Advertisement
ರೈಲ್ವೇ ಇಲಾಖೆ ತನ್ನ ಸಿಗ್ನಲಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆ ಜಾರಿ ಮಾಡಲು ಮುಂದಾಗಿದೆ. ನೈಋತ್ಯ ರೈಲ್ವೇಯ ಬೆಂಗಳೂರು-ಮೈಸೂರು ವಿಭಾಗ, ಪಶ್ಚಿಮ ರೈಲ್ವೇಯ ಅಹ್ಮದಾಬಾದ್-ವಡೋದರಾ ಮಾರ್ಗಗಳನ್ನು ಈ ಉದ್ದೇಶಕ್ಕಾಗಿ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.
ಸದ್ಯ ದೇಶದ ರೈಲು ಎಂಜಿನ್‌ಗಳು ಡೀಸೆಲ್ ಚಾಲಿತ. ಇನ್ನು ಕೆಲವೇ ವರ್ಷಗಳಲ್ಲಿ ಹಂತ ಹಂತವಾಗಿ ಅವುಗಳು ಇತಿಹಾಸದ ಪುಟಕ್ಕೆ ಸೇರಲಿವೆ. ಅಂದರೆ ಅವುಗಳ ಸ್ಥಾನದಲ್ಲಿ ವಿದ್ಯುತ್‌ನಿಂದ ಚಲಿಸುವ ಎಂಜಿನ್‌ಗಳನ್ನು ತರಲಾಗುತ್ತದೆ. ಇದರಿಂದಾಗಿ ಪರಿಸರದ ಉಳಿವಿಗೆ ಕೊಡುಗೆ ಕೊಡುವ ಜತೆಗೆ ಇಲಾಖೆಗೆ ವಾರ್ಷಿಕವಾಗಿ 10,500 ಕೋಟಿ ರೂ. ಉಳಿತಾಯವೂ ಆಗಲಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಶೇ.100ರಷ್ಟು ವಿದ್ಯುತ್ ಮಾರ್ಗ ರಚಿಸುವ ಬಗ್ಗೆ ಇಲಾಖೆ ಈಗಾಗಲೇ ಕ್ರಮ ಕೈ ಗೊಂಡಿದೆ ಎಂದಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ 30 ಸಾವಿರ ಕಿಮೀ ದೂರವನ್ನು ವಿದ್ಯುದೀಕರಣಗೊಳಿಸಲು 30 ರಿಂದ 35 ಸಾವಿರ ಕೋಟಿರೂ.ವೆಚ್ಚ ಮಾಡಲಾಗುತ್ತದೆ ಎಂದಿದ್ದಾರೆ ಗೋಯಲ್.
Related Articles
ಮತ್ತೂಂದು ಪ್ರಮುಖ ಯೋಜನೆಯೊಂದರಲ್ಲಿ ಏರ್‌ಇಂಡಿಯಾ ಮಾರಾಟದ ಮಾದರಿಯಲ್ಲಿ ರೈಲ್ವೇ ಇಲಾಖೆ ಹೊಂದಿರುವ ವಿದ್ಯುತ್ ಲೈನ್‌ಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ. 30 ಸಾವಿರ ಕಿ.ಮೀ.ದೂರದ ವಿದ್ಯುತ್ ಲೈನ್ ಅನ್ನು ಪ್ರತಿ ಕಿಮೀಗೆ 1 ಕೋಟಿ ರೂ.ಗಳಂತೆ ವಾರ್ಷಿಕವಾಗಿ 30 ಸಾವಿರ ಕೋಟಿ ರೂ. ಲಾಭ ಪಡೆಯುವ ಯೋಜನೆ ಇದಾ ಗಿದೆ. ಗುತ್ತಿಗೆ ಆಧಾರದಲ್ಲಿ ವಿದ್ಯುತ್ ಲೈನ್ ಅನ್ನು ಖಾಸಗಿ ಸಂಸ್ಥೆಗಳಿಂದ ಪಡೆಯುತ್ತದೆ. ಆ ಕಂಪೆನಿಗೆ ನಿಗದಿತ ಬಡ್ಡಿ ನೀಡ ಲಾಗುತ್ತದೆ. ವಿದ್ಯುತ್ ಲೈನ್‌ಗಳ ನಿರ್ವಹಣೆ ಕಾರ್ಯಗಳನ್ನು ಇಲಾಖೆಯೇ ನಿರ್ವಹಿಸಲಿದೆ ಎಂದಿದ್ದಾರೆ ಅಧಿಕಾರಿ.
Advertisement