Advertisement

ಪ್ರವಾಹದಲ್ಲಿ ಸಿಲುಕಿರುವ ಸಹಾಯಕ್ಕೆ ಸೈನಿಕರ ಆಗಮನ

10:23 AM Aug 07, 2019 | Suhan S |

ಜಮಖಂಡಿ: ವಿಪರೀತ ಮಳೆಯಿಂದಾಗಿ ಜಮಖಂಡಿ ತಾಲೂಕಿನಲ್ಲಿ ಹೆಚ್ಚಿನ ಪ್ರವಾಹದಿಂದ ಮಂಗಳವಾರ ಸಂಜೆ ಪ್ರವಾಹ ಭೀತಿ ಎದುರಾಗಿದೆ. 10ಕ್ಕೂ ಹೆಚ್ಚು

Advertisement

ರಸ್ತೆಗಳು ಜಲಾವೃತ್ತಗೊಂಡು 4 ರಸ್ತೆಗಳು ನಡುಗಡ್ಡೆಯಂತಾಗಿ ಎರಡು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದು ಜನ-ಜಾನುವಾರಗಳನ್ನು ಸ್ಥಳಾಂತರಿಸಲು ಸೇನಾಪಡೆ ಆಗಮಿಸಿದೆ.

ಪ್ರವಾಹ ಎದುರಿಸಲು ತಾಲೂಕಾಡಳಿತದ ಜೊತೆಯಲ್ಲಿ 103 ಸೈನಿಕರು, 105 ಅರೇ ಸೈನಿಕರು, 31 ಅಗ್ನಿಶಾಮಕ ದಳಗಳ ಪ್ರವಾಹ ಪೀಡಿತ ಜನರ ರಕ್ಷಣೆಗೆ ಮುಂದಾಗಿದ್ದು, ಒಟ್ಟು ಆರು ತಂಡಗಳನ್ನು ರಚನೆಯಾಗಿವೆ. ಅದರಲ್ಲಿ ಹಿಪ್ಪರಗಿ ಗ್ರಾಮದ ತೋಟದ ಮನೆಗಳಲ್ಲಿ ವಾಸಿಸುವ ಜನರು ಸ್ಥಳಾಂತರಗೊಳ್ಳಲು ನಿರಾಕರಿಸಿದ್ದರಿಂದ 18 ಜನ ಸೈನಿಕರನ್ನು ಕಳುಹಿಸಿ 25 ಕುಟುಂಬದ 75 ಜನರನ್ನು ಸ್ಥಳಾಂತರ ಮಾಡಲಾಯಿತು.

ಟಕ್ಕಳಕಿ ಗ್ರಾಮದಲ್ಲಿ ಮೂರು ನಡುಗಡ್ಡೆಗಳಾಗಿದ್ದು, ಅಲ್ಲಿ 64 ಕುಟುಂಬಗಳ 433 ಜನರು, 300 ಜಾನುವಾರು ಗಳನ್ನು ನಾಗನೂರ ಪುರ್ನವಸತಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಕೆ.ಡಿ ಜಂಬಗಿ, ಹಿರೇಪಡಸಲಗಿ, ಟಕ್ಕೋಡ ಗ್ರಾಮಗಳಲ್ಲಿ ಐದು ಜನರ ಸೈನಿಕರ ತಂಡ ತಳವೂರಿದೆ. ತಾಲೂಕಿನ ಆಲಗೂರು, ಚಿಕ್ಕಪಡಸಲಗಿ, ಹಿರೇಪಡಸಲಗಿ, ಹಿಪ್ಪರಗಿ ಸಹಿತ 11 ಸ್ಥಳಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ತಾಲೂಕಿನ 829 ಕುಟುಂಬಗಳ ಪೈಕಿ 204 ಕುಟುಂಬಸ್ಥರು ತಮ್ಮ ಸಂಬಂಕರ ಮನೆಗಳಲ್ಲಿ ಆಶ್ರಯ ಪಡೆದರೆ, ಉಳಿದ 3850 ಜನರಲ್ಲಿ 2460 ನಿರಾಶ್ರಿತರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಬುಧವಾರ ಮತ್ತೇ ಹೆಚ್ಚಿನ ಪ್ರಮಾಣದಲ್ಲಿ ಮೇವು ಸಂಗ್ರಹವಾಗಲಿದ್ದು, ಪ್ರವಾಹ ಪೀಡಿತ ಗ್ರಾಮಗಳಿಗೆ ವಿತರಿಸುವ ವ್ಯವಸ್ಥೆ ಚುರುಕಿಗೊಳ್ಳಲಿದ್ದು, ರೈತರ 1 ದನಗಳಿಗೆ ಪ್ರತಿನಿತ್ಯ 6 ಕೆಜಿ ಮೇವು ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next