Advertisement

ಅವರೆ ಕಾಳು ಸಾರೆಂದರೆ ಶ್ರೀಗಳಿಗೆ ಬಲು ಇಷ್ಟ

03:50 PM Apr 01, 2021 | Team Udayavani |

ಸಿದ್ಧಗಂಗಾ ಹಿರಿಯ ಶ್ರೀಗಳ ಆಪ್ತ ವೈದ್ಯರುಶ್ರೀಗಳ ಆರೋಗ್ಯ ಕ್ರಮ ಬಹಳ ಕಟ್ಟುನಿಟ್ಟಿನದು. ಮಿತ ಆಹಾರಶ್ರೀಗಳ ಆರೋಗ್ಯದ ಗುಟ್ಟು. ಶರೀರಕ್ಕ ಎಷ್ಟು ಅಹಾರ ಬೇಕುಅದನ್ನು ಮಾತ್ರ ಸ್ವೀಕರಿಸುತ್ತಿದ್ದರು. ಶ್ರೀಗಳು ಶರೀರವನ್ನುಕಾಪಾಡಿಕೊಳ್ಳುವುದಕ್ಕೆ ಮಾತ್ರ ಆಹಾರ ಸ್ವೀಕರಿಸಬೇಕು ಎನ್ನುವುದುಶ್ರೀಗಳ ಗುರಿಯಾಗಿತ್ತು. ಶ್ರೀಗಳಿಗೆ ದಕ್ಷಿಣ ಭಾರತದ ಆಹಾರವೆಂದರೆಬಹಳಷ್ಟು ಪ್ರಿಯವಾಗಿತ್ತು.

Advertisement

ಕಾಲಕಾಲಕ್ಕೆ ದೊರೆಯುವ ಹಣ್ಣುಗಳನ್ನುಸ್ವೀಕರಿಸುವುದು ಬಹಳ ಪ್ರಿಯ. ಮಠಕ್ಕೆಬರುವ ಭಕ್ತರು ಯಥೇತ್ಛವಾಗಿಕಾಳುಗಳನ್ನು ನೀಡುತ್ತಿದ್ದರು. ಅದರಲ್ಲೇಕಾಳುಗಳ ಸಲಾಡ್‌ನ್ನು ಶ್ರೀಗಳು ಬಹಳಷ್ಟುಇಷ್ಟವಾಗಿ ಸ್ವೀಕರಿಸುತ್ತಿದ್ದರು. ಶ್ರೀಗಳುಸದಾ ಉರುಳಿಕಾಳಿನ ಸಾರೆಂದರೆ ಬಹಳಷ್ಟು ಪ್ರಿಯ. ಆ ಸಾರುಇದ್ದರೆ ಮೂರು ಹೊತ್ತು ಅದನ್ನು ನೀಡಿದರೂ ಸ್ವೀಕರಿಸುತ್ತಿದ್ದರು.ಬೇಯಿಸಿದ ಕಡಲೆಬೀಜ, ಹಲಸಿನತೊಳೆ, ಮಾವಿನ ಹಣ್ಣು ಶ್ರೀಗಳಪ್ರಿಯವಾದ ಹಣ್ಣುಗಳಾಗಿತ್ತು.

ಶ್ರೀಗಳು ಯಾವತ್ತೂ ಸೇಬು, ದ್ರಾಕ್ಷಿ,ಕಿತ್ತಲೆ ನಂತರ ಹಣ್ಣುಗಳಿಗಿಂತ ರೈತರ ತೋಟದಲ್ಲಿ ಸಿಗುತ್ತಿದ್ದ ಹಲಸುಮಾವು ಹೆಚ್ಚಾಗಿ ಸ್ವೀಕರಿಸುತ್ತಿದ್ದರು.ಅವರೆಕಾಳಿನ ಕಾಲ ಬಂತು ಎಂದರೆ ಶ್ರೀಗಳ ಅಡುಗೆಮನೆಯಿಂದ ಸದಾ ಅವರೆ ಕಾಳಿನ ಸಾಂಬಾರಿನ ವಾಸನೆ ಸದಾಬರುತ್ತಿತ್ತು. ಅವರೆಕಾಯಿಯ ಕಾಲ ಮುಗಿಯುವವರೆಗೂ ಶ್ರೀಗಳುಅದನ್ನು ಬಿಟ್ಟರೆ ಬೇರೆ ಯಾವ ಸಾರಿನ ಬಗ್ಗೆಯೂ ಹೆಚ್ಚಿನ ಅಪೇಕ್ಷೆಹೊಂದಿದವರಲ್ಲ. ಅವರೆ ಕಾಯಿಯ ಕಾಲ ಮುಗಿದರೆ ಶೇಖರಿಸಿಟ್ಟಉರುಳಿಕಾಳಿನ ಸಾಂಬರ್‌ ಬಯಸುತ್ತಿದ್ದರು. ಇದಷ್ಟೇ ಅಲ್ಲದೆಶ್ರೀಗಳಿಗೆ ಆಯಾ ಹಬ್ಬಗಳಿಗೆ ಮಾಡುತ್ತಿದ್ದ ವಿಶೇಷ ಖಾದ್ಯಗಳ ಬಗ್ಗೆಆಸಕ್ತಿ ಇರುತ್ತಿತ್ತು.

ಜೊತೆಗೆ ಸಿಹಿ ಖಾದ್ಯಗಳನ್ನು ಏನೇ ಮಾಡಲಿಅದನ್ನು ಸಿದ್ಧಗಂಗಾ ಮಠದ ಎಲ್ಲಾ ಮಕ್ಕಳಿಗೂ ಮಾಡಲೇಬೇಕಿತ್ತು.ಯುಗಾದಿ ಸಮಯದಲ್ಲಿ ಒಬ್ಬಟ್ಟು ತಯಾರಿಸಿದರೆ ಅದನ್ನೇಮಠದ ಎಲ್ಲಾ ಮಕ್ಕಳಿಗೂ ಮಾಡಬೇಕಿತ್ತು. ಅದಕ್ಕೆಂತಲೇ ಬೇರೆಊರುಗಳಿಂದ ಅಡುಗೆಯವರನ್ನು ಕರೆಸುತ್ತಿದ್ದರು. ಲಡ್ಡುಮಾಡಿದರೂ, ಮೈಸೂರುಪಾಕ್‌ ಮಾಡಿದರೂ ಅದು ಮಕ್ಕಳಿಗೆಕೊಟ್ಟಿದ್ದಾರೆ ಎಂದು ಖುದ್ದಾಗಿ ಮಕ್ಕಳ ಪಂಕ್ತಿಯಲ್ಲಿ ಗಮನಿಸುತ್ತಿದ್ದರು.

ಮಕ್ಕಳ ಪ್ರಸಾದವಾಗಿದೆ ಎಂದು ಅವರ ಶಿಷ್ಯಂದಿರು ಹೇಳಿಯೇಊಟಕ್ಕೆ ಶ್ರೀಗಳನ್ನು ಅಣಿ ಮಾಡುತ್ತಿದ್ದರು. ಶ್ರೀಗಳಿಗೆ ಶಾವಿಗೆ ಮತ್ತುರೆವೆಯ ಉಂಡೆ ಎಂದರೆ ಎಲ್ಲಾ ಸಿಹಿ ಪದಾರ್ಥಗಳಿಂಗಿಂತಅಚ್ಚುಮೆಚ್ಚು.

Advertisement

ಮಕ್ಕಳ ಯೋಗಕ್ಷೇಮ ಹೊರತು ಪಡಿಸಿ ಇನ್ಯಾವಆಸೆಯನ್ನೂ ಹೊಂದಿರದ ಶ್ರೀಗಳಿಗೆ ಇಂದು ಮಠದಲ್ಲಿ ಶಾವಿಗೆ ರೆವೆಉಂಡೆ ಮಾಡಿದ್ದಾರೆ ಎಂದರೆ ಮಕ್ಕಳಿಗೆ ಸಂಬಂಧಿಸಿದವಿಶೇಷವೇನೋ ನಡೆದಿದೆ ಎಂತಲೇ ಅಂದುಕೊಳ್ಳುತ್ತಿದ್ದೆವು.ಸಪ್ಪೆ ಸಪ್ಪೆ ಊಟ ಶ್ರೀಗಳ ಅಡುಗೆಯಲ್ಲಿರಬೇಕಿದ್ದ ರುಚಿ.ಯಾವುದೂ ಕೂಡ ಹೆಚ್ಚಿರಬಾರದಿತ್ತು. ಮಸಾಲೆ ಪದಾರ್ಥಗಳು,ಕರಿದ ಪದಾರ್ಥಗಳಿಂದ ಶ್ರೀಗಳು ದೂರವಿರುತ್ತಿದ್ದರು.

ಶ್ರೀಗಳಆಹಾರಕ್ರಮವೂ ಕೂಡ ಅಷ್ಟೇ ಕಟ್ಟುನಿಟ್ಟಾಗಿತ್ತು. ಬೆಳಗ್ಗೆ ಶ್ರೀಗಳುಶಿವಪೂಜೆ ಮುಗಿಸಿದಾಗ ಶಿವಮಂದಿರದಲ್ಲಿಯೇ ಆಹಾರಸ್ವೀಕರಿಸುತ್ತಿದ್ದರು. ಇಡ್ಲಿ, ಕಾಯಿಚಟ್ನಿ, ಸಿಹಿ ಚಟ್ನಿ ಜೊತೆಗೆ ದಾಲ್‌ಅನ್ನ ಮಾತ್ರ ಬೆಳಗಿನ ಉಪಹಾರವಿರುತ್ತಿತ್ತು. ಅದನ್ನು ತಿಂದುಬೇವಿನ ಕಷಾಯ ಕುಡಿದರೆಂದರೆ ಇನ್ನು ಮಧ್ಯಾಹ್ನ ಶಿವಪೂಜೆಯನಂತರವಷ್ಟೇ ಶ್ರೀಗಳು ಆಹಾರ ಸ್ವೀಕರಿಸುತ್ತಿದ್ದರು.ಶ್ರೀಗಳ ಬೆಳಗಿನ ಆಹಾರಗಳಲ್ಲಿ ಬಹಳ ಮುಖ್ಯವಾದ್ದದ್ದು ಎಂದರೆಅದು ಬೇವಿನ ಚೆಕ್ಕೆಯಲ್ಲಿ ಮಾಡುತ್ತಿದ್ದ ಕಷಾಯ.

ಮಠದಆವರಣದಲ್ಲಿಯೇ ಬೆಳೆದಿದ್ದ ಬೇವಿನ ಮರದ ತೊಗಟೆಯನ್ನುತಂದು ಹಾಲಿನಲ್ಲಿ ಬೇಯಿಸಿ ಸ್ವಲ್ಪ ಬೆಲ್ಲ ಹಾಕಿ ತಯಾರುಮಾಡಲಾಗುತ್ತಿತ್ತು. ಕಹಿ ಪದಾರ್ಥಗಳು ಶ್ರೀಗಳ ಇಮ್ಯುನಿಟಿಪವರ್‌ ಹೆಚ್ಚಾಗಲೂ ಸಹಕರಿಸುತ್ತೆ. ಅಷ್ಟೊಂದು ಕಹಿಯಾಗಿದ್ದಕಷಾಯ ಸ್ವೀಕರಿಸುತ್ತಿದ್ದ ನಾಲಿಗೆಗೆ ಕಹಿಯಾಗಿದ್ದು ಹೊಟ್ಟೆಗೆ ಸಿಹಿಕಣೋ ಎಂದು ಹೇಳುತ್ತಿದ್ದರು.

ದಿನದ ಮೂರು ಅವಧಿಯಲ್ಲೂಶ್ರೀಗಳ ಆಹಾರದಲ್ಲಿ ಒಂದೇ ತೆರೆನಾದ ತೂಕವಿರುತ್ತಿತ್ತು. ಹೆಚ್ಚುಹಸಿವಾದರೆ ಹೆಚ್ಚು ಆಹಾರ ಎನ್ನುವುದೇ ಇರಲಿಲ್ಲ. ಒಂದು ಗ್ರಾಂಆಹಾರ ಹೆಚ್ಚಾದರೂ ಕೂಡ ಆ ಬಗ್ಗೆ ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು.ಅನೇಕ ಬಾರಿ ಹೆಚ್ಚಾದ ಆಹಾರವನ್ನು ಹಾಗೆಯೇ ಬಿಟ್ಟುಗೋವುಗಳಿಗೆ ನೀಡಿ ಎನ್ನುತ್ತಿದ್ದರು.

ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ?

ಶ್ರೀಗಳು ಪ್ರತಿಯೊಂದು ವಿಚಾರವನ್ನು ಸದಾ ಬರೆದಿಡುತ್ತಿದ್ದರು.ಅವರ ಬಳಿ ಮಠದ ಜವಾಬ್ದಾರಿ ಹೊತ್ತಾಗಿನಿಂದಲೂ ಮಠದಪ್ರತಿಯೊಂದು ರೂಪಾಯಿಯನ್ನೂ ಶ್ರೀಗಳು ಲೆಕ್ಕದಲ್ಲಿಬರೆದಿಡುತ್ತಿದ್ದರು. ಅದಕ್ಕೆಂತಲೇ ಶ್ರೀಗಳಿಗೆ ಪ್ರತ್ಯೇಕ ಕಪಾಟು ಸದಾಶ್ರೀಗಳ ಕೊಠಡಿಯಲ್ಲಿರುತ್ತಿತ್ತು.

ಯಾರೇ ಬಂದರೂ ಏನೇ ದಕ್ಷಿಣೆನೀಡಿದರೂ ಅದು ಇಷ್ಟೇ ಇತ್ತು. ಇಷ್ಟನ್ನೇಖರ್ಚುಮಾಡಲಾಗಿದೆ ಎಂದುಬರೆದಿಡುತ್ತಿದ್ದರು. ಜೊತೆಗೆ ಯಾರುನೋಟಿನ ಕಂತೆ ನೀಡಿದರೆ ಅದನ್ನಮುಟ್ಟಿಯೇ ಹೇಳುತ್ತಿದ್ದರು ಇಷ್ಟೇ ದುಡ್ಡಿದೆಎಂದು. ಪೈಸೆಗಳ ಕಾಲದಿಂದಲು ಮಠವನ್ನುಬೆಳೆಸುತ್ತಾ ಬಂದ ಶ್ರೀಗಳಿಗೆ ರೂಪಾಯಿಗಳಕಾಲದ ನೋಟುಗಳ ಸಂಖ್ಯೆ ಗೊತ್ತಾಗದೇಇರುತ್ತಾ ಹೇಳಿ?ಜೊತೆಗೆ ಯಾರಾದರೂ ದೊಡ್ಡ ಮೊತ್ತವನ್ನುದಾನವನ್ನಾಗಿ ನೀಡಿದರೆ ಇಷ್ಟೊಂದು ಯಾಕೆ ಎಂದು ಕೇಳಿತ್ತಿದ್ದ ಜಗತ್ತಿನಮೊದಲ ಶ್ರೀಗಳು ಇವರೇ ಎನ್ನಿಸುತ್ತೆ. ಹೌದು, ಲಕ್ಷಗಳ ಲೆಕ್ಕದಲ್ಲಿ ದಾನಬಂದರೆ ಆ ಬಗ್ಗೆ ಶ್ರೀಗಳು ಯೋಚಿಸುತ್ತಿದ್ದರು.

ಇಷ್ಟೊಂದು ಕಾಣಿಕೆನೀಡಿ ನಿನಗೇನು ಮಾಡುತ್ತೀಯಾ ಎಂದು ಕೇಳುತ್ತಿದ್ದರು.ಜೊತೆಗೆ ತಮ್ಮಲ್ಲಿರುವ ಆರ್ಥಿಕ ಸಂಪನ್ಮೂಲವೆಷ್ಟು ಅದರಿಂದಖರ್ಚು ಮಾಡಿದರೆ ಉಳಿಯುವುದೆಷ್ಟು ಮಿಕ್ಕ ಹಣಕ್ಕೆ ಏನು ಮಾಡಲಿಎಂದು ಯಾರ ಬಳಿಯೂ ಶ್ರೀಗಳು ಮಾತನಾಡುತ್ತಿರಲಿಲ್ಲ. ಎಂತಹಬರಗಾಲದಂತಹ ಸಮಯದಲ್ಲಿಯೂ ಶ್ರೀಗಳು ಒಂದು ದಿನವು ಕಷ್ಟದಬಗ್ಗೆ ಹೇಳಿಕೊಂಡವರಲ್ಲ. ನಿತ್ಯ ಸಾವಿರಾರು ಮಕ್ಕಳನ್ನು ಬರುವ ಭಕ್ತರಿಗೆಸದಾ ಸೌಕರ್ಯಗಳನ್ನು ಒದಗಿಸಬೇಕಿತ್ತು.

ಒಮ್ಮೊಮ್ಮೆ ಉತ್ತರಕರ್ನಾಟಕದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರುಬಂದವರು ಒಂದೆರಡು ದಿನ ಮಠದಲ್ಲಿಯೇ ಉಳಿಯುತ್ತಿದ್ದರು.ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳಾದರು ಹೋಗುವವರುಮಠಕ್ಕೆ ಬಂದು ಆಹಾರ, ವಿಶ್ರಾಂತಿ ಪಡೆದೇ ಮುಂದೆ ಹೋಗುತ್ತಿದ್ದರುಎಲ್ಲವನ್ನೂ ನಿಭಾಯಿಸಲಿಕ್ಕೆ ಭಕ್ತರು ನೀಡುವಕಾಣಿಕೆ ಹೊರತು ಪಡಿಸಿ ಇನ್ನಾವವರಮಾನಗಳು ಮಠಕ್ಕೆ ಇರಲಿಲ್ಲ. ಅಂತಹಸಂಧರ್ಭದಲ್ಲಿ ಬರುವ ಕಷ್ಟಗಳಿಗೆ ಯಾರಬಳಿಯೂ ಕೇಳುತ್ತಿರಿಲ್ಲ.

ಮಠದ ಸಮಸ್ಯೆಯಾರೊಂದಿಗೂ ಹಂಚಿಕೊಳ್ಳಲು ಶ್ರೀಗಳಿಗೆಇಷ್ಟವಿರಲಿಲ್ಲ. ಯಾರೊಂದಿಗೂ ಇಷ್ಟುಸಾಲದೆ ಬಂದಿದೆ ವ್ಯವಸ್ಥೆ ಮಾಡಿಎಂದವರಲ್ಲ. ಏನು ಮಾಡ್ತೀರಾ ಬುದ್ದಿಹೀಗಾಗಿದ್ಯಲ್ಲ ಎಂದು ಕೇಳಿದರೆ ‘ ಎಲ್ಲಸಿದ್ಧಲಿಂಗೇಶ್ವರ ನೋಡಿಕೊಳ್ತಾನೆ ಬಿಡು’ ಎನ್ನುತ್ತಿದ್ದರು.ಏನಾದರೂ ಕೊರತೆ ಬಂದರೂ ಅದಕ್ಕೆ ಬೇಕಾದ ಪೂರ್ವ ತಯಾರಿಮಠದಲ್ಲಿತ್ತು.

ಶ್ರೀಗಳ ಆಪ್ತ ಭಕ್ತರ ತಂಡವೇ ಶ್ರೀಗಳ ಪ್ರತಿಯೊಂದುವಿಚಾರವನ್ನು ಗಮನಿಸುತ್ತಿದ್ದರು. ಮಠದಲ್ಲಿ ಏನೇ ಕೊರತೆ ಬಂದರೂಅದನ್ನ ಹೇಳಿಕೊಳ್ಳದಿದ್ದರೂ ಅದು ಹೇಗೋ ಶ್ರೀಗಳ ಆಪ್ತ ಭಕ್ತರುಹಾಗೂ ಶಿಷ್ಯಂದಿರಿಗೆ ತಿಳಿದು ಗುರು ಕೇಳುವ ಮುನ್ನವೇ ಮಠದಆವರಣದಲ್ಲಿ ಕೊರತೆಯಾದ್ದದ್ದೆಲ್ಲಾ ಇರುವಂತೆನೋಡಿಕೊಳ್ಳುತ್ತಿದ್ದರು. ಸಿದ್ಧಗಂಗಾ ಮಠದ ಬೆಳೆದಿದ್ದು ಹೀಗೆಯೇ.ಗುರುವಿನ ಅತಃಕರಣ ಅರಿತ ಶಿಷ್ಯರು. ಶಿಷ್ಯರ ನಾಡಿಮಿಡಿತ ಅರಿತತಾಯಿ ಹೃದಯದ ಗುರುಗಳು ಇವರ ನಡುವೆ ಮಕ್ಕಳು ಸಿದ್ಧಗಂಗಾತಪೋಭೂಮಿಯಾಗಿದ್ದು ಹೀಗೆಯೇ.

ಆರ್‌ಬಿಐ ಅಧಿಕಾರಿಗಳೇ ತಬ್ಬಿಬ್ಟಾಗಿದ್ದರು…!ವಿಷಯಾಸಕ್ತಿ ಶ್ರೀಗಳಲ್ಲಿ ಯಾವತ್ತೂ ಕೂಡ ಕುಂದಿರಲಿಲ್ಲ.ಅವರು ಜಗತ್ತಿನ ಎಲ್ಲಾ ವಿಚಾರಗಳ ಬಗ್ಗೆ ತೆರೆದಕಿಟಕಿಯಂತಾಗಿದ್ದರು. ಅವರಿಗೆ ತಿಳಿದುಕೊಳ್ಳಬೇಕು ಎನ್ನುವಆಸಕ್ತಿ ಅವರನ್ನು ನೂರನೇ ವಯಸ್ಸಿನಲ್ಲಿಯೂ ಇತ್ತು 110ವಯಸ್ಸಿನಲ್ಲಿಯೂ ಇತ್ತು. ಮಠಕ್ಕೆ ಯಾರೇ ಬಂದರೂಅವರು ಪಾಂಡಿತ್ಯ ಪಡೆದಿದ್ದ ಎಲ್ಲಾ ವಿಚಾರಗಳನ್ನು ಶ್ರೀಗಳಿಗೆಹೇಳಬೇಕಿತ್ತು. ಜೊತೆಗೆ ಶ್ರೀಗಳು ಕೇಳುವ ಪ್ರಶ್ನೆಗಳಿಗೆಉತ್ತರಿಸಬೇಕಿತ್ತು.

ಒಮ್ಮೆ ಶ್ರೀಗಳ ಬಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಉನ್ನತ ದರ್ಜೆಯಅಧಿಕಾರಿಯೊಬ್ಬರು ಬಂದಿದ್ದರು. ಶ್ರೀಗಳ ಬಳಿ ಕುಳಿತು ಹೀಗೆಮಾತನಾಡುತ್ತಿದ್ದಾಗ ಶ್ರೀಗಳು ದೇಶದ ಜಿಡಿಪಿ ಬಗ್ಗೆ ಹಾಗೂರೂಪಾಯಿ ಅಪಮೌಲಿÂàಕರಣದ ಬಗ್ಗೆ ಮಾತನಾಡಲಿಕ್ಕೆಪ್ರಶ್ನಿಸಲಿಕ್ಕೆ ಶುರುಮಾಡಿದರು. ಅಕ್ಷರಶಃ ಆ ಅಧಿಕಾರಿಶ್ರೀಗಳಿಂದ ಇದ್ಯಾವುದನ್ನೂ ನಿರೀಕ್ಷಿಸಿರಲಿಲ್ಲ. ಡಾಲರ್‌ಮುಂದೆ ರೂಪಾಯಿ ಅಮೌಲಿÂàಕರಣ ಯಾಕೇ ಆಗ್ತಿದೆ.ಸ್ವತಂತ್ರಪೂರ್ವದಲ್ಲಿ ಇದ್ದ ಆರ್ಥಿಕ ವ್ಯವಸ್ಥೆಗೂ ಇತ್ತೀಚಿನಆರ್ಥಿಕ ವ್ಯವಸ್ಥೆಗೂ ಏನು ವ್ಯತ್ಯಾಸ. ಹೇಗೆಲ್ಲಾ ದೇಶದ ಜಿಡಿಪಿಮೇಲೆತ್ತಬೇಕು ಎಂಬೆಲ್ಲಾ ಕುರಿತಾಗಿ ಅಧಿಕಾರಿಗಳೊಂದಿಗೆಸಂವಾದ ನಡೆಸಲು ಶುರುಮಾಡಿದರು.

ಆರ್‌ಬಿಐ ಅಧಿಕಾರಿಗಳಿಗೆ ದೇಶದ ಸಂಪನ್ಮೂಲ ಕೇವಲಶ್ರೀಮಂತರಲ್ಲಿ ಕ್ರೋಢೀಕರಣವಾಗುತ್ತಿರುವ ಬಗ್ಗೆ, ರೈತರಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಂಬಲ ಬೆಲೆ,ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಾರತದಿಂದ ರಫ್ತುಪ್ರಮಾಣ ಹೆಚ್ಚಿಸುವ ಬಗ್ಗೆ, ಜೊತೆಗೆ ಭಾರತದೊಂದಿಗೆವ್ಯವಹಾರ ನಡೆಸುವ ಇತರೆ ದೇಶಗಳೊಂದಿಗೆ ರುಪಾಯಿರೂಪದಲ್ಲಿಯೇ ವ್ಯವಹಿರಿಸುವ ಬಗ್ಗೆ ಹೀಗೆ ನಾನಾವಿಚಾರಗಳಲ್ಲಿ ಶ್ರೀಗಳು ಸಲಹೆ ನೀಡಿದರು. ಕೊನೆಯದಾಗಿನಮ್ಮದು ನಾಗರೀಕತೆಗಳ ಉಗಮದಿಂದ ಬೆಳೆದು ಬಂದದೇಶ ಹಾಗಾಗಿ ಹೊಸದಾಗಿ ಕಟ್ಟಿದ ದೇಶಗಳ ಮುಂದೆನಾವು ಮಾರ್ಗದರ್ಶಕ ದೇಶವಾಗಿ ಅಭಿವೃದ್ಧಿ ಹೊಂದಬೇಕು. ಆರ್ಥಿಕತೆಯ ಜೊತೆಗೆ ಗುರು ಸ್ಥಾನದಲ್ಲಿ ದೇಶವನ್ನತಂದು ನಿಲ್ಲಿಸಲು ನಿಮ್ಮಂತಹ ಅಧಿಕಾರಿಗಳು ಕೆಲಸಮಾಡಬೇಕು ಎಂದು ಹೇಳಿದ್ದರು.

ಕೊನೆಗೆ ಅಧಿಕಾರಿಗಳು ಶ್ರೀಗಳು ಕೇಳುವ ಪ್ರಶ್ನೆಗಳಿಗೆಉತ್ತರಿಸಿ ಅವರಿಂದ ಸಲಹೆಗಳನ್ನು ಪಡೆದು ಅವರಿಗೆಸಾಷ್ಟಾಂಗ ನಮಸ್ಕಾರ ಮಾಡಿದರು. ನಾವು ನಮ್ಮಜೀವನದಲ್ಲಿಯೇ ಇಂತಹ ಸಾಧಕರನ್ನು, ಸ್ವಾಮೀಜಿಗಳನ್ನುನೋಡಿಲ್ಲ. ನೀವು ತಿಳಿಯದ ವಿಚಾರವಿಲ್ಲ ಎಂದುಅಭಿಪ್ರಾಯಪಟ್ಟರು.ಇದನ್ನೆಲ್ಲಾ ಕೇಳಿ ತಿಳಿದುಕೊಂಡ ನನಗೆ ಶ್ರೀಗಳ ತಿಳಿಯದವಿಚಾರವೇ ಇಲ್ಲ ಎನ್ನಿಸುತ್ತದೆ. ಕಾರಣ ಅವರು ಸದಾಓದಿನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ಇಂಗ್ಲಿಷ್‌ಚೆನ್ನಾಗಿ ಬಲ್ಲ ಶ್ರೀಗಳು ಕನ್ನಡವಷ್ಟೇ ಅಲ್ಲದೆಇಂಗ್ಲಿಷಿನಲ್ಲಿರುವ ಪ್ರಬುದ್ಧ ಗ್ರಂಥಗಳನ್ನ ಓದಿದ್ದರು.

ಜೊತೆಗೆ ದಿನ ಪತ್ರಿಕೆಗಳಲ್ಲಿ ಬರುವ ನಿತ್ಯ ವರದಿಗಳನ್ನ ಬಿಟ್ಟೂಬಿಡದೆ ಓದುತ್ತಿದ್ದರು.ಮಠಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿಗಳಾದಅಬ್ದುಲ್‌ ಕಲಾಂ ಬಂದಾಗ ಅವರೊಂದಿಗೆ ಯಾವಉತ್ಸಾಹದಿಂದ ಮಾತನಾಡಿದ್ದರೂ ಅಷ್ಟೇ ಉತ್ಸಾಹದಿಂದಸಾಮಾನ್ಯ ರೈತನೊಂದಿಗೆ, ದಿನಗೂಲಿ ನೌಕರನೊಂದಿಗೂಮಾತನಾಡುತ್ತಿದ್ದರು. ಶ್ರೀಗಳ ಆಲೋಚನೆಯಲ್ಲಿಪ್ರತಿಯೊಬ್ಬ ವ್ಯಕ್ತಿಯೂ ಆತನ ಜೀವನದ ಅಪಾರಅನುಭವದ ಗುತ್ಛ ಆತನಿಂದ ಪಡೆಯುವ ಪ್ರತಿಯೊಂದುವಿಚಾರವೂ ವಿಭಿನ್ನವಾಗಿರುತ್ತದೆ. ನಮ್ಮಲ್ಲಿ ಹೊಸ ಹೊಸವಿಚಾರಗಳು ತುಂಬಿಕೊಂಡಂತೆಲ್ಲಾ ನಮ್ಮ ದೃಷ್ಠಿಕೋನಗಳುಬದಲಾಗುತ್ತಾ ಹೋಗುತ್ತದೆ ಎಂದು ಶ್ರೀಗಳುಹೇಳುತ್ತಿದ್ದದ್ದು ಇದೇ ಕಾರಣಕ್ಕಾಗಿಯೇ.

ಡಾ.ಎಸ್‌.ಪರಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next