Advertisement
ಅರ್ಷದ್ ವಾರ್ಸಿ ಅವರು ಗೋಲ್ ಮಾಲ್ ಚಿತ್ರದ ದೃಶ್ಯವೊಂದನ್ನು ಟ್ವೀಟ್ ಮಾಡಿ, ಯುದ್ಧದ ಸನ್ನಿವೇಶವನ್ನು ತುಲನೆ ಮಾಡಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವರು ಟ್ವೀಟ್ ಮಾಡಿ ನಟನ ವಿರುದ್ಧ ಖಂಡನೆ ವ್ಯಕ್ತಪಡಿಸಿ, ಯುದ್ಧವನ್ನು ಸಂಭ್ರಮಿಸುವ, ಹಾಸ್ಯ ಮಾಡುವ ಸಮಯ ಇದಲ್ಲ ಎಂದು ಬರೆದಿದ್ದರು.
ಹಾಸ್ಯ ಮಾಡಲು ಇದು ಸರಿಯಾದ ಸಮಯವಲ್ಲ ಸರ್…ಯುದ್ಧವು ತುಂಬಾ ಅಪಾಯಕಾರಿ ಸನ್ನಿವೇಶವಾಗಿದೆ…ನಾವು ಗೇಲಿ ಮಾಡಬಾರದು ಎಂದು ಹಲವಾರು ಮಂದಿ ಬರೆದಿದ್ದಾರೆ. ಆಕ್ರೋಶ ವ್ಯಕ್ತವಾದ ಬಳಿಕ ಅರ್ಷದ್ ವಾರ್ಸಿ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.