Advertisement

ಮನ್ಸುಖ್‌, ವಾಜೆ ಆಗಾಗ ಭೇಟಿ!

12:56 AM Mar 20, 2021 | Team Udayavani |

ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕವಿದ್ದ ಕಾರು ಪತ್ತೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಹಾಗೂ ಇದೇ ಪ್ರಕರಣದಲ್ಲಿ ಅನುಮಾನಾಸ್ಪದ. ವಾಗಿ ಸಾವಿಗೀಡಾಗಿರುವ ಥಾಣೆಯ ಉದ್ಯಮಿ ಮನ್ಸುಖ್‌ ಹಿರನ್‌ ಅವರಿಬ್ಬರೂ ಈ ಹಿಂದೆ ಆಗಾಗ ಭೇಟಿಯಾಗುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಅಲ್ಲದೆ, ಮನ್ಸುಖ್‌ ಬಳಿಯಿದ್ದ ಸ್ಕಾರ್ಪಿಯೊ ಕಾರು ಕಳುವಾದ ದಿನ (ಫೆ. 17) ಅವರಿಬ್ಬರೂ ಈಗಾಗಲೇ ಎನ್‌ಐಎ ಜಪ್ತಿ ಮಾಡಿರುವ ವಾಜೆ ಯವರ ಮರ್ಸಿಡಿಸ್‌ ಬೆಂಝ್ ಕಾರಿನಲ್ಲಿ ಭೇಟಿ ಯಾಗಿರುವುದು ಸಿಸಿಟಿವಿ ದೃಶ್ಯಾವಳಿಗ ಳಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಮತ್ತೂಂದೆಡೆ, ಶುಕ್ರವಾರದಂದು ವಿಧಿವಿಜ್ಞಾನ ಪ್ರಯೋಗಾಲದ ತಜ್ಞರು, ಎಸ್‌ಐಟಿ ಜಪ್ತಿ ಮಾಡಿರುವ ವಾಜೆಯವರ ಐಶಾರಾಮಿ ಕಾರುಗಳ ತಪಾಸಣೆ ನಡೆಸಿದೆ.

ನೀರಿಗೆ ಎಸೆಯಲಾಗಿತ್ತೇ?: ಮನ್ಸುಖ್‌ ಮೃತ ದೇಹದ ಡಯಾಟಮ್‌ ಪರೀಕ್ಷೆಯಲ್ಲಿ ಅವರ ಶ್ವಾಸಕೋಶದಲ್ಲಿ ನೀರಿನ ಪಾಚಿಯ ಚೂರು ಗಳು ಪತ್ತೆಯಾಗಿದ್ದು, ಅವರು ಸಾಯುವ ಮುನ್ನ ಅವರನ್ನು ಥಳಿಸಿ, ನೀರಿಗೆ ತಳ್ಳಲಾಗಿತ್ತೇ ಎಂದು ಅನುಮಾನ ಎದ್ದಿದೆ. ಹಾಗಾಗಿ, ಡಯಾಟಮ್‌ ವರದಿಯನ್ನು ಹರ್ಯಾಣದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಮಹಾರಾಷ್ಟ್ರ ಎಟಿಎಸ್‌ ನಿರ್ಧರಿಸಿದೆ.

ಇದನ್ನೂ ಓದಿ:ಉಪ ಚುನಾವಣೆ ಅಭ್ಯರ್ಥಿಗಳ ಕುರಿತು ನಾಳೆ ಚರ್ಚೆ : ಅರುಣ್ ಸಿಂಗ್

ಕಮೀಷನರ್‌ ಭೇಟಿ: ಮುಂಬಯಿ ನೂತನ ಪೊಲೀಸ್‌ ಕಮೀಷನರ್‌ ಆದ ಹೇಮಂತ್‌ ನಗ್ರಾಲೆ ಅವರನ್ನು ಎನ್‌ಐಎ ಅಧಿಕಾರಿಗಳಾದ ಅನಿಲ್‌ ಶುಕ್ಲಾ, ವಿಕ್ರಮ್‌ ಖಲಾಟೆ ಭೇಟಿಯಾಗಿ ಅಂಬಾನಿ ಪ್ರಕರಣ ಕುರಿತಂತೆ ಮಾತುಕತೆ ನಡೆಸಿದರು.

Advertisement

ಶಿವಸೇನೆ ಪ್ರಶ್ನೆ: ಅಂಬಾನಿ ಪ್ರಕರಣವನ್ನು ಎನ್‌ಐಎ ತನಿಖೆ ಮಾಡುತ್ತಿರುವ ಬಗ್ಗೆ ಶಿವಸೇನೆ, ತನ್ನ ಮುಖವಾಣಿ “ಸಾಮ್ನಾ’ದಲ್ಲಿ ಟೀಕಿಸಿದೆ. ಮುಂಬಯಿ ಎಟಿಎಸ್‌ ತನಿಖೆ ನಡೆಸುತ್ತಿದ್ದರೂ, ಎನ್‌ಐಎ ಕೂಡ ಈ ಪ್ರಕರಣದ ತನಿಖೆ ನಡೆಸಲಾರಂಭಿಸಿತು. ಇದರ ಹಿಂದಿನ ಉದ್ದೇಶ ಸದ್ಯದಲ್ಲೇ ಹೊರಬರಲಿದೆ. ಉರಿ, ಪುಲ್ವಾಮಾ, ಪಠಾಣ್‌ಕೋಟ್‌ಗಳಲ್ಲಿ ಸಿಕ್ಕಿದ್ದ ಜಿಲೆಟಿನ್‌ ಕಡ್ಡಿಗಳ ಬಗ್ಗೆ ಎನ್‌ಐಎ ಯಾವ ಸತ್ಯ ಬಹಿರಂಗಗೊಳಿಸಿದೆ, ಯಾರನ್ನು ಬಂಧಿಸಿದೆ ಎಂಬು ದನ್ನು ಅದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next