Advertisement

ದೇಶದ ಬೆಳವಣಿಗೆಗೆ ಕಲೆ ಸಂಸ್ಕೃತಿ, ಸಾಹಿತ್ಯ ಅಗತ್ಯ: ಕೃಷ್ಣಯ್ಯ ಮಡಿಕಟ್ಟು

12:22 PM Feb 08, 2022 | Team Udayavani |

ಕಲಬುರಗಿ: ದೇಶದ ಬೆಳವಣಿಗೆ ಆರ್ಥಿಕತೆ ಎಷ್ಟು ಮುಖ್ಯವೋ ಕಲೆ ಸಂಸ್ಕೃತಿ ಮತ್ತು ಸಾಹಿತ್ಯವು ಅಷ್ಟೆ ಮುಖ್ಯ ಎಂದು ನಿವೃತ್ತ ಎಂಜಿನಿಯರ್‌ ಕೃಷ್ಣಯ್ಯ ಮಡಿಕಟ್ಟು ನುಡಿದರು.

Advertisement

ಸಂಜಯಗಾಂಧಿ ನಗರದ ಶಿವಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಹಮ್ಮಿಕೊಂಡ ವೀರಸೋಮೇಶ್ವರ ಸಾಹಿತ್ಯ, ಸಾಂಸ್ಕೃತಿಕ ಸಂಘದ ವತಿಯಿಂದ ಸಂಗೀತ ವೈಭವ ಹಾಗೂ ವೀರಸೋಮೇಶ್ವರ ಸಂಪದ ಪ್ರಶಿಸ್ತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕ್ಷೇತ್ರವು ಬೆಳೆದರೆ ಮಾತ್ರ ಸಮಾಜ ಸಮತೋಲನವಾಗಿರುತ್ತದೆ. ಇಲ್ಲದಿದ್ದರೇ ಸಮಾಜದ ಬೆಳವಣಿಗೆಯಲ್ಲಿ ಯಾವುದೇ ಬದಲಾವಣೆ ಗೋಚರಿಸುವುದಿಲ್ಲ ಎಂದು ಹೇಳಿದರು.

ಸೋಮಶೇಖರ ಬೆಳಮಗಿ, ವಿಶ್ವರಾಧ್ಯ ಹಿರೇಮಠ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬಾಬುರಾವ್‌ ಕೋಬಾಳ, ಸಂಸ್ಥೆಯ ಅಧ್ಯಕ್ಷರಾದ ಸಿದ್ರಾಮಪ್ಪಾ ಅಲಗೂಡಕರ್‌, ಶರಣಪ್ಪ ಕಣ್ಣಿ ಇದ್ದರು.

ಬಸವರಾಜ ಶಿಲವಂತ ಅಂಬಲಗಿ, ನೀಲಕಂಠ ಪಾಟೀಲ ಬೆಳಮಗಿ, ಜಗನ್ನಾಥ ಚೆಂಗಟಿ, ರಾಚಯ್ಯ ಸ್ವಾಮಿ ರಟಕಲ್‌, ಸೈದಪ್ಪಾ ಚೌಡಾಪುರ, ಚೇತನ ಬೀದಿಮನಿ, ಶಿವಕುಮರ ಪಾಟೀಲ ಬೇಡಜುರ್ಗಿ, ಕವಿರಾಜ ಪಾಟೀಲ, ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಬುರಾವ ಕೋಬಾಳ ಸ್ವಾಗತಿಸಿದರು. ಚೇತನ ಬಿ. ಕೋಬಾಳ ನಿರೂಪಿಸಿದರು. ಆಲಗೂಡಕರ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next