Advertisement

ಅಪಘಾತ ತಡೆಯಲು “ಕೃತಕ ಬುದ್ಧಿಮತ್ತೆ’

11:29 PM Jun 10, 2021 | Team Udayavani |

ಬೆಂಗಳೂರು: ಸಂಚರಿಸುತ್ತಿರುವ ಸರಕಾರಿ ಬಸ್‌ ಯಾವುದಾ ದರೂ ವಾಹನಕ್ಕೆ ಢಿಕ್ಕಿ ಹೊಡೆಯುವ ಮೊದಲೇ ಚಾಲಕನಿಗೆ ಅಪಾಯದ ಮುನ್ಸೂಚನೆ ಸಿಗುವಂಥ ತಂತ್ರ ಜ್ಞಾನದ ಬಳಕೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಮುಂದಾಗಿದೆ.

Advertisement

ಕೆಲವು ಮುಂದುವರಿದ ರಾಷ್ಟ್ರ ಗಳಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಆದರೂ, ಸರಕಾರಿ ಸಾರಿಗೆ ಕ್ಷೇತ್ರಕ್ಕೆ ಇದು ಹೊಸದು. ಬೇರೆ ವಾಹನ  ಸಮೀಪಕ್ಕೆ ಬಂದಾಗ ಅಥವಾ ಚಾಲಕ ನಿದ್ರಿಸುತ್ತಿದ್ದರೆ ಅಲಾರಂ  ಮಾಡಿ ಕಂಟ್ರೋಲ್‌ ರೂಂಗೆ ಮಾಹಿತಿ ರವಾನಿಸುತ್ತದೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

“ಮೊದಲ ಹಂತದಲ್ಲಿ ಕೆಎಸ್‌ಆರ್‌ಟಿಸಿಯ 1,044 ಬಸ್‌ಗಳಲ್ಲಿ ಈ ತಂತ್ರಜ್ಞಾನವನ್ನು  ಅಳವಡಿಸಲು ಉದ್ದೇಶಿ ಸಿದ್ದು, ಮುಂದಿನ ದಿನಗಳಲ್ಲಿ  ಮತ್ತಷ್ಟು ವಾಹನಗಳಿಗೆ ವಿಸ್ತರಿಸಲಾಗುವುದು ಎಂದು  ಸವದಿ ತಿಳಿಸಿದ್ದಾರೆ.

ಯಾವ ಮಾರ್ಗಕ್ಕೆ ಆದ್ಯತೆ? :

ಘಟ್ಟ ಪ್ರದೇಶಗಳು ಹಾಗೂ ಹೆಚ್ಚು ಅಪಘಾತ ಸಂಭವಿಸುವ ಮಾರ್ಗ ಗಳಲ್ಲಿ ರಾತ್ರಿ ವೇಳೆ ಸಂಚರಿಸುವ ಬಸ್‌ಗಳಲ್ಲಿ ಈ ತಂತ್ರಜ್ಞಾನಗಳನ್ನು  ಅಳವಡಿಸಲಾಗುವುದು.  ದಕ್ಷಿಣ ಭಾರತದ ಸಾರ್ವಜನಿಕ ಸಾರಿಗೆ ಗಳಲ್ಲಿ ಇದು ಮೊದಲ ಪ್ರಯೋಗ ಎಂದು ಕೆಎಸ್‌ಆರ್‌ಟಿಸಿ ಎಂ.ಡಿ. ಶಿವಯೋಗಿ ಕಳಸದ   ತಿಳಿಸಿದರು.

Advertisement

ಕೃತಕ ಬುದ್ಧಿಮತ್ತೆಯನ್ನು ಪ್ರಯಾಣಿಕರ ಸುರಕ್ಷೆಗಾಗಿ ಅಳವಡಿಸಲು ನಿಗಮವು ಉದ್ದೇಶಿಸಿದೆ. ಇದನ್ನು ಅಳವಡಿಸಿರುವ ಬಸ್‌ಗಳ  30 ಮೀಟರ್‌ ಅಂತರದಲ್ಲಿ ಯಾವುದೇ ವಾಹನ ಹಾದುಹೋದರೆ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ಸಾರ್ವಜನಿಕ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಇದು ವಿನೂತನ ಪ್ರಯೋಗ.ಲಕ್ಷ್ಮಣ ಸವದಿ , ಸಾರಿಗೆ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next