Advertisement
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳಧಿವಾರ ಮಾತನಾಡಿದ ಅವರು, ಅರ್ಥಕ್ರಾಂತಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನ್ವಧಿಯಿಸುವಂತೆ ಈಗಾಗಲೇ ತಂತ್ರಜ್ಞರ ನೆರವಿನಲ್ಲಿ ಯೋಜನೆ ರೂಪಿಸಲಾಗಿದೆ. ಇದು ಭಾರತದಲ್ಲಿ ಜಾರಿಯಾದರೆ 18 ತಿಂಗಳಲ್ಲೇ ಯಶಸ್ವಿಯಾಗಬಹುದು ಎಂದರು.
ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ತೆರಿಗೆಗಳಿಗಿಂತ ಜಿಎಸ್‌ಟಿ ಉತ್ತಮ ವ್ಯವಸ್ಥೆ. ಆದರೆ ಅರ್ಥಕ್ರಾಂತಿ ಪ್ರಸ್ತಾವದಲ್ಲಿರುವ ಬ್ಯಾಂಕ್ ವಹಿವಾಟು ತೆರಿಗೆ ಇದಕ್ಕಿಂತಲೂ ಪರಿಣಾಮಕಾರಿಯಾದ ಪರ್ಯಾಯವಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಅವರು ತಿಳಿಸಿದರು. ಸರಕಾರ ಜಾರಿಗೊಳಿಸಬಹುದೆಂಬ ನಿರೀಕ್ಷೆ
ಅರ್ಥಕ್ರಾಂತಿ ತರುವ ಪ್ರಯತ್ನವನ್ನು ಕಳೆದ 20 ವರ್ಷಗಳಿಂದ ನಡೆಸುತ್ತಿದ್ದೇವೆ. ಹಿಂದಿನ ಯುಪಿಎ ಸರಕಾರಕ್ಕೆ ಪೂರ್ಣ ಬಹುಮತ ಇರದ ಕಾರಣ ಅವರಿಗೆ ನಮ್ಮ ಪ್ರಸ್ತಾವನೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂದ ಅವರು, ನಮ್ಮದು ರಾಜಕೀಯರಹಿತ ಹಾಗೂ ಕೇವಲ ತಾಂತ್ರಿಕ ಸಲಹಾ ಗುಂಪು. ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿಲ್ಲ. ಕೇಂದ್ರ ಸರಕಾರಕ್ಕೆ ನಮ್ಮ ಪ್ರಸ್ತಾವದ ಪೂರ್ಣ ಪ್ರತಿಯನ್ನು ಈಗಾಗಲೇ ನೀಡಲಾಗಿದೆ. ನೋಟು ರದ್ದತಿಯು ನಮ್ಮ ಪ್ರಸ್ತಾವದ ಒಂದು ಸಣ್ಣ ಅಂಶವಾಗಿದೆ. ಈಗಿನ ಸರಕಾರಕ್ಕೆ ಬಹುಮತ ಇರುವ ಕಾರಣ ಪ್ರಸ್ತಾವದಲ್ಲಿರುವ ಅಂಶಧಿಗಳನ್ನು ಜಾರಿಗೆ ತರಬಹುದು ಎಂದು ನಿರೀಕ್ಷೆ ಹೊಂದಿದ್ದೇವೆ ಎಂದು ಅವರು ವಿವರಿಸಿದರು.
Related Articles
Advertisement
ಅರ್ಥಕ್ರಾಂತಿಯ ಉದ್ದೇಶತೆರಿಗೆ ರಹಿತ ಹಾಗೂ ಕಡಿಮೆ ನಗದು ಆರ್ಥಿಕತೆ ಜಾರಿ ಅರ್ಥಕ್ರಾಂತಿಯ ಪ್ರಮುಖ ಉದ್ದೇಶ. ಬ್ಯಾಂಕ್ ವಹಿವಾಟಿನಲ್ಲಿ ಹಣ ಸ್ವೀಕರಿಸುವವರ ಖಾತೆಗೆ ತೆರಿಗೆ ಕಡಿತಗೊಳಿಸುವುದು ಮಾತ್ರವೇ ತೆರಿಗೆ ಆಗಿ ಇರಬೇಕು. ಗರಿಷ್ಠ ಮುಖಬೆಲೆಯ ನೋಟು 50 ರೂ. ಆಗಿರಬೇಕು. ಅದಕ್ಕಿಂತ ದೊಡ್ಡ ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ರದ್ದು ಮಾಡಬೇಕು. ಆಮದಾಗುವ ವಸ್ತುಧಿಗಳಿಗೆ ಮಾತ್ರವೇ ತೆರಿಗೆ ವಿಧಿಸಬೇಕು. ರಫ್ತಾಗುವ ವಸ್ತುಗಳಿಗೆ ತೆರಿಗೆ ರದ್ದಾಗಬೇಕು. ಇದರಿಂದ ಸಹಜವಾಗಿ ನಗದುರಹಿತ ವಹಿವಾಟು ಹೆಚ್ಚುತ್ತದೆ ಎನ್ನುವುದೇ ಅರ್ಥಕ್ರಾಂತಿಯ ಉದ್ದೇಶ ಎಂದು ಅನಿಲ್ ಬೋಕಿಲ್ ತಿಳಿಸಿದರು.