Advertisement

ಕೋಣಿ ರಾಜ್ಯ ಹೆದ್ದಾರಿಯಲ್ಲಿ ಕೃತಕ ಹಂಪ್ಸ್‌

11:40 PM Feb 03, 2020 | Team Udayavani |

ಬಸ್ರೂರು: ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಬಸ್ರೂರು ಮೂರುಕೈನಿಂದ ಬಸ್ರೂರಿಗೆ ಬರುವ ರಸ್ತೆಯ ಕೋಣಿಯ ಎಚ್‌.ಎಂ.ಟಿ. ರಸ್ತೆಯ ಹತ್ತಿರ ಹೆದ್ದಾರಿಯ ತಳಭಾಗದಲ್ಲಿ ಒಂದು ಪೈಪ್‌ ಹಾಕಲು ಈ ಮೊದಲು ರಸ್ತೆಯಡಿ ಹೊಂಡ ಮಾಡಿದ್ದರು. ಆಗ ರಸ್ತೆಯ ಮಧ್ಯೆ ಉದ್ದಕ್ಕೆ ಹೊಂಡ ಬಿದ್ದಿತ್ತು. ಈಗಲೂ ಹಾಗೆಯೇ ಇದೆ.

Advertisement

ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ತಗ್ಗಾದ ರಸ್ತೆಯ ಉದ್ದದ ಹೊಂಡವನ್ನು ಜಲ್ಲಿ – ಕಲ್ಲನ್ನು ಸೇರಿಸಿ ಮುಚ್ಚಲಾಗಿತ್ತು. ಇದರ ಪರಿಣಾಮ ಈಗ ಈ ಪ್ರದೇಶ
ದಲ್ಲಿ ರಸ್ತೆಯ ಅಡ್ಡಕ್ಕೆ ಉದ್ದಕ್ಕೂ ಕೃತಕ ಹಂಪ್ಸ್‌ ನಿರ್ಮಾಣವಾದಂತಾಗಿದೆ. ಯಾವುದೇ ವಾಹನ ನೇರವಾಗಿ ಹೋದರೆ ಇಲ್ಲಿ ಪಲ್ಟಿ ಹೊಡೆಯುವುದು ಖಂಡಿತ ಎನ್ನುವಂತಾಗಿದೆ.

ಕೋಣಿ ರಸ್ತೆಯ ಈ “ಏರು ತಗ್ಗನ್ನು’ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next