Advertisement

ಈ ಫಾರ್ಮ್ ಹೌಸ್‌ನಲ್ಲಿ  ಸಾಹಿತ್ಯ ಕಲರವ 

10:06 AM Oct 06, 2018 | |

ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾದ ಹಾಲಯ್ಯ, ಇದೀಗ ಫಾರ್ಮ್ ಹೌಸ್‌ ಮಾಡಿದ್ದಾರೆ. ಅಲ್ಲಿ ಸದಾ ಸಾಹಿತ್ಯ-ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ. ಚುಕ್ಕಿ ಚಿತ್ರ ಕಲಾವಿದರೂ ಆಗಿರುವ ಹಾಲಯ್ಯ, ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. 

Advertisement

ಫಾರ್ಮ್ ಹೌಸ್‌ ಅಂದಾಕ್ಷಣ ಕಣ್ಣು ಮುಂದೆ ಬರುವುದು ತೋಟ, ತೋಟದ ಮನೆ,  ಕೆಲಸದಾಳು, ಸಾಕು ಪ್ರಾಣಿ, ಪಕ್ಷಿ$ಗಳು… ಇಷ್ಟೇ.   ಬಹುತೇಕ ಫಾರ್ಮ್ ಹೌಸ್‌ಗಳು ಇರುವುದೂ ಹೀಗೆ.  ಆದರೆ ಫಾರ್ಮ್ ಹೌಸ್‌ನಲ್ಲಿ ಕಲೆಯ ಆಸ್ವಾದನೆ, ಸಾಹಿತ್ಯ ಓದು, ಸುಮಧುರ ಸಂಗೀತ….. ಹೀಗೆ ಒಂದಿಷ್ಟು ಹಸಿರು ಸಿರಿಯ ನಡುವೆ ಸಾಹಿತ್ಯ, ಕಲೆಯ ರಸದೌತಣ ಸವಿಯುವ ಅವಕಾಶ ಸಿಕ್ಕರೆ?  ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಉಜ್ಜಿನಿ ರಸ್ತೆಯ ಹುಣಸಿಕಟ್ಟೆ
ಕ್ರಾಸ್‌ನ ಆಯುಷ್‌ ಫಾರ್ಮ್ ಹೌಸ್‌ನಲ್ಲಿ ಹಣ್ಣು-ಹೂವು-ತರಕಾರಿ ಗಿಡಗಳಿಗಿಂತ, ಇಲ್ಲಿ ಸದ್ದಿಲ್ಲದೆ ನಡೆಯುವ ಕಲೆ-ಸಾಹಿತ್ಯದ ಕೃಷಿ ಗಮನಸೆಳೆಯುತ್ತೆ!.

ಈ  ಹಾದಿಯಲ್ಲಿ ಓಡಾಡುವ ವಾಹನಗಳ ಈ ಫಾರ್ಮ್ ಹೌಸ್‌ ಹತ್ತಿರ ಬಂದಾಕ್ಷಣ ಸ್ಲೋ ಆಗುತ್ತವೆ.  ಇಲ್ಲಿ ಸ್ಪೀಡ್‌ ಬ್ರೇಕರ್‌ ಇದೆ ಅಂತಲ್ಲ.  ತೋಟದ ರಕ್ಷಣೆಗಿರುವ ಬೇಲಿಗೆ ತೂಗು ಹಾಕಿರುವ ತೂಕದ ಮಾತುಗಳ ಬರೆಹಗಳ ಬೋರ್ಡ್‌ಗಳೇ ಇಲ್ಲಿ ಸ್ಪೀಡ್‌ ಬ್ರೇಕರ್‌ ಆಗಿವೆ!. ” ಅರಿತು ಬಾಳಿದರೆ ಸ್ವರ್ಗ, ಬೆರೆತು ಬಾಳಿದರೆ ಶೃಂಗಾರ, ಅರಿತು ಬೆರೆತು ಬಾಳಿದರೆ ಅದುವೇ ಜೀವನ ಸಾûಾತ್ಕಾರ..’ ಇಂಥ ಆಣಿಮುತ್ತುಗಳು ಜನರನ್ನು ಹಿಡಿದಿಟ್ಟು ಸೂಜಿಗಲ್ಲಿÉನಂತೆ ಸೆಳೆಯುತ್ತವೆ!

 ಫಾರ್ಮ್ ಹೌಸ್‌ ಒಳ ಹೊಕ್ಕರೆ ಸಾಕು ಅಚ್ಚರಿ, ಕೌತಕ, ಒಟ್ಟೊಟ್ಟಿಗೆ!. ಭಾಗಶಃ ಎಲ್ಲಾ ವಚನಕಾರರ ವಚನಗಳು, ಹಿ.ಮ ನಾಗಯ್ಯ ಸೇರಿದಂತೆ ನಾಡಿನ ಪ್ರಖ್ಯಾತ ಸಾಹಿತಿಗಳ ಕವನಗಳಿರುವ ಸುಮಾರು 70 ಬೋರ್ಡ್‌ಗಳಿವೆ.  ಇವುಗಳನ್ನೆಲ್ಲಾ ಓದಿ ಜೀರ್ಣಿಸಿಕೊಂಡು ಮನೆ ಕಡೆಗೆ ದೃಷ್ಟಿ ನೆಟ್ಟರೆ ಮನೆ ಮುಂದಿನ ಕಟ್ಟೆಗೆ ಹಿರಿಯರೊಬ್ಬರು ಕುಳಿತು,  ಬಿಳಿ ಕಾಗದದ ಮೇಲೆ ತದೇಕ ಚಿತ್ತದಲ್ಲಿ ಏನೋ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತೆ. ಕುತೂಹಲಕ್ಕೆ ಅವರ ಬಳಿ ನಡೆದರೆ ನಗು ಮೊಗದಿಂದ ಆತ್ಮೀಯವಾಗಿ ಬರಮಾಡಿಕೊಂಡು, “ರೀ ಅಮೃತ, ಅತಿಥಿಗಳು ಬಂದಿದ್ದಾರೆ. ನಿಂಬೆ ಶರಬತ್ತು ಕೊಡಿ… ಹೀಗೆ ಅವರ ಮಾತು ಮುಗಿಯುವಷ್ಟರಲ್ಲಿ ಮನೆ ಒಡತಿ ನಿಂಬೆ ಶರಬತ್ತು ತಂದು ಕೊಟ್ಟು.. “ಕುಳಿತುಕೊಳ್ಳಿ, ಅವರು ಚುಕ್ಕಿ ಚಿತ್ರ ಬಿಡಿಸುತ್ತಿದ್ದಾರೆ… ಎನ್ನುತ್ತಾರೆ!.  

Advertisement

ನೀವು ಶರಬತ್ತು ಕುಡಿಯುತ್ತಾ ಗೋಡೆ ಮೇಲೆ ಹಾಗೇ ಕಣ್ಣಾಡಿಸಿದರೆ, ಚುಕ್ಕಿ ಚಿತ್ರಗಳ ದೊಡ್ಡ ಭಂಡಾರವೇ ಕಣ್ಣಿಗೆ ಬೀಳುತ್ತೆ!. ನಾನಾ ರಂಗಗಳ ಸಾಧಕರು ಚುಕ್ಕಿ ಚಿತ್ರಗಳ ಅಂದದ ಚೌಕಟ್ಟಿನಲ್ಲಿ ಜಗಮಗಿಸುತ್ತಾರೆ!. ಯಾವ ಪ್ರಚಾರಕ್ಕೂ ತೆರೆದುಕೊಳ್ಳದೇ ತೋಟದ ಮನೆಯಲ್ಲಿ ತನ್ನ ಪಾಡಿಗೆ ತಾನು ಚುಕ್ಕಿ ಚಿತ್ರ ಬಿಡಿಸುವಲ್ಲಿ ಕಳೆದು ಹೋಗಿರುವ ಹಿರಿಯ ಜೀವಿ ಹಿ.ಮ. ಹಾಲಯ್ಯನವರು. ಶಿಕ್ಷಕರಾಗಿ ಸೇವೆ ಆರಂಭಿಸಿ, ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರಾಗಿ, ಈಗ ವಿಶ್ರಾಂತಿ ಜೀವನ ನಡೆಸುತ್ತಿರುವ ಹಿ,ಮ ಹಾಲಯ್ಯನವರಿಗೆ ಭರ್ತಿ  ಎಪತ್ತೆ„ದು ವರ್ಷ.

ಸ್ಟೆಪ್ಪಿಂಗ್‌ ಪೇಟಿಂಗ್‌ನಿಂದ ಸ್ಟೆಪ್‌ ಔಟ್‌..
ಹಾಲಯ್ಯನವರು ಚುಕ್ಕೆ ಚಿತ್ರ ಕಲಾವಿದ ಆಗುವ ಮುನ್ನ ಸ್ಟೆಪ್ಪಿಂಗ್‌ ಪೌಡರ್‌ ಬಳಸಿ ಚಿತ್ರಗಳನ್ನು ಬಿಡಿಸುತ್ತಿದ್ದರು. ವಾಟರ್‌ ಪೇಟಿಂಗ್‌ ಮಾಡುವ ಗೀಳೂ ಅವರಿಗಿತ್ತು. ಪ್ರಾರಂಭದಲ್ಲಿ ಕರಾವಳಿ, ಮಲೆನಾಡಿನಲ್ಲಿದ್ದ ತಮ್ಮ, ಪ್ರೀತಿಪಾತ್ರರ ಚಿತ್ರಗಳನ್ನು ಬಿಡಿಸಿದರು. ಗುಡಿಕೋಟೆಯ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಶಿಕ್ಷಕರಿದ್ದಾಗ ಶಾಲೆಗೆ ಪ್ರತಿ ತಿಂಗಳು ಬರುತ್ತಿದ್ದ ಇಂಗ್ಲೀಷ್‌ ಮ್ಯಾಗ್‌ಜಿನ್‌ನಲ್ಲಿ ಪ್ರಕಟವಾಗುತ್ತಿದ್ದ ವಿಜಾnನಿಗಳ ಚುಕ್ಕಿ ಚಿತ್ರಗಳು ಇವರನ್ನು ಆಕರ್ಷಿಸಿದವಂತೆ. ಭೌತವಿಜಾnನಿ ಡಾರ್ವಿನ್‌, ಇವರ ಕೈಯಲ್ಲಿ ಅರಳಿದ ಮೊದಲ ಚುಕ್ಕಿ ಚಿತ್ರ.  ನಂತರ ಇವರು ಹಿಂದುರಿಗಿ ನೋಡಲಿಲ್ಲ. ವಿದ್ಯಾರ್ಥಿಗಳು, ಆತ್ಮೀಯರು, ರಕ್ತಸಂಬಂಧಿಗಳು.. ಹೀಗೆ ಎಲ್ಲರೂ ಇವರಿಂದ ತಮ್ಮ ಚುಕ್ಕಿ ಚಿತ್ರಗಳನ್ನು ಬರೆಯಿಸಿಕೊಂಡು ಧನ್ಯರಾದವರೇ!.

  2004 ರಲ್ಲಿ ರಾಜಸ್ಥಾನದ ಮೌಂಟ್‌ ಅಬೂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 800 ಕ್ಕೂ ಹೆಚ್ಚು ಚಿತ್ರ ಕಲಾವಿದರ ಪೈಕಿ ಇವರು ಬಿಡಿಸಿದ “ಶಿವಬಾಬಾ ಚುಕ್ಕಿ ಚಿತ್ರ ಎಲ್ಲರ ಚಿತ್ತ ಕದ್ದಿತ್ತು!. 2000 ರಲ್ಲಿ  ಮಂಗಳೂರಿನ ಕರಾವಳಿ ಉತ್ಸವದಲ್ಲಿ ಇವರ “ಮದರ್‌ ಥೆರೆಸಾ ಚುಕ್ಕಿ ಚಿತ್ರಕ್ಕೆ ಕಲಾವಿದ ರಾಮಚಂದ್ರರಾವ್‌ ಫಿದಾ ಆಗಿ, ಭೇಷ್‌ ಎಂದಿದ್ದರಂತೆ!. ಅಲ್ಲದೆ, ಮಂಗಳೂರಿನ ಜಿಲ್ಲಾಧಿಕಾರಿಗಳು ಆ  ಕ್ಷಣವೇ ಜಿಲ್ಲೆಯ ಶಾಲಾ ಮಕ್ಕಳಿಗೆ ಚುಕ್ಕಿ ಚಿತ್ರಗಳ ತರಬೇತಿ ನೀಡುವಂತೆ ಅಹ್ವಾನಿಸಿ, ಮೂರು ದಿನದ ಕಾರ್ಯಗಾರ ಏರ್ಪಡಿಸಿಬಿಟ್ಟರು!. 

ಹಾಡಲೂ ಸೈ ಹಾಲಯ್ಯ ಮೇಷ್ಟ್ರು..
ಅಂದಹಾಗೆ, ಹಾಲಯ್ಯನವರು ಒಬ್ಬ ಒಳ್ಳೆಯ ಹಾಡುಗಾರನೂ ಹೌದು.  ವಚನಗಳು, ಕವನಗಳು, ಚಿತ್ರ, ಭಕ್ತಿ, ಭಾವ ಗೀತೆಗಳು ಮುಖ್ಯವಾಗಿ ಘಂಠಸಾಲ ಅವರ ಹಾಡುಗಳನ್ನು ಹಾಡುವುದಲ್ಲದೇ, ಸ್ವತಃ ಸಂಗೀತ ಸಂಯೋಜನೆ ಮಾಡುವಷ್ಟು ನಿಪುಣರು! ಹಾಗೂ ನಟರೂ ಹೌದು. 

ಸಂಗೀತದ ಪಡಸಾಲೆ ಈ ಫಾರ್ಮ್ಹೌಸ್‌..!
ಫಾರ್ಮ್ಹೌಸ್‌ ಸಂಗೀತದ ಪಡಸಾಲೆ!. ಸಮಾನ ಮನಸ್ಕರು ಆಗ್ಗಾಗ್ಗೆ ಇಲ್ಲಿ ಸೇರಿ ಸಂಗೀತ ಕಛೇರಿ  ಏರ್ಪಡಿಸುತ್ತಾರೆ. ಹಾಲಯ್ಯನವರು ಹಾಡು, ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ನೆರೆದವರು ಇಂಪಾದ ಸಂಗೀತವನ್ನು ಆಲಿಸುತ್ತಾ ತಮ್ಮನ್ನು ತಾವು ಮರೆಯುತ್ತಾರೆ! ಈ ಫಾರ್ಮ್ ಹೌಸ್‌ಗೆ ಶಾಲಾ ಮಕ್ಕಳು, ಸಾಹಿತ್ಯ, ಕಲೆ, ಸಂಗೀತಾಸಕ್ತರು ಭೇಟಿ ನೀಡಿ ಸಾಹಿತ್ಯದ ರಸದೌತಣ ಸವಿಯುತ್ತಾರೆ.  

“” ನನಗೆ ಮೊದಲಿನಿಂದಲೂ ರಂಗಭೂಮಿ, ಸಂಗೀತ, ಸಾಹಿತ್ಯ, ಕಲೆ.. ಎಲ್ಲಿಲ್ಲದ ಹುಚ್ಚು. ಈ ಕ್ಷೇತ್ರದಲ್ಲಿ ಬೆಳೆಸಿಕೊಂಡ ನಂಟನ್ನು ಉಳಿಸಿಕೊಂಡಿದ್ದೇನೆ. ಜೊತೆಗೆ ತೋಟ ಮಾಡಿದ್ದೇನೆ. ಇದರ ಸಾಂಗತ್ಯದಿಂದಲೇ ಬದುಕು ರಸವತ್ತಾಗಿದೆ. ಸಂತೋಷ, ಸಂತೃಪ್ತಿ ಸಿಕ್ಕಿದೆ… ಎನ್ನುತ್ತಾರೆ ಹಿ.ಮ ಹಾಲಯ್ಯ. 

ಸ್ವರೂಪಾನಂದ ಎಂ. ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next