Advertisement

ಪ್ರಧಾನಿ ಮೋದಿ ಆಗಮನ; ಪುಣೆಯಲ್ಲಿ ‘ಕ್ರೈಮ್‌ ಮಿನಿಸ್ಟರ್‌’ ಎಂದು ಪೋಸ್ಟರ್‌

10:57 PM Jul 31, 2023 | Team Udayavani |

ಮುಂಬೈ: ಲೋಕಮಾನ್ಯ ತಿಲಕ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆಂದು ಮಹಾರಾಷ್ಟ್ರದ ಪುಣೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ಆಕ್ರೋಶ ವ್ಯಕ್ತ ಪಡಿಸಿದ್ದು, ಪ್ರಧಾನಿ ಅವರನ್ನೇ ಕ್ರೈಮ್‌ ಮಿನಿಸ್ಟರ್‌ ಎಂದು ಕರೆದಿದೆ.

Advertisement

ಮಂಗಳವಾರ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಯುವಘಟಕವು ಸಂಪೂರ್ಣ ನಗರದಲ್ಲಿ ಮೋದಿ ವಿರುದ್ಧ ಫ‌ಲಕಗಳನ್ನು ಅಳವಡಿಸಿದೆ. ಅದರಲ್ಲಿ “ಗೋ ಬ್ಯಾಕ್‌ ಮಿಸ್ಟರ್‌ ಕ್ರೈಂ ಮಿನಿಸ್ಟರ್‌’, “ಮಿಸ್ಟರ್‌ ಪ್ರೈಮ್‌ ಮಿನಿಸ್ಟರ್‌ ಗೋ ಟು ಮಣಿಪುರ ಆ್ಯಂಡ್‌ ಫೇಸ್‌ ದಿ ಪಾರ್ಲಿಮೆಂಟ್‌’ ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿರುವುದು ವರದಿಯಾಗಿದೆ. ಪೋಸ್ಟರ್‌ಗಳನ್ನು ತೆಗೆದುಹಾಕಲು ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next