವಹಿಸಿದರು. ಸುನಿಲ್‌ ಮಧೂರು ಸ್ವಾಗತಿಸಿದರು. ಪ್ರವೀಣ ರೈ ಬೇಳ ವಂದಿಸಿದರು. ಕಾರ್ಯದರ್ಶಿ ಕೃಷ್ಣ ಪ್ರಸಾದ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಗಣೇಶ ತುಂಗ, ಮಹೇಶ ಮಧೂರು, ಶರತ್‌ ಮಧೂರು, ರಾಮಕೃಷ್ಣ ಶೆಟ್ಟಿ   ಬೇರ, ಮುರಳಿ ನಾವಡ, ಸಂದೀಪ್‌ ಮಧೂರು ಸಹಕರಿಸಿದರು. ಉದಯ ನಾವಡ ಸಲಹೆಗಳನ್ನಿತ್ತರು. 
 

Advertisement

Udayavani is now on Telegram. Click here to join our channel and stay updated with the latest news.

Next