Advertisement

ಕಲೆಗೆ ವ್ಯಕ್ತಿತ್ವ ಬದಲಿಸುವ ಶಕ್ತಿ ಇದೆ

12:30 PM Oct 20, 2017 | |

ತಿ.ನರಸೀಪುರ: ಚಿತ್ರಕಲೆಗೆ ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಿಸುವಷ್ಟು ಶಕ್ತಿಯಿದ್ದು, ಕಲಾವಿದರಿಗೆ ಸಾಮಾಜಿಕವಾಗಿ ಗೌರವ ವೃದ್ಧಿಯಾಗುವುದರಿಂದ ಮಕ್ಕಳಲ್ಲೂ ಚಿತ್ರಕಲೆ ಅರಿವು ಅಗತ್ಯವಿದೆ ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್‌.ಶಂಕರೇಗೌಡ ಹೇಳಿದರು.

Advertisement

ತಾಲೂಕಿನ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾ ತಂಡದಿಂದ ಹಮ್ಮಿಕೊಂಡಿದ್ದ ಚಿತ್ರಕಲೆ ಶಿಬಿರದ ಸಮಾರೋಪದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಬೌದ್ಧಿಕ ಸಾಮರ್ಥ್ಯ: ನೇರವಾಗಿ ನೋಡಿದ್ದನ್ನು ಚಿತ್ರಕಲೆಯಲ್ಲಿ ಬಿಡಿಸುವಷ್ಟು ನಿಪುಣತೆ ಕಲೆಯಿಂದ ಬರುವುದರಿಂದ ಚಿತ್ರಕಲೆ ಶಿಕ್ಷಣ ಮಕ್ಕಳ ಬೌದ್ಧಿಕ ಸಾಮರ್ಥ್ಯದ ವಿಕಾಶಕ್ಕೂ ಸಹಕಾರಿಯಾಗಲಿದೆ. ಈ ಬಗ್ಗೆ ಶಿಕ್ಷಕರು ಚಿಂತನೆ ಮಾಡಿ ಮಕ್ಕಳಲ್ಲೂ ಚಿತ್ರಕಲೆ ಆಸಕ್ತಿಯನ್ನು ಬೆಳೆಸಲು ಗಮನಹರಿಸಬೇಕೆಂದು ಕರೆ ನೀಡಿದರು.

ವಿಚಾರ ಮಂಡನೆ ಮಾಡಿದ ಶಾಲೆ ಸಹ ಶಿಕ್ಷಕಿ ತೇಜಸ್ವಿನಿ, ಕಲಾ ಪ್ರತಿಭೆ ಎಲ್ಲಾ ಮಕ್ಕಳಲ್ಲಿಯೂ ಇರುತ್ತದೆ. ಆಸಕ್ತಿ ಇರುವ ಕಲೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದರೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಖ್ಯಾತ ಚಿತ್ರಕಲೆಗಾರ ರವಿವರ್ಮ ಅವರು ಮೈಸೂರು ಪಾರಂಪರಿಕ ಚಿತ್ರರಚನೆಗೆ ಖ್ಯಾತಿ ಪಡೆದಿದ್ದಾರೆ.

ರವಿವರ್ಮರಂತೆ ವಿದೇಶಗಳಲ್ಲೂ ಚಿತ್ರಕಲೆಯಲ್ಲಿ ವಿಶಿಷ್ಠ ಸಾಧನೆ ಮಾಡಿದ ಕಲಾವಿದರು ಅನೇಕರಿದ್ದಾರೆ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮನೆಯನ್ನು ಪೋಷಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಮಾಡಿದರೆ ಸಾಧನೆಗೈಯಲು ಮಕ್ಕಳಿಗೆ ಸ್ಪೂರ್ತಿಯಾಗಲಿದೆ ಎಂದು ತಿಳಿಸಿದರು.

Advertisement

ಶಾಲೆಯ ಮಕ್ಕಳಿಗೆ 3 ದಿನ ನಡೆದ ಚಿತ್ರಕಲೆ ಶಿಬಿರದಲ್ಲಿ ಚಿತ್ರಕಲೆ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಚಿತ್ರಕಲೆ ಬಿಡಿಸುವ ತರಬೇತಿ ಕೊಟ್ಟು ಚಿತ್ರಕಲೆಗಾರರ ಬಗ್ಗೆಯೂ ಜಾಗೃತಿ ಮೂಡಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ.ಚಂದ್ರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈ.ಕೆ.ಕ್ಯಾತೇಗೌಡ, ನಾಡಗೌಡ ವೈ.ಎಚ್‌.ಹನುಮಂತೇಗೌಡ,

-ಮುಖ್ಯ ಶಿಕ್ಷಕ ಎಸ್‌.ರಾಮೇಗೌಡ, ನನ್ನವ್ವ ಸಾಂಸ್ಕೃತಿಕ ಕಲಾ ತಂಡದ ಅಧ್ಯಕ್ಷ ವೈ.ಜಿ.ಮಹದೇವ, ನೆಹರು ಯುವ ಕೇಂದ್ರದ ಸ್ವಯಂ ಸೇವಕ ನಾಗರಾಜು, ಮುಖಂಡರಾದ ವೈ.ಎನ್‌.ಕೃಷ್ಣಪ್ಪ, ವೈ.ಎ.ಪುಟ್ಟರಾಜು, ಬೋರೇಗೌಡ, ಸಹ ಶಿಕ್ಷಕರಾದ ಎನ್‌.ರತ್ನ, ಗಾಯತ್ರಿ, ಮೀನಾಕ್ಷಿ, ರೇಷ್ಮಾ ಸುಲ್ತಾನ ಹಾಗೂ ವಿದ್ಯಾರ್ಥಿಗಳು ಇದ್ದರು.

ನನ್ನವ್ವ ಕಲಾ ತಂಡ ಪ್ರಥಮ ಬಾರಿಗೆ ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಚಿತ್ರಕಲೆ ಶಿಬಿರವನ್ನು ಮಕ್ಕಳಿಗೆ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಜಾಗತೀಕರಣದಲ್ಲೂ ಚಿತ್ರಕಲೆ ತನ್ನತನವನ್ನು ಉಳಿಸಿಕೊಂಡಿರುವುದು ಶಕ್ತಿ ಸಾಮರ್ಥ್ಯ ತೋರಿಸುತ್ತದೆ.
-ವೈ.ಎನ್‌.ಶಂಕರೇಗೌಡ, ಯಾಚೇನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ   

Advertisement

Udayavani is now on Telegram. Click here to join our channel and stay updated with the latest news.

Next