Advertisement

“ಸಮಾಜ ನಿರ್ಮಾಣದಲ್ಲಿ  ಕಲೆಯೇ ಪ್ರಧಾನ’

07:10 AM Sep 04, 2017 | Harsha Rao |

ತೆಕ್ಕಟ್ಟೆ (ಬೇಳೂರು): ಈ ಸಮಾಜದ ವಿವಿಧ ಸ್ತರಗಳಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಮಾಜಿಕವಾಗಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ  ಈ ನಿಟ್ಟಿನಲ್ಲಿ ನಮ್ಮ ಭಾರತೀಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳು ಒಂದಾಗಿ ಬೆರೆತಾಗ ಮಾತ್ರ ಸಂತೃಪ್ತ ಸಮಾಜದ ನಿರ್ಮಾಣ ಸಾಧ್ಯ ಎಂದು ಬೇಳೂರು ಸ್ಫೂರ್ತಿಧಾಮದ ಮುಖ್ಯಕಾರ್ಯನಿರ್ವಾಹಕ ಡಾ|ಕೇಶವ ಕೋಟೇಶ್ವರ ಹೇಳಿದರು .

Advertisement

ಅವರು  ಸೆ. 2 ಶನಿವಾರದಂದು  ಬೇಳೂರು ಸ್ಫೂರ್ತಿಧಾಮದ ಸಭಾಂಗಣದಲ್ಲಿ ಉಡುಪಿಯ ಕೊಡವೂರಿನ ನೃತ್ಯನಿಕೇತನ ಸಂಸ್ಥೆಗೆ 25ರ ಸಂಭ್ರಮದ ಹಿನ್ನೆಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುವ ನಿಟ್ಟಿನಿಂದ ನಡೆದ ನೃತ್ಯ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ನೃತ್ಯ ವಿಲಾಸ ಕಾರ್ಯಕ್ರಮದ ಸಂಘಟಕರಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನೃತ್ಯ ನಿರ್ದೇಶಕರಾದ  ಸುಧೀರ್‌ ರಾವ್‌ ಕೊಡವೂರು ಸಂಸ್ಥೆಯ ನೃತ್ಯ ನಿರ್ದೇಶಕಿ ಮಾನಸಿ ಸುಧೀರ್‌ ರಾವ್‌,  ವಸ್ತ್ರ ವಿನ್ಯಾಸಕಿ  ಶಾರದಾ ಉಪಾಧ್ಯಾಯ  ಮೊದಲಾದವರು ಉಪಸ್ಥಿತರಿದ್ದರು. ಬೇಳೂರು ಸ್ಫೂರ್ತಿಧಾಮದ ಕಾರ್ಯನಿರ್ವಾಹಕಿ  ಜಿಜಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next