Advertisement

ಏಕಾಂಗಿ ಬದುಕಿನ ಕಲಾ ಪ್ರಪಂಚ

12:27 PM Jan 08, 2020 | Suhan S |

ಹುಬ್ಬಳ್ಳಿ: ಕಸದಿಂದ ರಸ ಮಾಡುವ ಅನೇಕರು ನಮ್ಮ ಮಧ್ಯದಲ್ಲಿದ್ದಾರೆ. ಕಲೆ ಯಾರಿಗಾದರೂ ಒಲಿಯಬಹುದು. ಒಡೆದು ಹೋದ ದೇವರ ಫೋಟೊಗಳು ಕೂಡ ಕಲಾವಿದರ ಕಲಾಕೃತಿಗೆ ಕಾರಣವಾಗುತ್ತವೆ!

Advertisement

ಇಲ್ಲಿನ ಕಿಮ್ಸ್‌ ಆವರಣದಲ್ಲಿ ಕಳೆದೊಂದು ತಿಂಗಳಿಂದ ಕಲಾವಿದನೊಬ್ಬ ಗಾಜಿನ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾನೆ. ಕಲಾಕೃತಿ ಇಷ್ಟವಾದರೆ ಖರೀದಿ ಮಾಡಿರಿ ಎಂದು ಹೇಳುತ್ತಾನೆ. ಒಡೆದ ಫೋಟೊಗಳನ್ನು ಸಂಗ್ರಹಿಸಿಕೊಂಡು ಬಂದು ಗಾಜನ್ನು ತೆಗೆದು ಅದನ್ನು ಸ್ವತ್ಛಗೊಳಿಸಿ ಅದನ್ನು ಕೊರೆದು ಹಡಗು,ಮನೆ ಸೇರಿದಂತೆ ವಿವಿಧ ಅಲಂಕಾರಿಕ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾನೆ.

ಬೆಳಗಾವಿಯ ಕೃಷ್ಣ ಇಟಗಿ ಎಂಬ ಕಲಾವಿದ ಕಿಮ್ಸ್‌ ಆಸ್ಪತ್ರೆಗೆ ಬರುವ ಜನರಿಗೆ ತನ್ನ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದಾನೆ. ಮಡದಿ, ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಕೃಷ್ಣನದು ಏಕಾಂಗಿ ಬದುಕು. ಕಲಾಕೃತಿಗಳು, ಗಾಜಿನ ತುಂಡುಗಳು, ಬಣ್ಣದ ಕಾಗದಗಳೇ ಅವನ ಆಸ್ತಿ. ಬಯಲೇ ಆಲಯ. ಗಾಜಿನ ತುಂಡುಗಳನ್ನು ಜೋಡಿಸಿ ಕಲಾಕೃತಿ ರಚಿಸುತ್ತಾನೆ. ಕಲಾಕೃತಿಗಳ ಮಾರಾಟವಾದರೆ ಊಟ. ಇಲ್ಲದಿದ್ದರೆ ಕಿಮ್ಸ್‌ ಹಾಸ್ಟೆಲ್‌ ವಿದ್ಯಾರ್ಥಿಗಳು ನೀಡುವ ತಂಗಳನ್ನ ತಿಂದು ಜೀವನ ನಡೆಸುತ್ತಿದ್ದಾನೆ. ದಿನಕ್ಕೆ 4 ಕಲಾಕೃತಿಗಳು ಮಾರಾಟವಾದರೂ ಸಾಕು, ಹೊಟ್ಟೆ ತುಂಬ ಊಟ ಮಾಡಬಹುದು ಎನ್ನುತ್ತಾನೆ.

ಎರಡು ತಿಂಗಳು ಸಿದ್ಧಾರೂಢ ಮಠದ ಆವರಣದಲ್ಲಿ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದ ಕೃಷ್ಣ, ಮಠದಲ್ಲಿ ಊಟ ಮಾಡುತ್ತಿದ್ದ. ಈಗ ಕಿಮ್ಸ್‌ ಆವರಣದಲ್ಲಿ ವಾಸವಾಗಿದ್ದು, ಮುಂದೆ ಎಲ್ಲಿ ಹೋಗುವುದೋ ಗೊತ್ತಿಲ್ಲ ಎನ್ನುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next