Advertisement

ಕಲೆ-ಸಂಸ್ಕೃತಿ ದೈವಸಂಭೂತ

12:22 PM Nov 30, 2018 | |

ಹುಮನಾಬಾದ: ಕಲೆ, ಸಂಸ್ಕೃತಿ ಜಾತಿ, ಧರ್ಮಗಳ ಎಲ್ಲೆ ಮೀರಿದವು. ಅವು ದೈವಸಂಭೂತವಾದವು ಎಂದು ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೇಶವರಾವ್‌ ತಳಘಟಕರ್‌ ಹೇಳಿದರು.

Advertisement

ಹಳ್ಳಿಖೇಡ(ಬಿ) ಗ್ರಾಮದಲ್ಲಿ ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ವಿವೇಕಾನಂದ ಯುವಶಕ್ತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮಾಭಿವೃದ್ಧಿಯಿಂದಲೇ ರಾಮ ರಾಜ್ಯ ನಿರ್ಮಾಣ ಎನ್ನುವ ಮಹಾತ್ಮ ಗಾಂಧೀಜಿ ಅವರ ಆಶಯ ಸಂಸ್ಕೃತಿ, ಸಂಪ್ರದಾಯ ಉಳಿಸಿ, ಬೆಳೆಸಿದಲ್ಲಿ ಭಾರತ ಮತ್ತೂಮ್ಮೆ ವಿಶ್ವದ ಗಮನ ಸೆಳೆಯಲು ಸಾಧ್ಯ. ಜಿಲ್ಲಾ ಮಟ್ಟಕ್ಕೆ ಸೀಮಿತಗೊಂಡಿದ್ದ ಇಂಥ ಕಾರ್ಯಕ್ರಮವನ್ನು ಚಿಕ್ಕ ಪಟ್ಟಣದಲ್ಲಿ ಆಯೋಜಿಸಿರುವುದು ಆರೋಗ್ಯಪೂರ್ಣ ಬೆಳವಣಿಗೆ ಎಂದರು. ಇಂಥ ಕಾರ್ಯಕ್ರಮಗಳು ಕೇವಲ ಪ್ರಚಾರಕ್ಕೆ ಸೀಮಿತಗೊಳ್ಳದೇ ನಿಜಾಚರಣೆಯಲ್ಲಿ ಬರಬೇಕು ಎಂದು ಹೇಳಿದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಶಕ್ತಿ ಬಳಕೆಯಾದರೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸುಮನ್‌ ಸಹೋದರಿ ಮಾತನಾಡಿ, ಇಂದಿನ ಯುವಜನರನ್ನು ಕೇವಲ ಸಾಕ್ಷರರನ್ನಾಗಿಸಿದರೆ ಸಾಲದು. ಉತ್ತಮ ಸಂಸ್ಕಾರ ಹಾಗೂ ನೈತಿಕ ಮೌಲ್ಯ ತುಂಬುವುದು ಅತ್ಯಂತ ಅವಶ್ಯ ಎಂದರು.
 
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಪ್ರಭುಲಿಂಗ ಬಿರಾದಾರ, ಬಸವತೀರ್ಥ ವಿದ್ಯಾಪೀಠ ಪ್ರಾಥಮಿಕ ಶಾಲೆಯ ಮುಖ್ಯಗುರು ಗುಂಡಯ್ಯ ತೀರ್ಥಾ, ನಿವೃತ್ತ ಶಿಕ್ಷಕ ಬಸವರಾಜ ವರವಟ್ಟಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಕ್ಷೀರ ಸಾಗರ, ಖುದ್ದುಸ್‌, ಬಸವತೀರ್ಥ ಶಿಕ್ಷಣ ಸಂಸ್ಥೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಸ್ತಾನ ಪಟೇಲ, ಪ್ರೌಢಶಾಲೆ ಮುಖ್ಯಗುರು ಚಂದ್ರಕಾಂತ ಬಿರಾದಾರ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತ ರಿಯಾಜ್‌ಪಾಶಾ ಕೊಳ್ಳುರ್‌ ಇತರರು ವೇದಿಕೆಯಲ್ಲಿದ್ದರು. ಸಂಜನಾ ಸಂಗಡಿಗರು ಪ್ರಾರ್ಥಿಸಿದರು. ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ತರಬೇತಿದಾರ ಡಾ|ಶಿವಕುಮಾರ ಸ್ವಾಗತಿಸಿದರು. ಸಂಗಮೇಶ ಪಾಟೀಲ ನಿರೂಪಿಸಿದರು. ಯುವ ಸ್ಪಂದನ ವಿಭಾಗದ ಆಪ್ತ ಸಮಾಲೋಚಕಿ ಜೈಶ್ರೀ ಮೇತ್ರೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next