Advertisement

Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ

08:51 PM Sep 06, 2024 | sudhir |
ವಿಜಯಪುರ : ವಿಜಯಪುರ ಜಿಲ್ಲೆಯ ಪೊಲೀಸರು ಅಂತರಾಜ್ಯ ಮನೆಗಳ್ಳತನ ಆರೋಪದಲ್ಲಿ ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಕಳ್ಳತನ ಮಾಡಲಾಗಿದ್ದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಶುಕ್ರವಾರ ನಗರದಲ್ಲಿರುವ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘಟನೆಯ ವಿವರ ನೀಡಿದ ಎಸ್ಪಿ ಋಷಿಕೇಶ ಭಗವಾನ್, ಮಹಾರಾಷ್ಟ್ರ ರಾಜ್ಯದಿಂದ ವಿಜಯಪುರ ಜಿಲ್ಲೆಗೆ ಬಂದು ಕಳ್ಳತನ ಮಾಡಿದ ಬಳಿಕ ಈ ಗುಂಪು ತವರು ರಾಜ್ಯಕ್ಕೆ ಪರಾರಿಯಾಗುತ್ತಿತ್ತು ಎಂದು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಳ್ಳತನ ಪತ್ತೆಗೆ ವಿಜಯಪುರ ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಜಿ.ಎಚ್.ತಳಕಟ್ಟಿ, ಇನ್ಸಪೆಕ್ಟರ್ ರಾಯಗೊಂಡ ಜಾನಾರ, ಆನಂದರಾವ್, ಪಿಎಸ್‍ಐ ಗಳಾದ ರವಿ ಯಡವಣ್ಣವರ, ಎನ್.ಎ.ಉಪ್ಪಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ನಗರದ ಹೊರ ಭಾಗದ ಬರಗಟಗಿ ತಾಂಡಾ ಬಳಿ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಳ ಕಳ್ಳರ ಕೈಚಳಕ ಪತ್ತೆಯಾಗಿದೆ.
ಬಂಧಿತರನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಾಮವಾಡಿ ನಿವಾಸಿ 55 ವರ್ಷದ ನಂದಾ ಉರ್ಫ ನಂದಾಬಾಯಿ ಗಾಯಕಡವಾಡ, ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಬ್ಯಾಗಳ ಮೂಲದ 35 ವರ್ಷದ ಗಣೇಶ ಜಾಧವ, ದಕ್ಷಿಣ ಸೋಲಾಪುರದ ಪಟವರ್ಧನ ಚಾಳ ನಿವಾಸಿ 35 ವರ್ಷದ  ಮಹದೇವ ಪಿಂಟು ಗಾಯಕವಾಡ ಹಾಗೂ ಸೋಲಾಪುರದ ರಾಮವಾಡಿ ಮೂಲದ 38 ವರ್ಷದ ಸುಂದರಾಬಾಯಿ ಮಾಣಿಕ ಜಾಧವ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಐದು ಕಡೆಗಳಲ್ಲಿ ಕಳ್ಳನ ಮಾಡಿರುವುದಾಗಿ ಒಪ್ಪಿಕೊಂಡಿರುವ ಬಂಧಿತರಿಂದ ಪೊಲೀಸರು 208 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಈ ಕಳ್ಳರ ತಂಡ ಕಳೆದ ಎರಡು ವರ್ಷಗಳಿಂದ ಕರ್ನಾಟಕ ರಾಜ್ಯದ ವಿಜಯಪುರ ನಗರದ ಶಿವಗಿರಿ ಪ್ರದೇಶ, ಡೋಮನಾಳ ಗ್ರಾಮ, ದೇವರಹಿಪ್ಪರಗಿ ಪಟ್ಟಣ, ತಿಕೋಟಾ ಬಸ್ ನಿಲ್ದಾಣಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಪೊಲೀಸರ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ತನಿಖಾ ತಂಡದ ಶ್ಲಾಘನೀಯ ಕಾರ್ಯಕ್ಕೆ ಪ್ರಸಂಶಾ ಪತ್ರ ನೀಡುವುದಾಗಿ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next