Advertisement

ಬಂದಿದೆ ಕಡಿಮೆ ದರದ ಇಯರ್‌ ಫೋನ್‌ಗಳು

10:23 PM Dec 11, 2020 | Karthik A |

ಮಣಿಪಾಲ: ಪೋರ್ಟೆಬಲ್ ಡಿಜಿಟಲ್ ಉತ್ಪನ್ನ ತಯಾರಕರ ಕಂಪೆನಿ ಆರೋ ಭಾರತದಲ್ಲಿ ಹೊಸ ಎಂಎಕ್ಸ್ ವೈಯರ್ಡ್‌ ಇಯರ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪೆನಿಯು ಈ ಸರಣಿಯಲ್ಲಿ 10 ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಹತ್ತೂ ಮಾದರಿಗಳು ಒಂದಕ್ಕೊಂದು ಸಂಪೂರ್ಣ ಭಿನ್ನವಾಗಿವೆ. ಇವುಗಳಿಗೆ ಕಂಪೆನಿಯು MX01, MX02, MX03, MX04, MX05, MX06, MX07, MX08, MX09 ಮತ್ತು MX10 ಎಂದು ಹೆಸರಿಸಿದೆ.

Advertisement

Arrow ಸಂಸ್ಥೆಯ ಎಂಎಕ್ಸ್ ವೈರ್ಡ್ ಇಯರ್‌ಫೋನ್‌ಗಳು ಕೈಗೆಟುಕುವ ದರದಲ್ಲಿರಲಿದೆ. ಅವುಗಳಮ ಬೆಲೆ 149 ರೂ.ರಿಂದ 199 ರೂ. ವರೆಗೆ ಪ್ರಾರಂಭವಾಗುತ್ತವೆ. ದೇಶಾದ್ಯಂತದ ಎಲ್ಲ ಪ್ರಮುಖ ಮಳಿಗೆಗಳೊಂದಿಗೆ ಆನ್‌ಲೈನ್‌ನಲ್ಲಿಯೂ ಖರೀದಿಸಬಹುದಾಗಿದೆ.

ಈ ಎಲ್ಲ ಇಯರ್‌ಫೋನ್‌ಗಳು ಬಲವಾದ ಬಾಸ್ ಮತ್ತು ಸರೌಂಡ್ ಸೌಂಡ್ ಗುಣಮಟ್ಟವನ್ನು ಹೊಂದಿದೆ. ಕಿವಿಗೆ ಚೆನ್ನಾಗಿ ಹೊಂದುವ ರೀತಿಯಲ್ಲಿ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಹಗುರವಾಗಿದ್ದು, ನೋಡಲು ಅಷ್ಟೇ ಸೊಗಸಾಗಿದೆ. ನಾಯ್ಸ್‌ ಫ್ರೂಫ್‌ನೊಂದಿಗೆ ಉತ್ತಮ ಗುಣಮಟ್ಟದ ಬಾಸ್ ಸ್ಟಿರಿಯೋ ಧ್ವನಿಯನ್ನು ಒದಗಿಸಲಿದೆ.

ಇದರ ಕೇಬಲ್‌ಗಳು ಅಷ್ಟೇ ಸೊಗಸಾಗಿದ್ದು ಯಾವುದೇ ಹಾನಿಯಾಗದಂತೆ ವಿನ್ಯಾಸ ಮಾಡಲಾಗಿದೆ. ಈ ಇಯರ್‌ಫೋನ್‌ಗಳು ಅಂತರ್ನಿರ್ಮಿತ ಮೈಕ್ರೊಫೋನ್, ಹ್ಯಾಂಡ್ಸ್-ಫ್ರೀ ಮೂಡ್‌ ಕರೆ ಮಾಡಲು ಅನುವು ಮಾಡಿಕೊಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next