Advertisement

ಶಾಲಾ ಕಲಿಕೆಯಲ್ಲಿ ಹಿಂದೆ, ಯಕ್ಷಗಾನದಲ್ಲಿ ಮುಂದೆ

11:36 AM Feb 16, 2021 | Team Udayavani |

ಬೆಂಗಳೂರು: ಕಲಿಕೆಯಲ್ಲಿ ನಾನು ಬಹಳಷ್ಟು ಹಿಂದೆ. ಆದರೆ, ಕಲೆ ಸೇರಿದಂತೆ ಇನ್ನಿತರ ಚಟುವಟಿಕೆ ಯಲ್ಲಿ ಮುಂದೆ. ಯಕ್ಷಗಾನ ಕಲೆಬಗ್ಗೆ ತೋರಿದ ಆಸಕ್ತಿಯೇ ನನ್ನ ಬದುಕನ್ನು ರೂಪಿಸಿತು ಎಂದು ಹಿರಿಯ ಯಕ್ಷಗಾನ ಕಲಾವಿದ ಮತ್ತು ಮಕ್ಕಳ ಮೇಳದ ಸಂಸ್ಥಾಪಕ ಎಚ್‌.ಶ್ರೀಧರ ಹಂದೆ ಹೇಳಿದರು.

Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿ ಸೋಮವಾರ ಆನ್‌ಲೈನ್‌ಮೂಲಕ ಹಮ್ಮಿಕೊಂಡಿದ್ದ ನೆನಪಿನ ಬುತ್ತಿ ಕಾರ್ಯಕ್ರಮದಲ್ಲಿ ದಿನದ ಅತಿಥಿಯಾಗಿ ಭಾಗ ವಹಿಸಿ ದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಶ್ರೀನಿವಾಸ ಸಾಸ್ತಾನ ಅವರು ನಡೆಸಿದ ಸಂವಾದದಲ್ಲಿ ಹಂದೆಯವರು ತಮ್ಮ ಬಾಲ್ಯ, ಸಾಗಿಬಂದ ಹಾದಿಸೇರಿದಂತೆ ಯಕ್ಷಗಾನ ಕ್ಷೇತ್ರದ ಹಲವು ವಿಚಾರಗಳನ್ನು ಮೆಲಕು ಹಾಕಿದರು.

ನಮ್ಮದು ಕಲಾ ಪೋಷಣೆ ಮನೆತನ. ಮನೆ ಯಲ್ಲಿದ್ದ ಎಲ್ಲರೂ ಯಕ್ಷಗಾನ ಕಲೆ ಬಗ್ಗೆ ಅಪಾರ ಒಲವು ಉಳ್ಳವರಾಗಿದ್ದರು.ಯಕ್ಷಗಾನಕಲಾವಿ ದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಬಾಲ್ಯದಲ್ಲೆ ನಾನು ಯಕ್ಷಗಾವನ್ನು ನೋಡಿ ಬೆಳೆದೆ.ಈ ಕ್ಷೇತ್ರದ ಬಗ್ಗೆ ನನ್ನಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿತು ಎಂದರು.

ನಾನು ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದೆ. ಆ ನಂತರ ನಮ್ಮ ತಂದೆ ಅಧ್ಯಾಪಕರನ್ನಾಗಿ ಮಾಡಲು ಅಸಕ್ತಿ ತೋರಿದರು. ಕಡಿಮೆ ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣನಾದ ನನಗೆ ಯಕ್ಷಗಾನದಲ್ಲಿರುವ ಆಸಕ್ತಿಯೇ ಅಧ್ಯಾಪಕ ತರಬೇತಿಗೆ ಸೀಟು ಗಿಟ್ಟಿಸಿಕೊಟ್ಟಿತು ಎಂದರು.

ಸಾಲಿಗ್ರಾಮ ಮಕ್ಕಳ ಮೇಳ ಪರಿಕಲ್ಪನೆಯೇ ಭಿನ್ನವಾಗಿದೆ. ಯಕ್ಷಗಾನ ಕಲೆ ಭವಿಷ್ಯದಲ್ಲಿ ಮತ್ತಷ್ಟು ಬೆಳೆಯಬೇಕು ಎಂಬ ಹಂಬಲದಿಂದ ಊರೂರಿಗೆ ಹೋಗಿ ಮಕ್ಕಳವನ್ನು ಆಯ್ಕೆ ಮಾಡಿತಂಡಕಟ್ಟಿ ಯಕ್ಷಗಾನ ಆಡಿಸತೊಡಗಿದೆ. ಬರುಬರುತ್ತಾ ಮಕ್ಕಳಯಕ್ಷಗಾನಕ್ಕೆ ಆಸಕ್ತಿ ತೋರುವವರ ಸಂಖ್ಯೆ ಹೆಚ್ಚಿತು. ನಂತರಮಕ್ಕಳ ಮೇಳ ಪರಿಕಲ್ಪನೆ ಜನ್ಮತಾಳಿತು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದರು.

Advertisement

ಮಕ್ಕಳ ಮೇಳ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಮೇಳ ನಡೆಸುವಾಗ ಮಕ್ಕಳನ್ನು ಜವಾಬ್ದಾರಿಯಿಂದನೋಡಿಕೊಳ್ಳಬೇಕು.ಆ ಮಕ್ಕಳ ಆರೋಗ್ಯದ ಜತೆಗೆ ಅವರು ಮೇಳ ಮುಗಿದ ನಂತರ ಮನೆ ಹೋಗಿದ್ದಾರ ಇಲ್ಲವೋ ಎಂಬುವುದನ್ನು ಅರಿತುಕೊಳ್ಳಬೇಕು. ಮೇಳ ನಡೆಸುವಾಗ ಮಕ್ಕಳ ಆರೋಗ್ಯ ಕೈಕೊಡುವುದು ಸೇರಿದಂತೆ ಹಲವು ಅನುಭವ ಆಗಿದೆ. ಅದೆಲ್ಲವನ್ನು ಮೀರಿನಿಂತ ಹಿನ್ನೆಲೆಯಲ್ಲಿ ಮಕ್ಕಳ ಮೇಳಕ್ಕೆ ಮೆಚ್ಚುಗೆ ಬಂದಿದೆ ಎಂದರು.

ಮಕ್ಕಳ ಯಕ್ಷಗಾನಕ್ಕೆ ಮನಸೋತಿದ್ದ ಶಂಕರ್‌ನಾಗ್‌ :

ಹಿರಿಯ ಚಿತ್ರ ನಟ ಶಂಕರ್‌ ನಾಗ್‌ ಅವರು ಮಕ್ಕಳ ಯಕ್ಷಗಾನ ಮೇಳಕ್ಕೆ ಮನಸೋತಿದ್ದರು. ಅವರು ಪತ್ನಿಅರುಂಧತಿ ನಾಗ್‌ ಕೂಡ ಬೆಂಗಳೂರಿನ ರಂಗಶಂಕರದಲ್ಲಿ ಮಕ್ಕಳ ಯಕ್ಷಗಾನಕ್ಕೆ ಅವಕಾಶ ನೀಡಿದ್ದರು ಎಂದರು. ಅಮೆರಿಕಾ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ಮಕ್ಕಳ ಮೇಳ ನಡೆದಿವೆ. ಪೋಷಕರಿಂದ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಆದರೂ ಎಲ್ಲವನ್ನೂ ಸಂಬಾಳಿಸಿಕೊಂಡು ಮೇಳ ನಡೆಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next