Advertisement

ಕೋವಿಡ್‌ ಹಿನ್ನೆಲೆ: ಧಾರವಾಡ ಬಂಡೆಮ್ಮ ದೇವಸ್ಥಾನದಲ್ಲಿ ಕೃತಕ ಆನೆ ಬಳಸಿ ಜಂಬೂ ಸವಾರಿ!

11:15 AM Oct 27, 2020 | sudhir |

ಧಾರವಾಡ: ಕೋವಿಡ್‌-19 ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಹಬ್ಬ ಆಚರಿಸಲಾಯಿತು. ಅದರಲ್ಲೂ ಜೀವಂತ ಆನೆಗಳ ಬದಲಾಗಿ ಕೃತಕ ಆನೆಯ ಮೇಲೆ ದಸರಾ ಜಂಬೂ ಸವಾರಿ ಮೆರವಣಿಗೆ ನೆರವೇರಿಸಲಾಯಿತು.  ದಸರಾ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ಕೆಲಗೇರಿ ಕಲಾವಿದ ಮಂಜುನಾಥ ಹಿರೇಮಠ ತಯಾರಿಸಿದ ಕೃತಕ (ಓಮಿನಿ ವಾಹನ) ಆನೆ ಅಂಬಾರಿ ಮೆರವಣಿಗೆ ರವಿವಾರ ಜರುಗಿತು.

Advertisement

ಬಂಡೆಮ್ಮ ದೇವಸ್ಥಾನದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆಗೆ ಪೂಜೆ ಸಲ್ಲಿಸಲಾಯಿತು. ಗಾಂಧಿ  ನಗರದಲ್ಲಿನ ಬಂಡೆಮ್ಮ ದೇವಸ್ಥಾನದಿಂದ ಆರಂಭವಾಗಿ ಈಶ್ವರ ದೇವಸ್ಥಾನ ತಲುಪಿ ನಂತರ ಬಂಡೆಮ್ಮ ದೇವಸ್ಥಾನಕ್ಕೆ ಮರಳಿತು. ಕೋವಿಡ್‌
ಮಾರ್ಗಸೂಚಿಯಂತೆ ಸಾಂಕೇತಿಕವಾಗಿ ಡೊಳ್ಳು ತಂಡ ಮತ್ತು ಕಡಿಮೆ ಪ್ರಮಾಣದಲ್ಲಿ ಸಾರ್ವಜನಿಕರು ಮೆರವಣಿಗೆಯಲ್ಲಿ
ಪಾಲ್ಗೊಂಡಿದ್ದರು. ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ, ಎಪಿಎಂಸಿ ಉಪಾಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಪಿ.ಎಚ್‌. ಕಿರೇಸೂರ ಮೊದಲಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಪೇಶಾವರ: ಭಾರೀ ಸ್ಫೋಟ, ಏಳು ಮಕ್ಕಳ ಸಾವು, 70 ಮಂದಿಗೆ ಗಾಯ

ಗೌಳಿಗಲ್ಲಿಯ ಮೆರವಣಿಗೆ: ಧಾರವಾಡ ಮೂಲ ಜಂಬೂ ಸವಾರಿ ಮೆರವಣಿಗೆ ಗೌಳಿಗಲ್ಲಿ ಮಾರುತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಜನಪದ ವಾದ್ಯ ಮೇಳದೊಂದಿಗೆ ಸರಳವಾಗಿ ನಡೆಯಿತು. ಮಹಿಳೆಯರಿಂದ ಆರತಿ ಹಾಗೂ ಶೂರಶೆಟ್ಟಿಕೊಪ್ಪದ ಕರಡಿ ಮಜಲು ತಂಡದೊಂದಿಗೆ ಮೆರವಣಿಗೆ ಮೂಲಕ ಮಂಜುಗೌಡ ಪಾಟೀಲ ಅವರ ಮನೆಗೆ ತೆರಳಿಗೆ ಮಾರುತಿ ದೇವರ ಬೆಳ್ಳಿ
ಮೂರ್ತಿಯ ಮೆರವಣಿಗೆ ಶ್ರೀಮಠದ ವರೆಗೆ ನಡೆಯಿತು. ನಂತರ ದೇವಸ್ಥಾನದಲ್ಲಿ ಅರ್ಚಕರಿಂದ ಶ್ರೀಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೆಲಗೇರಿ ಕಲಾವಿದ ಮಂಜುನಾಥ ಹಿರೇಮಠ ತಯಾರಿಸಿದ ಕೃತಕ ಆನೆ ಅಂಬಾರಿಯಲ್ಲಿ ಮಾರುತಿ ದೇವರ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು.

ಮಾರುತಿ ದೇವರ ಜಂಬೂ ಸವಾರಿ ಮೆರವಣಿಗೆಗೆ ಮಂಜುಗೌಡ ಪಾಟೀಲ ಅವರು ಪುಷ್ಪ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ದೇವಸ್ಥಾನದ ಸುತ್ತಲೂ ಐದು ಸುತ್ತು ಪ್ರದಕ್ಷಣೆ ಹಾಕಿದ ನಂತರ ಮಾರುತಿ ದೇವರ ಕೆಳಗಿಸಿ, ಬನ್ನಿ ಮುಡಿಯುವ
ಕಾರ್ಯಕ್ಕೆ ಚಾಲನೆ ನೀಡಲಾಯಿತು. ಗೌಳಿಗಲ್ಲಿ ಮುಖಂಡರಾದ ಮಂಜುಗೌಡ ಪಾಟೀಲ, ಹನುಮೇಶ ಸರಾಫ, ಆರ್‌.ಎಸ್‌. ಜಂಬಗಿ, ಪ್ರಕಾಶ ಸುಣಗಾರ, ಹನುಮಂತ ಕಮತರ, ಪ್ರಸಾದ ಶೆಟ್ಟರ, ಪ್ರಶಾಂತ ಯರಗಂಬಳಿಮಠ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next