Advertisement
ಬೊಕ್ಕಪಟ್ಣದ ರಾಜ್‌ಪ್ರಹ್ಲಾದ್ ಮತ್ತು ಸುಜಾತಾ ಮೆಂಡನ್ ದಂಪತಿಯ ಪುತ್ರಿ ಮೇಘಾ ಮೆಂಡನ್ ಅವರೇ ಇತರರು ಎಸೆದು ಹೋದ ಬಾಟಲ್ಗಳಿಗೆ ಬಾಟಲ್ ಆರ್ಟ್ ಮೂಲಕ ಕಲಾತ್ಮಕ ರೂಪ ನೀಡುತ್ತಿರುವವರು. ಶ್ರೀನಿವಾಸ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಅಂತಿಮ ವರ್ಷದ ಆರ್ಕಿಟೆಕ್ಚರ್ ವಿದ್ಯಾರ್ಥಿನಿಯಾಗಿರುವ ಮೇಘಾ, ತಮ್ಮ ಸ್ನೇಹಿತರಾದ ಶ್ರಾವ್ಯಾ ಬೊಕ್ಕಪಟ್ಣ, ಅಕ್ಷಯ್ ಪುತ್ರನ್, ಯಶವಂತ್ ಮೆಂಡನ್ ಅವರ ಸಹಕಾರದೊಂದಿಗೆ ಕಳೆ ದೆರಡು ವರ್ಷಗಳಿಂದ ಬಾಟಲ್ ಆರ್ಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ಜನರು ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರಿಗೊಂದಿಗೆ ಸಮಯ ಕಳೆಯಲು ಬೀಚ್‌ಗಳಿಗೆ ಹೋಗುವಾಗ ಕುಡಿಯಲು ಪಾನೀಯಗಳನ್ನು ಬಾಟಲಿಗಳಲ್ಲಿ ಕೊಂಡೊಯ್ಯುತ್ತಾರೆ. ಆದರೆ ಸೇವನೆ ಬಳಿಕ ಆ ಬಾಟಲಿಗಳನ್ನು ಅಲ್ಲೇ ಎಸೆದು ಬರುತ್ತಾರೆ. ಹೀಗೆ ಎಸೆಯುವುದರಿಂದ ಅಂತರ್ಜಲ, ಜಲಚರ ಜೀವಿಗಳಿಗೆ ಸಮಸ್ಯೆಯಾಗುತ್ತದೆ. ಪರಿಸರ ಮಾಲಿನ್ಯಕ್ಕೂ ಇದು ಕಾರಣವಾಗುತ್ತದೆ. ಬಾಟಲ್ಗಳನ್ನು ಎಸೆಯದೇ ಅವುಗಳ ಮೂಲಕ ಮನೆಯ ಅಂದವನ್ನು ಹೆಚ್ಚಿಸ ಬಹುದು ಎಂದು ಯುವ ಸಮುದಾಯ ಸಹಿತ ಎಲ್ಲರಿಗೂ ತಿಳಿಸಿಕೊಡುವ ಉದ್ದೇಶದಿಂದ ಬಾಟಲ್ ಆರ್ಟ್ ಮಾಡುತ್ತಿದ್ದೇನೆ ಎನ್ನುತ್ತಾರೆ ಮೇಘಾ ಮೆಂಡನ್.