Advertisement
ಶಾರದಾ ಕಲ್ಯಾಣ ಮಂಟಪದ ಸಮೀಪವಿರುವ ರಾ.ಹೆ. ಪಕ್ಕದಲ್ಲಿ ಡ್ರೈನೇಜ್ ನೀರು ಹರಿದುಹೋಗಲೆಂದು ಈ ಹೊಂಡ ನಿರ್ಮಿಸಿ ಅದೆಷ್ಟೋ ತಿಂಗಳುಗಳೇ ಕಳೆದಿವೆ. ಆದರೆ ಮಳೆಸುರಿದ ಕಾರಣ ಕಾಮಗಾರಿಯೂ ಸ್ಥಗಿತಗೊಂಡಿದೆ. ಪರಿಣಾಮ ಹೊಂಡದಲ್ಲಿ ಕೆಸರು ನೀರು ನಿಂತು ಮಲೇರಿಯಾ ರೋಗವನ್ನು ಆಹ್ವಾನಿಸುವ ಕೃತಕ ಗುಂಡಿಯಂತಾಗಿದೆ. ಇದನ್ನು ರಾ.ಹೆ.ಇಲಾಖೆ ಹಾಗೂ ನಗರಸಭೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ನೀರು ನಿಂತ ಪರಿಣಾಮ ಕತ್ತಲು ಆವರಿಸುತ್ತಿದ್ದಂತೆ ಈ ಜಾಗ ಸೊಳ್ಳೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಅಂಗಡಿ-ಮುಂಗಟ್ಟು, ರಿಕ್ಷಾ ತಂಗುದಾಣಗಳು ಇಲ್ಲಿದ್ದು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ವಿಸ್ತರಣೆ ಕಾಮಗಾರಿಯೂ ಮುಂದಕ್ಕೆ ಹೋಗುವಂತೆ ಗೋಚರಿಸುತ್ತಿಲ್ಲ. ಪರಿಣಾಮ ಮಳೆಗಾಲದಲ್ಲಿ ಅಭಿವೃದ್ಧಿಯ ನೆಪದಲ್ಲಿ ರೋಗವನ್ನು ಆಹ್ವಾನಿಸುವಂತಾಗಿದೆ. ಮಲೇರಿಯಾ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿದರು ಕೂಡ ಇಂತಹ ಕಾಮಗಾರಿಗಳು ಅದಕ್ಕೆ ವಿರುದ್ಧªವಾಗುತ್ತಿದೆ.
Related Articles
ಚರಂಡಿಯಲ್ಲಿ ಕೇಬಲ್ ವಯರ್‌ಗಳು ಹಾಗೂ ಕಬ್ಬಿಣದ ರಾಡ್‌ಗಳು ಎದ್ದು ಕಾಣುತ್ತಿವೆ. ರಸ್ತೆತುಂಬ ಕೆಸರು ತುಂಬಿಕೊಂಡು ಪಾದಚಾರಿಗಳೂ ಸಮಸ್ಯೆಗೀಡಾಗುತ್ತಿದ್ದಾರೆ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದ್ದ ಹೆದ್ದಾರಿ ಇಲಾಖೆ ಕೂಡ ಸುಮ್ಮನಾಗಿರುವುದು ಸ್ಥಳೀಯರನ್ನು ಕಂಗೆಡಿಸಿದೆ.
Advertisement