ಪ್ಯಾರಿಸ್: ಪ್ಯಾರಾಲಿಂಪಿಕ್ಸ್‌ನ ಪುರುಷರ 10 ಮೀ. ಏರ್ ರೈಫಲ್ ಎಸ್‌ಎಚ್1 ವಿಭಾಗದಲ್ಲಿ ಭಾರತದ ಸ್ವರೂಪ್ ಮಹಾವೀರ್ 14ನೇ ಸ್ಥಾನ ಪಡೆದರು. 613.4 ಅಂಕ ಪಡೆದಿರುವ ಅವರು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಪ್ಯಾರಾ ಸೈಕ್ಲಿಂಗ್ ಟ್ರ್ಯಾಕ್ ವಿಭಾಗದಲ್ಲಿ ಮಹಿಳೆಯರ ಸಿ1-3 ಟೈಮ್ ಟ್ರಯಲ್‌ನಲ್ಲಿ ಸ್ಪರ್ಧಿಸಿದ್ದ ಜ್ಯೋತಿ ಗದೆರಿಯ ಕೂಡ 11ನೇ ಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶಿಸುವಲ್ಲಿ ಎಡವಿದ್ದಾರೆ. ಪುರುಷರ ಸಿ1-3 1000 ಮೀ. ಟೈಮ್ ಟ್ರಯಲ್‌ನಲ್ಲಿ ಸ್ಪರ್ಧಿಸಿದ್ದ ಅರ್ಷದ್ ಶೈಕ್ ಸಹ 17ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದ್ದಾರೆ.
ಪ್ಯಾರಾ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ತರುಣ್ ಧಿಲ್ಲಾನ್ ಫ್ರಾನ್ಸ್‌ನ ಲ್ಯೂಕಸ್ ಮಝುರ್ ವಿರುದ್ಧ 0-2 ಅಂತರದಿಂದ ಸೋತು ಸೆಮಿಫೈನಲ್‌ಗೇರುವಲ್ಲಿ ವಿಫಲರಾಗಿದ್ದಾರೆ. ಮಹಿಳಾ ಸಿಂಗಲ್ಸ್ ಎಸ್‌ಯು5 ಗ್ರೂಪ್ ಹಂತದ ಸ್ಪರ್ಧೆಯಲ್ಲಿ ಚೀನಾದ ಕ್ವಿಯು ಕ್ರಿಯಾ ಯಾಂಗ್ ವಿರುದ್ಧ 15-21, 7-21 ಅಂತರದಿಂದ ಸೋತು ನಿರಾಸೆ ಅನುಭವಿಸಿದ್ದಾರೆ.