Advertisement

ಸಿಬಿಎಸ್‌ಇ ಪಠ್ಯಕ್ಕೆ ಕೃತಕ ಬುದ್ಧಿಮತ್ತೆ ಸೇರ್ಪಡೆ

02:52 AM Mar 25, 2019 | Sriram |

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ), ತನ್ನ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌), ಶಿಶುಗಳ ಆರೈಕೆ ಮತ್ತು ಯೋಗ ವಿಷಯಗಳನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. 2019-20ನೇ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ.

Advertisement

9ನೇ ತರಗತಿ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 6ನೇ ವಿಷಯವಾಗಿ ಕೃತಕ ಬುದ್ಧಿಮತ್ತೆ ಸೇರ್ಪಡೆಗೊಳ್ಳಲಿದ್ದು, ಶಿಶುಗಳ ಆರೈಕೆ ಮತ್ತು ಯೋಗ ಐಚ್ಛಿಕ ವಿಷಯಗಳಾಗಿರುತ್ತವೆ.

ನಿಯಮಗಳ ಪ್ರಕಾರ, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಐದು ವಿಷಯಗಳನ್ನು ಕಲಿಯಬೇಕಿದ್ದು, ಕೌಶಲ್ಯ ಕುರಿತ ವಿಷಯವೊಂದನ್ನು 6ನೇ ವಿಷಯವಾಗಿ ಸೇರ್ಪಡೆಗೊಳಿಸಲು ಅವಕಾಶವಿದೆ. ಹಾಗಾಗಿ, ಕೃತಕ ಬುದ್ಧಿಮತ್ತೆಯನ್ನು 6ನೇ ವಿಷಯವನ್ನಾಗಿ ಸೇರ್ಪಡೆಗೊಳಿಸಲಾಗಿದೆ. ಕಡ್ಡಾಯ ವಿಷಯಗಳಾದ ವಿಜ್ಞಾನ, ಗಣಿತ ಅಥವಾ ಸಮಾಜ ಶಾಸ್ತ್ರ ದಲ್ಲಿ ಯಾವುದಾದರೊಂದು ವಿಷಯದಲ್ಲಿ ವಿದ್ಯಾರ್ಥಿ ಅನುತ್ತೀರ್ಣನಾದಲ್ಲಿ, ಆ ವಿಷಯದ ಬದಲಿಗೆ 6ನೇ ವಿಷಯವನ್ನು ಪರ್ಯಾಯ ವಿಷಯವನ್ನಾಗಿ ಪರಿಗಣಿಸಿ, ಅದರಲ್ಲಿ ಆತ ಪಡೆದ ಅಂಕಗಳನ್ನು ಫ‌ಲಿತಾಂಶಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next