Advertisement
ಬಾಂಗ್ಲಾ ವಿರುದ್ಧವೂ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವುದು ನ್ಯೂಜಿಲ್ಯಾಂಡಿನ ಅಲೋಚನೆಯಾಗಿದೆ. ಸದ್ಯ ನ್ಯೂಜಿ ಲ್ಯಾಂಡ್, ಭಾರತ ಮತ್ತು ಪಾಕಿಸ್ಥಾನ ತಲಾ ನಾಲ್ಕು ಅಂಕಗಳೊಂದಿಗೆ ಇದ್ದರೂ ಉತ್ತಮ ರನ್‌ಧಾರಣೆಯ ಆಧಾರ ದಲ್ಲಿ ನ್ಯೂಜಿಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ವಿರುದ್ಧ ಗೆದ್ದರೆ ತಂಡದ ಅಗ್ರಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ.
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿಲಿಯಮ್ಸನ್ ಇದೀಗ ಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಅವರ ಆಗಮನದಿಂದ ತಂಡ ಎರಡು ವಿಷಯಗಳಲ್ಲಿ ಬಹ ಳಷ್ಟು ಲಾಭ ಪಡೆಯಲಿದೆ. ಮೊದಲನೆ ಯದಾಗಿ ಅನುಭವಿ ನಾಯಕ ರಾಗಿರುವ ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಮರ್ಥರಾಗಿದ್ದಾರೆ. ಅವರು ಸ್ಪಿನ್ ದಾಳಿಯನ್ನು ಅದ್ಭುತ ರೀತಿಯಲ್ಲಿ ಎದುರಿಸಲು ಸಮರ್ಥ ರಿರುವುದರಿಂದ ನ್ಯೂಜಿಲ್ಯಾಂಡ್ ಇಲ್ಲಿ ಮೇಲುಗೈ ಸಾಧಿಸಬಹುದು. ವಿಲಿಯಮ್ಸನ್ ಅವರು ನ್ಯೂಜಿ ಲ್ಯಾಂಡಿನ ಆರಂಭದ ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ವನ್ನು ಕಳೆದುಕೊಂಡಿದ್ದರು. ಈ ಎರಡು ಪಂದ್ಯಗಳಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನಡೆಸಿದ್ದರು.
Related Articles
ಹೆಬ್ಬರಳು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿರಿಯ ವೇಗಿ ಟಿಮ್ ಸೌಥಿ ಅವರು ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಲಭ್ಯರಿರುವುದಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಅವರು ಗಾಯಗೊಂಡಿದ್ದರು.
Advertisement
ಗಾಯದಿಂದಾಗಿ ಪ್ರಯಾಣ ಮಾಡು ವುದು ಹೆಚ್ಚಾಗಿದೆ. ಆದರೂ ವಿಶ್ವಕಪ್ ತಂಡಕ್ಕೆ ಮರಳಲು ಉತ್ಸುಕನಾಗಿದ್ದು ಪಂದ್ಯದಲ್ಲಿ ಆಡಲು ಎದುರು ನೋಡು ತ್ತಿದ್ದೇನೆ ಎಂದು ವಿಲಿಯಮ್ಸನ್ ಹೇಳಿದರು. ಟಿಮ್ ಉತ್ತಮ ರೀತಿ ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಬಾಂಗ್ಲಾ ವಿರುದ್ಧ ಆಡುವುದಿಲ್ಲ ಎಂದು ವಿಲಿಯಮ್ಸನ ಸ್ಪಷ್ಟಪಡಿಸಿದರು.
ವಿಲಿಯಮ್ಸನ್ ಅವರ ಆಗಮನಿ ದಿಂದ ದೊಡ್ಡ ಸಮಸ್ಯೆಯೊಂದು ಎದುರಾಗಿದೆ. ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಮೊದಲೆರಡು ಪಂದ್ಯ ಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ ರಚಿನ್ ರವೀಂದ್ರ ಅವರು ಶತಕ ಮತ್ತು ಅರ್ಧಶತಕ ಸಿಡಿಸಿ ಅಮೋಘ ನಿರ್ವಹಣೆ ನೀಡಿದ್ದರು. ಇದೀಗ ವಿಲಿಯಮ್ಸನ್ ಅವರಿಗಾಗಿ ಯಾರನ್ನು ಕೈಬಿಡಬಹುದು ಎಂಬ ಬಗ್ಗೆ ಕಿವೀಸ್ ಆಡಳಿತ ಬಹಳಷ್ಟು ಚರ್ಚೆ ಮಾಡುತ್ತಿದೆ.ನ್ಯೂಜಿಲ್ಯಾಂಡಿನ ಅಗ್ರ ಕ್ರಮಾಂಕ ಬಲಿಷ್ಠವಾಗಿದೆ. ಯಂಗ್, ಡೇವನ್ ಕಾನ್ವೇ ತಮು¤ ಡ್ಯಾರಿಲ್ ಮಿಚೆಲ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಇಲ್ಲಿನ ಚಿದಂಬರಂ ಪಿಚ್ ಸ್ಪಿನ್‌ಗೆ ಹೆಚ್ಚು ನೆರವು ನೀಡುತ್ತಿರುವ ಕಾರಣ ದೊಡ್ಡ ಮೊತ್ತ ದಾಖಲಿಸಲು ಕಷ್ಟಸಾಧ್ಯ ಎನ್ನಲಾಗಿದೆ. ಹಾಗಾಗಿ ಬಾಂಗ್ಲಾದ ವೈವಿಧ್ಯಮಯ ಸ್ಪಿನ್ ದಾಳಿಯನ್ನು ಎದುರಿಸಲು ಸಮರ್ಥರಿರುವ ಆಟಗಾರ ರನ್ನು ಕಣಕ್ಕೆ ಇಳಿಸಲು ನ್ಯೂಜಿಲ್ಯಾಂಡ್ ಯೋಚಿಸುವ ಸಾಧ್ಯತೆಯಿದೆ. ಈ ಪಿಚ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಸ್ಪಿನ್ ಬೌಲರ್‌ಗಳು ಆಸ್ಟ್ರೇಲಿಯ ವಿರುದ್ದ ಆರು ವಿಕೆಟ್ ಉರುಳಿಸಿದ್ದರು.
ಬಾಂಗ್ಲಾದ ನಾಯಕ ಶಕಿಬ್ ಉಲ್ ಹಸನ್, ಮಹೆದಿ ಹಸನ್ ಮತ್ತು ಮೆಹಿದಿ ಹಸನ್ ಮಿರಾಜ್ ಕಳೆದ ಎರಡು ಪಂದ್ಯಗಳಲ್ಲಿ ಒಟ್ಟಾರೆ 11 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಇಲ್ಲಿನ ಪಿಚ್ ಸ್ಪಿನ್‌ಗೆ ನೆರವಾಗುವ ಕಾರಣ ಈ ಮೂವರು ಉತ್ತಮ ದಾಳಿ ಸಂಘಟಿಸುವ ಸಾಧ್ಯತೆಯಿದೆ. ಹೀಗಾಗಿ ನ್ಯೂಜಿಲ್ಯಾಂಡ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಬ್ಯಾಟಿಂಗ್ ಮಿಂಚಬೇಕು
ಉತ್ತಮ ಸ್ಪಿನ್ನರ್‌ಗಳನ್ನು ಒಳಗೊಂಡಿ ರುವ ಬಾಂಗ್ಲಾದೇಶವು ಬ್ಯಾಟಿಂಗ್ ನಲ್ಲಿ ಉತ್ತಮ ನಿರ್ವಹಣೆ ನೀಡಿದರೆ ನ್ಯೂಜಿಲ್ಯಾಂಡ್ ವಿರುದ್ಧ ಮೇಲುಗೈ ಸಾಧಿಸಬಹುದು. ಮಿಚೆಲ್ ಸ್ಯಾಂಟ್ನರ್ ತಂಡದಲ್ಲಿರುದರಿಂದ ನ್ಯೂಜಿಲ್ಯಾಂಡ್ ಎದುರಾಳಿಗೆ ಹೊಡೆತ ನೀಡಲು ಯೋಚಿ ಸುತ್ತಿದೆ. ಸ್ಯಾಂಟ್ನರ್ ಎರಡು ಪಂದ್ಯಗಳಿಂದ ಏಳು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಅವರ ದಾಳಿ ಯನ್ನು ಬಾಂಗ್ಲಾ ಎಚ್ಚರಿಕೆ ಯಿಂದ ಎದುರಿಸಬೇಕಾಗಿದೆ. ಅಪಾಯಕಾರಿ ಯಾಗಿ ದಾಳಿ ನಡೆಸಬಲ್ಲ ಸ್ಯಾಂಟ್ನರ್ ಬಾಂಗ್ಲಾಕ್ಕೆ ಸಿಂಹಸ್ವಪ್ನರಾಗುವ ಸಾಧ್ಯತೆ ಯಿದೆ. ಅವರಲ್ಲದೇ ಐಪಿಎಲ್‌ನಲ್ಲಿ ಆಡಿದ ಅನುಭವವಿರುವ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಲೂಕಿ ಫರ್ಗ್ಯುಸನ್ ಕೂಡ ಇಲ್ಲಿನ ಪಿಚ್‌ನಲ್ಲಿ ಉತ್ತಮ ದಾಳಿ ಸಂಘಟಿಸುವ ಸಾಧ್ಯತೆಯಿದೆ. ಹೀಗಾಗಿ ಶಕಿಬ್ ಸಹಿತ ಮುಶ್ಫಿಕರ್ ರಹೀಮ್, ಲಿಟನ್ ದಾಸ್ ಮತ್ತು ನಜ್ಮುಲ್ ಶಾಂಟೊ ಅವರು ಜವಾಬ್ದಾರಿಯಿಂದ ಆಡಬೇಕಾದ ಅಗತ್ಯವಿದೆ. 41 ಬಾರಿ ಮುಖಾಮುಖಿ
ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾ ದೇಶ ಒಟ್ಟಾರೆ 41 ಪಂದ್ಯಗಳಲ್ಲಿ ಆಡಿದ್ದು 30 ಬಾರಿ ನ್ಯೂಜಿಲ್ಯಾಂಡ್ ಜಯಭೇರಿ ಬಾರಿಸಿದೆ. 10 ಬಾರಿ ಬಾಂಗ್ಲಾದೇಶ ಗೆದ್ದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬರಲಿಲ್ಲ. 2019ರ ವಿಶ್ವಕಪ್‌ನ ಪಂದ್ಯ ವೊಂದ ರಲ್ಲಿ ನ್ಯೂಜಿಲ್ಯಾಂಡ್ ಬಾಂಗ್ಲಾ ವಿರುದ್ಧ 2 ವಿಕೆಟ್ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾ 244 ರನ್ ಗಳಿಸಿದ್ದರೆ ನ್ಯೂಜಿಲ್ಯಾಂಡ್ 8ಕ್ಕೆ 248 ರನ್ ಗಳಿಸಿ ಜಯ ಸಾಧಿಸಿತ್ತು.